ಜೀವನದಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡಬೇಕೆಂದು ಎಲ್ಲರಿಗೂ ಆಸೆ ಅಂತೂ ಇದ್ದೇ ಇರುತ್ತದೆ. ಅದರೆ ಎಲ್ಲಿ ಹೂಡಿಕೆ ಮಾಡಬೇಕು ಎಂದು ಗೊಂದಲ ಸಹ ಪ್ರತಿಯೊಬ್ಬರಲ್ಲೂ ಕಾಡುತ್ತಲೇ ಇರುತ್ತಿದೆ. ಹಾಗಿದ್ರೆ ಯಾವ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗಳು ಹೂಡಿಕೆಯಲ್ಲಿ ಅತೀ ಹೆಚ್ಚಿನ ಬಡ್ಡಿ ಸಿಗುತ್ತದೆ. ಅದರಲ್ಲೂ ಸುರಕ್ಷಿತ ಹೂಡಿಕೆ ಅಂಚೆ ಕಚೇರಿ ಉತ್ತಮ ಆಯ್ಕೆಯೋ ಅಥವಾ ಬ್ಯಾಂಕ್‌ಗಳಲ್ಲಿ ಇಡುವುದು ಬೆಸ್ಟ್? ಇವೆರಡರಲ್ಲಿ ಹಣ ಹೂಡಿಕೆ ಮಾಡಿದ್ರೆ ಎಷ್ಟೆಲ್ಲಾ ಬಡ್ಡಿ ಸಿಗುತ್ತೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು,ಪ್ರತಿಯೊಬ್ಬರೂ ಸುರಕ್ಷಿತ ಜೀವನಕ್ಕಾಗಿ FD ಗಳನ್ನು ತೆಗೆದುಕೊಳ್ಳುತ್ತಾರೆ. ಎಸ್‌ಬಿಐ ಮತ್ತು ಅಂಚೆ ಕಚೇರಿ ಹಣದ ಬಡ್ಡಿ ಅಥವಾ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳದ ಎರಡು ಸಂಸ್ಥೆಗಳಾಗಿವೆ.ಇತ್ತೀಚಿನ ದಿನಗಳಲ್ಲಿ ಹಲವು ಬ್ಯಾಂಕ್‌ಗಳು ಸ್ಥಿರ ಠೇವಣಿ (FD)ಗಳ ವಿಚಾರದಲ್ಲಿ ತಮ್ಮದೇ ರೀತಿಯ ಬಡ್ಡಿದರಗಳನ್ನು ಹೊಂದಿದೆ. ಆದರೆ ಗ್ರಾಹಕರಿಗೆ ಹೆಚ್ಚಿನ ಆದಾಯವನ್ನು ನೀಡುವ ವಿಷಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅಂಚೆ ಕಚೇರಿ ನಡುವೆ ಪೈಪೋಟಿ ಇದೆ. ಇವುಗಳೆರಡರಲ್ಲಿ ಹೂಡಿಕೆದಾರರಿಗೆ ಯಾವುದು ಉತ್ತಮವೋ ಅವುಗಳನ್ನು ಆಯ್ಕೆ ಮಾಡಿಕೊಂಡು ನೀವು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ನಾವು ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಅಂಚೆ ಕಚೇರಿ ನಡುವಿನ ಬಡ್ಡಿದರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.

ನಿಶ್ಚಿತ ಠೇವಣಿ (ಎಫ್‌ಡಿ) ಹೂಡಿಕೆಯು ವಿಶ್ವಾಸಾರ್ಹ ಹಾಗೂ ಸ್ಥಿರ ದೀರ್ಘಾವಧಿಯ ಲಾಭವನ್ನು ನೀಡುವ ಭರವಸೆಯ ಹೂಡಿಕೆಯ ಆಯ್ಕೆಯಾಗಿದೆ. ಈ ಎಫ್‌ಡಿಯು ನಿಮ್ಮ ಹಣಕಾಸಿನ ಮೇಲೆ ನಿಮಗೆ ಒಂದು ನಿರ್ದಿಷ್ಟ ಅವಧಿಗೆ ಹಣವನ್ನು ಠೇವಣಿ ಮಾಡಲು ಹಾಗೂ ಮೊತ್ತದ ಮೇಲೆ ಬಡ್ಡಿಯನ್ನು ಗಳಿಸಲು ಅನುಕೂಲಕರವಾಗಿದೆ. ಹಾಗೂ FD ಗಳು ಉಳಿತಾಯ ಖಾತೆಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ.
