ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶಾದ್ಯಂತ ಸೇಫ್ ಡೆಪಾಸಿಟ್ ಲಾಕರ್ ಗಳ ಬಾಡಿಗೆ ಶುಲ್ಕವನ್ನು ಹೆಚ್ಚಿಸಲಿದೆ. ಹೊಸ ಬಾಡಿಗೆ ಶುಲ್ಕವು 31ನೇ ಮಾರ್ಚ್ 2020ರಿಂದ ಜಾರಿಗೆ ಬರಲಿದೆ. ದರ ಹೆಚ್ಚಳ ಜಾರಿಗೆ ಬಂದ ಮೇಲೆ ಎಸ್ ಬಿಐ ಲಾಕರ್ ಶುಲ್ಕವು ಕನಿಷ್ಠ 500 ರುಪಾಯಿ ಹೆಚ್ಚಳವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಣ್ಣ ಲಾಕರ್ ಶುಲ್ಕವು 500ರಿಂದ 2000 ರುಪಾಯಿ ಏರಿಕೆ ಆಗಲಿದೆ. ಇನ್ನು ಅತಿ ದೊಡ್ಡ ಲಾಕರ್ ಗಳ ವಾರ್ಷಿಕ ಶುಲ್ಕ 12,000 ರುಪಾಯಿ ಆಗಲಿದೆ. ಸದ್ಯಕ್ಕೆ ಆ ಅಳತೆಯ ಲಾಕರ್ ನ ವಾರ್ಷಿಕ ಶುಲ್ಕ 9,000 ರುಪಾಯಿ ಇದೆ. ಇನ್ನು ಮಧ್ಯಮ ಗಾತ್ರದ ಲಾಕರ್ ಗಳ ಬಾಡಿಗೆ ಶುಲ್ಕ 1,000 ರುಪಾಯಿಯಿಂದ 4000 ರುಪಾಯಿ ತನಕ ಏರಿಕೆಯಾಗಬಹುದು.
ಅದೇ ರೀತಿ ದೊಡ್ಡ ಲಾಕರ್ ಶುಲ್ಕವು 2,000 ರುಪಾಯಿಯಿಂದ 8,000 ರುಪಾಯಿ ತನಕ ಏರಿಕೆ ಆಗಬಹುದು. ಈ ಶುಲ್ಕಗಳು ಮೆಟ್ರೋ ನಗರಗಳು ಹಾಗೂ ಪಟ್ಟಣ ನಗರ ಪ್ರದೇಶಗಳಿಗೆ ಅನ್ವಯ ಆಗಲಿದೆ. ಈ ಶುಲ್ಕವನ್ನು ಹೊರತುಪಡಿಸಿ ಜಿಎಸ್ ಟಿ ಕೂಡ ಸೇರಿಕೊಳ್ಳುತ್ತದೆ.

ಇನ್ನು ಲಾಕರ್ ನೋಂದಣಿ ಶುಲ್ಕ ಎಂದು 500 ರುಪಾಯಿ ಹಾಗೂ ಜಿಎಸ್ ಟಿ ಪಾವತಿಸಬೇಕು. ಈ ಮೊತ್ತ ಸಣ್ಣ ಮತ್ತು ಮಧ್ಯಮ ಗಾತ್ರದ ಲಾಕರ್ ಗಳಿಗೆ. ಅದೇ ದೊಡ್ಡ ಮತ್ತು ಅತಿ ದೊಡ್ಡ ಗಾತ್ರದ ಲಾಕರ್ ಗಳಿಗೆ 1,000 ರುಪಾಯಿ ಮತ್ತು ಜಿಎಸ್ ಟಿ ಪಾವತಿಸಬೇಕು.
ಒಂದು ವೇಳೆ ಸಮಯಕ್ಕೆ ಸರಿಯಾಗಿ ಶುಲ್ಕ ಪಾವತಿ ಮಾಡದಿದ್ದಲ್ಲಿ 40% ದಂಡ ಬೀಳುತ್ತದೆ. ಒಂದು ವರ್ಷ ಕಾಲ ಲಾಕರ್ ಬಳಕೆ ಮಾಡದಿದ್ದಲ್ಲಿ ಆ ಗ್ರಾಹಕರಿಗೆ ಸೇರಿದ ಲಾಕರ್ ತೆರೆಯಲು ಬ್ಯಾಂಕ್ ಗಳಿಗೆ ಆರ್ ಬಿಐ ಅನುಮತಿ ನೀಡಿದೆ. ಆದರೆ ಅದಕ್ಕೂ ಮುನ್ನ ಗ್ರಾಹಕರಿಗೆ ಬ್ಯಾಂಕ್ ನಿಂದ ನೋಟಿಸ್ ಕಳುಹಿಸಿರಬೇಕು.


Click it and Unblock the Notifications