ದೇಶದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗುರುವಾ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಎಸ್‌ಬಿಐನ ನಿವ್ವಳ ಲಾಭವು ಶೇಕಡ 83ರಷ್ಟು ಏರಿಕೆಯಾಗಿದೆ. ಮಾರ್ಚ್ 2023ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಎಸ್‌ಬಿಐ ನಿವ್ವಳ ಲಾಭ 16,694.51 ಕೋಟಿ ರೂಪಾಯಿಗೆ ತಲುಪಿದೆ.
ಜನವರಿ-ಮಾರ್ಚ್ 2023 ರ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿವ್ವಳ ಬಡ್ಡಿ ಆದಾಯವು 40,392.50 ಕೋಟಿ ರೂಪಾಯಿಗಳಷ್ಟಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದ ನಿವ್ವಳ ಬಡ್ಡಿ ಆದಾಯಕ್ಕೆ ನಾವು ಹೋಲಿಕೆ ಮಾಡಿದಾಗ, ಆದಾಯವು ಶೇಕಡ 29.5ರಷ್ಟು ಏರಿಕೆಯಾಗಿದೆ. ಅಂದರೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು 31,197 ಕೋಟಿ ರೂಪಾಯಿ ಆಗಿತ್ತು.

ಹಣಕಾಸು ವರ್ಷ 2023ಕ್ಕೆ ಬ್ಯಾಂಕ್‌ನ ಬೋರ್ಡ್ ಪ್ರತಿ ಈಕ್ವಿಟಿ ಷೇರಿಗೆ 11.30 ಡಿವಿಡೆಂಟ್ ಅನ್ನು ಶಿಫಾರಸು ಮಾಡಿದೆ. ರೆಗ್ಯೂಲೇಟರಿ ಫೈಲಿಂಗ್ ಪ್ರಕಾರ ಈ ಈಕ್ವಿಟಿ ಷೇರನ್ನು ಜೂನ್ 14, 2023ರ ವೇಳೆಗೆ ಪಾವತಿ ಮಾಡಲಾಗುತ್ತದೆ. ಹಣಕಾಸು ವರ್ಷ 2022-23ರಲ್ಲಿ ಎಸ್‌ಬಿಐ ನಿವ್ವಳ ಲಾಭವು ಶೇಕಡ 59ರಷ್ಟು ಏರಿಕೆಯಾಗಿದ್ದು, 50,232.45 ಕೋಟಿ ರೂಪಾಯಿಗೆ ತಲುಪಿದೆ.
ಎಸ್‌ಬಿಐನ ಆಸ್ತಿ ಗುಣಮಟ್ಟ ಸುಧಾರಣೆ
ಮಾರ್ಚ್ 2023 ತ್ರೈಮಾಸಿಕದಲ್ಲಿ ಎಸ್‌ಬಿಐನ ಆಸ್ತಿ ಗುಣಮಟ್ಟ ಸುಧಾರಣೆ ಕಂಡಿದೆ. 2022 ರ ಅಕ್ಟೋಬರ್-ಡಿಸೆಂಬರ್ ಹಿಂದಿನ ತ್ರೈಮಾಸಿಕದಲ್ಲಿ ಎಸ್‌ಬಿಐನ ಒಟ್ಟು ಅನುತ್ಪಾದಕ ಆಸ್ತಿಗಳು (GNPA) ಶೇಕಡ 7.5ರಷ್ಟು ಕುಸಿದು 90,927.8 ಕೋಟಿ ರೂಪಾಯಿಗೆ ಇಳಿದಿದೆ. ಅದಕ್ಕೂ ಮುನ್ನ ಎಸ್‌ಬಿಐನ ಒಟ್ಟು ಅನುತ್ಪಾದಕ ಆಸ್ತಿ ಮೌಲ್ಯ 98.347 ಕೋಟಿ ರೂಪಾಯಿ ಆಗಿತ್ತು.
ಇನ್ನು ಎಸ್‌ಬಿಐನ ನಿವ್ವಳ ಎನ್‌ಪಿಎ ಶೇಕಡ 8.6 ರಷ್ಟು ಕುಸಿದು 21,466.6 ಕೋಟಿ ರೂಪಾಯಿ ಆಗಿದೆ. ಜನವರಿ-ಮಾರ್ಚ್ 2023 ರ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ಎನ್‌ಪಿಎ ಅನುಪಾತವು ಶೇಕಡ 2.78ಕ್ಕೆ ಇಳಿದಿದೆ. ಈ ಹಿಂದಿನ ತ್ರೈಮಾಸಿಕದ ಅವಧಿಯಲ್ಲಿ ಶೇಕಡ 3.14ರಷ್ಟು ಇತ್ತು. ಇದರ ನಿವ್ವಳ ಎನ್‌ಪಿಎ ಅನುಪಾತವು ಡಿಸೆಂಬರ್ 2022 ತ್ರೈಮಾಸಿಕದಲ್ಲಿ ಶೇಕಡ 0.77ರಿಂದ ಶೇಕಡ 0.67ಕ್ಕೆ ಇಳಿಕೆಯಾಗಿದೆ.
ಎಸ್‌ಬಿಐನ ಈ ಹಿಂದಿನ ನಿವ್ವಳ ಆದಾಯ
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಕ್ರವಾರ ತನ್ನ ಗಳಿಕೆಯನ್ನು ವರದಿ ಮಾಡಿದೆ. ಎಸ್‌ಬಿಐ Q4 ನಿವ್ವಳ ಲಾಭ ರೂ 9,113 ಕೋಟಿಗೆ ಹೆಚ್ಚಳವಾಗಿದೆ. ಹಣಕಾಸು ವರ್ಷ 2022ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸ್ವತಂತ್ರ ನಿವ್ವಳ ಲಾಭವು ರೂ. 9113.53 ಕೋಟಿಗೆ ಏರಿದೆ. ಶೇಕಡ 41.2ರಷ್ಟು ಹೆಚ್ಚಳವಾಗಿದೆ. Q4 ಹಣಕಾಸು ವರ್ಷ 2021 ಅವಧಿಯಲ್ಲಿ 6450.75 ಕೋಟಿ ವರದಿಯಾಗಿದೆ.
ಪರಿಶೀಲನೆಯ ತ್ರೈಮಾಸಿಕದಲ್ಲಿ ಬ್ಯಾಂಕ್‌ನಲ್ಲಿನ ನಿವ್ವಳ ಬಡ್ಡಿ ಆದಾಯವು ಶೇಕಡ 15.3ರಷ್ಟು ಏರಿಕೆ ದಾಖಲಿಸಿ ರೂ. 31,198 ಕೋಟಿ ಆಗಿದೆ. ಈ ಹಿಂದೆ ರೂ. 27,067 ಕೋಟಿ ಆಗಿತ್ತು. ಹಿಂದಿನ ತ್ರೈಮಾಸಿಕದಲ್ಲಿ ಶೇಕಡ 4.5ರಿಂದ ಒಟ್ಟು ಎನ್‌ಪಿಎ ಅನುಪಾತವು ಶೇಕಡ 3.97ಕ್ಕೆ ಇಳಿಕೆಯಾಗಿದೆ. ಬ್ಯಾಂಕ್‌ನಲ್ಲಿ ನಿವ್ವಳ ಎನ್‌ಪಿಎ ಅನುಪಾತವು ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಶೇಕಡ 1.34ರಿಂದ ಶೇಕಡ 1.02ಕ್ಕೆ ಇಳಿದಿದೆ. ಮಾರ್ಚ್ 31, 2022 ರಂತೆ ಪ್ರಾವಿಷನ್ ಕವರೇಜ್ ಅನುಪಾತ (ಪಿಸಿಆರ್) ಶೇಕಡ 90.20 ರಷ್ಟಿದೆ.


Click it and Unblock the Notifications