ಎಸ್‌ಬಿಐಯ 5 ವರ್ಷದ ಸ್ಥಿರ ಠೇವಣಿ (FD)
SBI ಯ 5 ವರ್ಷಗಳ FD ಮೇಲೆ ಶೇ.6.50 ಬಡ್ಡಿದರವನ್ನು ನೀಡುತ್ತದೆ.
ಪ್ರಮುಖ ಲಕ್ಷಣಗಳು
ಸುರಕ್ಷಿತ ಠೇವಣಿ: ಇಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಭದ್ರತೆ ಬರುತ್ತದೆ.
ಮಾಸಿಕ ಬಡ್ಡಿ ಲೆಕ್ಕಾಚಾರ: ಮಾಸಿಕ ಬಡ್ಡಿಯನ್ನು ಖಾತೆಗೆ ಸೇರಿಸಲಾಗುತ್ತದೆ.
ವಿಮಾ ಕವರೇಜ್: ಡಿಐಸಿಜಿಸಿಯಿಂದ 5 ಲಕ್ಷದವರೆಗೆ ಠೇವಣಿ ವಿಮೆ ಮಾಡಲಾಗುತ್ತದೆ.
ತೆರಿಗೆ ಪ್ರಯೋಜನ: 5 ವರ್ಷಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ.
5 ವರ್ಷದ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ (FD)
ಪೋಸ್ಟ್ ಆಫೀಸ್ FD ಗೆ ಶೇ.7.50 ಬಡ್ಡಿ ದರ ಸಿಗುತ್ತದೆ.
ಪ್ರಮುಖ ಲಕ್ಷಣಗಳು
ಸರ್ಕಾರದ ಖಾತರಿ ಹೂಡಿಕೆ: ಭಾರತ ಸರ್ಕಾರದಿಂದ ಶೇ.100ರಷ್ಟು ಖಾತರಿಯೊಂದಿಗೆ ಸುರಕ್ಷಿತ ಹೂಡಿಕೆಯಾಗಿದೆ
ವಾರ್ಷಿಕ ಬಡ್ಡಿ ಲೆಕ್ಕಾಚಾರ: ಬಡ್ಡಿಯನ್ನು ವರ್ಷಕ್ಕೊಮ್ಮೆ ಲೆಕ್ಕಹಾಕಲಾಗುತ್ತದೆ ಮತ್ತು ಖಾತೆಗೆ ಜಮಾ ಮಾಡಲಾಗುತ್ತದೆ
ತೆರಿಗೆ ಪ್ರಯೋಜನ: 5 ವರ್ಷಗಳ ಪೋಸ್ಟ್ ಆಫೀಸ್ ಎಫ್‌ಡಿಯು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಹೊಂದಿದೆ.
ಗ್ರಾಮೀಣ ಪ್ರದೇಶದಲ್ಲೂ ಉಪಯುಕ್ತ: ಈ ಸೇವೆಯು ದೇಶದ ಯಾವುದೇ ಭಾಗದಲ್ಲಿ ಲಭ್ಯವಿದೆ.
ಪೋಸ್ಟ್ ಆಫೀಸ್ ಎಫ್‌ಡಿ ಏಕೆ ಹೆಚ್ಚು ಪ್ರಯೋಜನಕಾರಿ?
ಹೆಚ್ಚಿನ ಬಡ್ಡಿ ದರ: ಶೇ.7.50 ರ ಬಡ್ಡಿದರವು SBI ಯ ಶೇ.6.50 ಕ್ಕಿಂತ ಹೆಚ್ಚು ಆಕರ್ಷಕವಾಗಿದೆ.
ಸರ್ಕಾರದ ಖಾತರಿ: ಸರ್ಕಾರ ಬೆಂಬಲದಿಂದ ನಿರ್ವಹಿಸಲ್ಪಡುವುದರಿಂದ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ.
ಗ್ರಾಮೀಣ ಜನರಿಗೆ ಇದುವರೆಗೆ ಲಭ್ಯವಿದೆ: ಪೋಸ್ಟ್ ಆಫೀಸ್ ಎಫ್‌ಡಿಯನ್ನು ಬ್ಯಾಂಕ್ ಮಾಡದ ಪ್ರದೇಶಗಳಲ್ಲಿಯೂ ಸುಲಭವಾಗಿ ಪಡೆಯಬಹುದು.
SBI FD ಯ ಪ್ರಮುಖ ಲಕ್ಷಣಗಳು
ಮಾಸಿಕ ಬಡ್ಡಿ ಲೆಕ್ಕಾಚಾರ: SBI FD ಅನ್ನು ಮಾಸಿಕ ಬಡ್ಡಿಯನ್ನು ಲೆಕ್ಕಹಾಕುವ ಮೂಲಕ ಸ್ಥಿರ ಆದಾಯದಂತೆ ಪರಿಗಣಿಸಬಹುದು.
ಆನ್‌ಲೈನ್ ಸೌಲಭ್ಯಗಳು: ಎಸ್‌ಬಿಐನ ಸ್ಮಾರ್ಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲಾ ಎಫ್‌ಡಿ ಸಂಬಂಧಿತ ಸೇವೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಬಹುದು.
ತೆರಿಗೆ ಪ್ರಯೋಜನ: ಸೆಕ್ಷನ್ 80C ತೆರಿಗೆ ವಿನಾಯಿತಿಗಾಗಿ ನಿರ್ದಿಷ್ಟ ಪ್ರಮಾಣದ ಹೂಡಿಕೆಗೆ ಅರ್ಹವಾಗಿದೆ.
ಯಾವುದನ್ನು ಆಯ್ಕೆ ಮಾಡಿಕೊಂಡರೆ ಉತ್ತಮ?
ಹೆಚ್ಚಿನ ಆದಾಯವನ್ನು ಬಯಸುವವರಿಗೆ: ಪೋಸ್ಟ್ ಆಫೀಸ್ ಎಫ್‌ಡಿ ಅತ್ಯುತ್ತಮ ಆಯ್ಕೆಯಾಗಿದೆ.
ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ: SBI FD ಸೂಕ್ತವಾಗಿದೆ.
ತೆರಿಗೆ ಪ್ರಯೋಜನಗಳು: ಎರಡೂ FDಗಳು ಸೆಕ್ಷನ್ 80C ಅಡಿಯಲ್ಲಿ ಒಂದೇ ರೀತಿಯ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತವೆ.
ಪೋಸ್ಟ್ ಆಫೀಸ್ ಎಫ್‌ಡಿ ಪ್ರಸ್ತುತ ಬಡ್ಡಿದರಗಳ ಕಾರಣದಿಂದಾಗಿ 3,50,000 ಹೂಡಿಕೆಯ ಮೇಲೆ ಹೆಚ್ಚು ಉಳಿದ ಆದಾಯವನ್ನು ನೀಡುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸುವವರಿಗೆ ಮತ್ತು ಸ್ಥಿರ ಆದಾಯವನ್ನು ಹೊಂದಿರುವವರಿಗೆ SBI FD ಹೆಚ್ಚು ಸೂಕ್ತವಾಗಿದೆ. ನಿಮ್ಮ ಹಣಕಾಸಿನ ಗುರಿಗಳು ಮತ್ತು ಅನುಕೂಲತೆಯ ಆಧಾರದ ಮೇಲೆ ಯಾವುದು ನಿಮಗೆ ಉತ್ತಮ ಎನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡ ಹೆಚ್ಚಿನ ಆದಾಯವನ್ನು ಗಳಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications