ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಯೆಸ್ ಬ್ಯಾಂಕ್‌ನಲ್ಲಿ 7,500 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಹೇಳಿದೆ.
ಪ್ರತಿ ಷೇರಿನ ಬೆಲೆ 10 ರುಪಾಯಿಯಂತೆ ಯೆಸ್ ಬ್ಯಾಂಕಿನ 725 ಕೋಟಿ ಷೇರುಗಳನ್ನು ಖರೀದಿಸಲು ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿ(ಇಸಿಸಿಬಿ) ಅನುಮೋದನೆ ನೀಡಿದೆ. ಯೆಸ್ ಬ್ಯಾಂಕ್ ಪುನರ್ ರಚನೆಗೆ ಕಳೆದ ವಾರ ರಿಸರ್ವ್ ಬ್ಯಾಂಕ್ ಕರಡು ಯೋಜನೆಯೊಂದನ್ನು ರೂಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ಯೋಜನೆ ಪ್ರಕಾರ ಪುನರ್ ರಚನೆಯಾಗಲಿರುವ ಬ್ಯಾಂಕ್ ನಲ್ಲಿ 10 ರುಪಾಯಿಗಿಂತಲೂ ಕಡಿಮೆ ಇರದಂತೆ 49 ಪರ್ಸೆಂಟ್‌ರಷ್ಟು ಷೇರು ಪಾಲುದಾರಿಕೆಯನ್ನು ಹೂಡಿಕೆ ಬ್ಯಾಂಕ್ ಹೊಂದಿರಬೇಕಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿತ್ತು. ಯೆಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲಿರುವ ಎಸ್‌ಬಿಐ, ತನ್ನ ಷೇರುಗಳನ್ನು ಮೂರು ವರ್ಷದವರೆಗೆ 26 ಪರ್ಸೆಂಟ್ ಕೆಳಗೆ ತಗ್ಗಿಸುವಂತಿಲ್ಲ.
ಎಸ್‌ಬಿಐ ಅಷ್ಟೇ ಅಲ್ಲದೆ ಹೆಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ 2,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ.
ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಮಾರ್ಚ್ 5ರಂದು ಆರ್‌ಬಿಐ, ಯೆಸ್ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಏಪ್ರಿಲ್ 3ರವರೆಗೆ ಗ್ರಾಹಕರ ವಿತ್‌ಡ್ರಾ ಮಿತಿಯನ್ನು 50,000 ರುಪಾಯಿಗಳವರೆಗೆ ನಿರ್ಬಂಧಿಸಿತ್ತು.


Click it and Unblock the Notifications
