ಭಾರತೀಯ ಷೇರುಪೇಟು ನಿಯಂತ್ರಣ ಮಂಡಳಿ(ಸೆಬಿ)ಯು ಷೇರುಗಳ ದಲ್ಲಾಳಿ ಕಾರ್ಯ ಸಂಸ್ಥೆ ಕಾರ್ವಿ ಮೇಲೆ ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಹೇರಿದೆ.
ಕಾರ್ವಿ ವಾಗ್ದಾನ(Pledged) ಮಾಡಿದ ಗ್ರಾಹಕರ ಷೇರುಗಳನ್ನು ಸಾಲಕ್ಕಾಗಿ ಕಾನೂನು ಬಾಹಿರವಾಗಿ ಮಾರಾಟ ಮಾಡಿದೆ. ಹೀಗಾಗಿ ಹೊಸ ಗ್ರಾಹಕರ ಸೇರ್ಪಡೆ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರ ಷೇರುಗಳನ್ನು ವಹಿವಾಟು ನಡೆಸದಂತೆ ನಿಷೇಧ ಹೇರಿದೆ. ಕಾರ್ವಿ ತನ್ನೊಂದಿಗೆ ವಾಗ್ದಾನ (Pledged) ಮಾಡಿದ ಗ್ರಾಹಕರ ಷೇರುಗಳನ್ನು ಸಂಬಂಧಿತ ಘಟಕಗಳಿಗೆ ಮಾರಾಟ ಮಾಡಿದೆ ಎಂದು ಎನ್‌ಎಸ್‌ಇ ತನಿಖೆಯಲ್ಲಿ ತಿಳಿದುಬಂದಿದೆ.

ಸಂಸ್ಥೆಯು ತನ್ನದೇ ಆದ ವಹಿವಾಟುಗಳಿಗಾಗಿ ಗ್ರಾಹಕರ ಮೇಲಾಧಾರವನ್ನು (Client collateral) ದುರುಪಯೋಗ ಪಡಿಸಿಕೊಂಡಿದೆ ಎಂದು ಸೆಬಿ ಹೇಳಿದೆ. ನಿಯಂತ್ರಕರ ಮಧ್ಯವರ್ತಿ ನಿಯಮಗಳ ಪ್ರಕಾರ, ದಲ್ಲಾಳಿ ಸಂಸ್ಥೆಗಳು ಗ್ರಾಹಕರ ಭದ್ರತೆಗಳ ಮೇಲೆ ಹೆಚ್ಚುವರಿಯಾಗಿ ಹಣವನ್ನು ಪಡೆಯಲು ಸಾಧ್ಯವಿಲ್ಲ.
ಆದರೆ ಕಾರ್ವಿ 2,000 ಕೋಟಿ ರುಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದೆ. ಭಾರತದಲ್ಲಿ ಷೇರುಗಳ ದಲ್ಲಾಳಿ ಸಂಸ್ಥೆ ಮಾಡಿದ ಅತಿ ದೊಡ್ಡ ದುರುಪಯೋಗ ಇದಾಗಿದೆ.
'ದಲ್ಲಾಳಿಗಳು ಗ್ರಾಹಕರಿಗೆ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿರುವುದರ ಕುರಿತು ಸಾಕಷ್ಟು ದೂರುಗಳು ಬಂದಿವೆ. ಗ್ರಾಹಕರ ಹಣವನ್ನು ದಲ್ಲಾಳಿಗಳು ನಿರ್ವಹಿಸಲು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸಲು ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಸೆಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ದಲ್ಲಾಳಿಗಳು ಹಣ ಬಾಕಿ ಉಳಿಸಿಕೊಂಡಿರುವುದು ಹೆಚ್ಚಳವಾಗಿದೆ. ಇದು ಮಾರುಕಟ್ಟೆಗಳನ್ನು ವ್ಯವಸ್ಥಿತ ಅಪಾಯಕ್ಕೆ ಗುರಿಯಾಗಿಸಬಹುದು. ದಲ್ಲಾಳಿಗಳು ವಹಿವಾಟುಗಳನ್ನು ಇತ್ಯರ್ಥಗೊಳಿಸುವುದು ಮತ್ತು ತೆರವುಗೊಳಿಸುವುದನ್ನು ತಡೆಯುವುದು ಸೆಬಿ ಪರಿಗಣಿಸುತ್ತಿರುವ ನೀತಿ ಬದಲಾವಣೆಯಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications