ಬೆಂಗಳೂರು ಅಕ್ಟೋಬರ್ 16: ದೇಶದ ಅತ್ಯಂತ ವಿಶ್ವಾಸಾರ್ಹ ಖಾಸಗಿ ಜೀವವಿಮಾ ಕಂಪನಿಯಾಗಿರುವ ಎಸ್‌ಬಿಐ ಲೈಫ್ ಇನ್ಸುರೆನ್ಸ್ ನಡೆಸಿದ ಸಮಗ್ರ ಗ್ರಾಹಕ ಸಮೀಕ್ಷೆ ವರದಿ ನೀಡಿದೆ.
ಶೇಕಡಾ 50ರಷ್ಟು ಭಾರತೀಯರು ಜೀವನಶೈಲಿ ರೋಗಗಳಿಗೆ (ಮಧುಮೇಹ, ಹೃದ್ರೋಗದಂತಹ) ಸಂಬಂಧಿಸಿದಂತೆ ಹಣಕಾಸಿನ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ ಎಂದು ಎಸ್‍ಬಿಐ ಲೈಫ್ ಇನ್ಸೂರೆನ್ಸ್ ವಲಯ-2 ರ ಅಧ್ಯಕ್ಷ ಎಂ. ಆನಂದ್ ಹೇಳಿದ್ದಾರೆ.
ಕೋವಿಡ್ ಬಳಿಕದ ಜಗತ್ತಿನಲ್ಲಿ ಹಣಕಾಸು ಸುರಕ್ಷತೆ ಬಗೆಗಿನ ಗ್ರಾಹಕರ ಪ್ರವೃತ್ತಿ ಬಗ್ಗೆ ಆಳವಾದ ಒಳನೋಟಗಳನ್ನು ಹೊಂದಿರುವ ಸಮೀಕ್ಷೆ ಇದಾಗಿದ್ದು, ನೀಲ್ಸನ್ ಕಂಪನಿ ಸಹಯೋಗದಲ್ಲಿ''ಆರ್ಥಿಕ ಪ್ರತಿರೋಧಕ ಶಕ್ತಿ'' ಎಂಬ ಸಮೀಕ್ಷೆಯನ್ನು ನಡೆಸಿತ್ತು. ದೇಶದ ಉದ್ದಗಲಕ್ಕೂ 13 ಪ್ರಮುಖ ನಗರಗಳ 2400 ಗ್ರಾಹಕರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ.
ಇದರಿಂದ ತಿಳಿದು ಬಂದ ಪ್ರಮುಖ ಅಂಶವೆಂದರೆ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರತ್ತ ಎಲ್ಲರ ಪ್ರಮುಖ ಆದ್ಯತೆಯಾಗಿದೆ.
ಮಾನಸಿಕ ಹಾಗೂ ದೈಹಿಕ ರೋಗನಿರೋಧಕ ಶಕ್ತಿ ಕಡಿಮೆ
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಒಂದಲ್ಲ ಒಂದು ರೀತಿಯಲ್ಲಿ ದೈಹಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದ್ದನ್ನು ದೃಢಪಡಿಸಿದ್ದಾರೆ. ವಾಸ್ತವವಾಗಿ 10 ಮಂದಿಯ ಪೈಕಿ 8 ಮಂದಿ ಭಾರತೀಯರು, ಒತ್ತಡದ ಅಂಶ ಮಾನಸಿಕ ಹಾಗೂ ದೈಹಿಕ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂಬ ಅರಿವು ಹೊಂದಿದ್ದಾರೆ.
ಎಸ್‍ಬಿಐ ಲೈಫ್ ವಲಯ-2ರ ಅಧ್ಯಕ್ಷ ಎಂ.ಆನಂದ್
''ಈ ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ಮಾತನಾಡಿದ ಎಸ್‍ಬಿಐ ಲೈಫ್ ವಲಯ-2ರ ಅಧ್ಯಕ್ಷ ಎಂ.ಆನಂದ್ ಅವರು ದೇಶದ ಉದ್ದಗಲಕ್ಕೂ ಕುಟುಂಬಗಳು ಕೋವಿಡ್ ಸಾಂಕ್ರಾಮಿಕ ರೋಗದ ಜೊತೆ ಬದುಕುವುದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಬಿಐ ಲೈಫ್ ಗ್ರಾಹಕರ ಸಮೀಕ್ಷೆ ಮೂಲಕ ವ್ಯಕ್ತಿಯ ಭವಿಷ್ಯವನ್ನು ಹಣಕಾಸಿನ ತುರ್ತು ಸಂಧರ್ಭಗಳಿಗೆ ಸಿದ್ದವಾಗಿರವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ'' ಎಂದರು.
ಹಣಕಾಸಿನ ಮೇಲೆ ಒತ್ತಡ ಹೇರುವಂತಹ ಅಂಶ
ಈ ಸಮೀಕ್ಷೆಯ ಮೂಲಕ ನಾವು ಜನರ ಹಣಕಾಸಿನ ಮೇಲೆ ಒತ್ತಡ ಹೇರುವಂತಹ ಅಂಶಗಳ ಬಗ್ಗೆಯೂ ಗ್ರಾಹಕರಲ್ಲಿ ವಿಚಾರಿಸಿದೆವು. ಮೊದಲನೆಯದಾಗಿ, ತೀವ್ರತರ ಕಾಯಿಲೆಗಳ ವಿರುದ್ಧ ಹಣಕಾಸು ಭದ್ರತೆ. ಎರಡನೆಯದಾಗಿ, ಕುಟುಂಬ ಸದಸ್ಯರು ಯಾವುದಾದರೂ ಜೀವನಶೈಲಿ ರೋಗಗಳಿಗೆ ಅಥವಾ ಕೋವಿಡ್-19 ಸೋಂಕಿಗೆ ತುತ್ತಾಗುವ ಸಾಧ್ಯತೆ. ಮೂರನೇಯದಾಗಿ ಕೆಲಸವನ್ನು ಅಥವಾ ಆದಾಯವನ್ನು ಕಳೆದುಕೊಳ್ಳುವುದು. ಈ ಪ್ರಮುಖ 3 ಅಂಶಗಳು ಜನರ ಹಣಕಾಸಿನ ಅಂಶಗಳ ಮೇಲೆ ಬಹಳ ಒತ್ತಡವನ್ನು ಹೇರುತ್ತವೆ.
ಹಣಕಾಸು ಭೀತಿಯ ಪ್ರಮುಖ ಕಾರಣವೇನು?
ಗ್ರಾಹಕರು ಒತ್ತಿ ಹೇಳಿದಂತೆ ಹಣಕಾಸು ಭೀತಿಯ ಪ್ರಮುಖ ಕಾರಣಗಳೆಂದರೆ, ಜೀವನಶೈಲಿ ರೋಗಗಳ ಹಣಕಾಸು ನಿರ್ವಹಣೆಯಿಂದ ಆಗಿರುವ ಒತ್ತಡಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಆತಂಕಕಾರಿ ಅಂಶವೆಂದರೆ ಶೇಕಡ 50ರಷ್ಟು ಮಂದಿ ಭಾರತೀಯರು ಜೀವನಶೈಲಿ ರೋಗಗಳಿಗೆ ಸಂಬಂಧಿಸಿದ ಹಣಕಾಸು ತುರ್ತುಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿಲ್ಲ ಎನ್ನುವುದಾಗಿದೆ.
ಹಣಕಾಸಿನ ಸುರಕ್ಷತೆಯ ಅಗತ್ಯ
ಆದರೆ, ಸಮೀಕ್ಷೆಯಿಂದ ವ್ಯಕ್ತವಾಗಿರುವ ಉತ್ತಮ ಅಂಶವೆಂದರೆ, ಈ ಸಾಂಕ್ರಾಮಿಕದಿಂದಾಗಿ ಬಹುತೇಕ ಮಂದಿ ಹಣಕಾಸಿನ ಸುರಕ್ಷತೆಯ ಅಗತ್ಯತೆಯನ್ನು ಮನಗಂಡಿದ್ದಾರೆ. ಪ್ರತಿ 10 ಮಂದಿ ಭಾರತೀಯರ ಪೈಕಿ ಏಳು ಮಂದಿ ಪ್ರಸ್ತುತ ತೀವ್ರತರ ಕಾಯಿಲೆಗಳಿಗೆ ಸುರಕ್ಷೆ ಹೊಂದಿಲ್ಲ. ಆದ್ದರಿಂದ ಮುಂದಿನ ಮೂರು ತಿಂಗಳುಗಳಲ್ಲಿ ಈ ಉತ್ಪನ್ನಗಳನ್ನು ಖರೀದಿಸುವ ಉದ್ದೇಶ ಹೊಂದಿದ್ದಾರೆ. ಸಮೀಕ್ಷೆ ಬೆಳಕು ಚೆಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರತಿ 10 ಮಂದಿಯ ಪೈಕಿ 8 ಮಂದಿ ಗ್ರಾಹಕರು ಜೀವ ಮತ್ತು ಆರೋಗ್ಯವಿಮೆಯನ್ನು ಖರೀದಿಸಿರುವುದು ಸ್ಪಷ್ಟವಾಗಿ ಕುಟುಂಬದ ಭವಿಷ್ಯದ ಸುರಕ್ಷೆ ದೃಷ್ಟಿಯಿಂದ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications