ಚೀನಾ ಅಥವಾ ಚೀನಾ ಮೂಲಕ ಭಾರತದ ಷೇರು ಮಾರುಕಟ್ಟೆಗೆ ಬರುವ ಹೂಡಿಕೆಯ ಮಾಹಿತಿಯನ್ನು ನೀಡುವಂತೆ ಎಲ್ಲ ಕಸ್ಟೋಡಿಯನ್ ಗಳಿಗೂ ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೊಸದಾಗಿ ಆದೇಶ ನೀಡಿದೆ. ಆದರೆ ಸದ್ಯಕ್ಕೆ ಯಾವಾಗ ಸೆಬಿ ಕೇಳಿದರೂ ಅಥವಾ ನಿಯಮಿತವಾಗಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ (ಎಫ್ ಪಿಐ) ವರದಿ ನೀಡಬೇಕು.
ಆದರೆ, ಈ ಬಾರಿ ನಿರ್ದಿಷ್ಟವಾಗಿ ಚೀನಾದ ಎಫ್ ಪಿಐ ಅಥವಾ ಚೀನಾದ ಹೂಡಿಕೆದಾರರ ಬಗ್ಗೆ ಮಾಹಿತಿ ಕೇಳಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಚೀನಾ ಮತ್ತು ಹಾಂಕಾಂಗ್ ನಿಂದ ಬರುವ ಹೂಡಿಕೆ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸರ್ಕಾರದಿಂದಲೇ ಆದೇಶ ಬಂದಿದೆ. ಚೀನಾ ಹೂಡಿಕೆ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರದಿಂದ ಆದೇಶ ಬರಲು ಸೆಬಿ ಕಾಯುತ್ತಿತ್ತು.
ಚೀನಾ ಹಾಗೂ ಹಾಂಕಾಂಗ್ ಮೂಲದ ಎಫ್ ಪಿಐ ಮಾಹಿತಿ
ಆರಂಭದಲ್ಲಿ ಸೆಬಿಯ ಉದ್ದೇಶ ಚೀನಾ ಮತ್ತು ಇತರ ನೆರೆಯ ದೇಶಗಳಿಂದ ಬರುವ ಹೊಸ ಎಫ್ ಪಿಐ ಮೇಲೆ ನಿಗಾ ಹೆಚ್ಚು ಮಾಡುವುದು ಆಗಿತ್ತು. ಆದರೆ ಈಗ ಸದ್ಯಕ್ಕೆ ಇರುವ ಹೂಡಿಕೆಯನ್ನು ಸಹ ಗಮನಿಸಬೇಕು. ಈಗ ಸೆಬಿಯಿಂದ ಹೊರಡಿಸಿರುವ ಆದೇಶದ ಪ್ರಕಾರ, ಚೀನಾ ಹಾಗೂ ಹಾಂಕಾಂಗ್ ಮೂಲದ ಎಫ್ ಪಿಐಗಳ ಹೂಡಿಕೆ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಈಕ್ವಿಟಿ ಸೂಚ್ಯಂಕಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಆ ಕಾರಣಕ್ಕೆ ತುಂಬ ಒಳ್ಳೆ ಕಂಪೆನಿಗಳ ಷೇರುಗಳು ದೇಶೀ ಮತ್ತು ವಿದೇಶಿ ಹೂಡಿಕೆದಾರರ ಕೈಗೆಟುಕುವಷ್ಟು, ಖರೀದಿಗೆ ಉತ್ತೇಜಿಸುವಂತೆ ಇದೆ. ಕಳೆದ ಭಾನುವಾರ ಎಚ್ ಡಿಎಫ್ ಸಿ ಮಾಹಿತಿ ನೀಡಿತ್ತು: ಪೀಪಲ್ಸ್ ಬ್ಯಾಂಕ್ ಚೀನಾವು ಮಾರ್ಚ್ ಅಂತ್ಯದ ಹೊತ್ತಿಗೆ ಹೂಡಿಕೆಯನ್ನು 0.8%ನಿಂದ 1.01 ಪರ್ಸೆಂಟ್ ಗೆ ಹೆಚ್ಚಿಸಿದೆ ಎಂದಿತ್ತು.
110 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ
ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ (ಎಫ್ ಪಿಐ) ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಈ ಷೇರುಗಳನ್ನು ಖರೀದಿ ಮಾಡುತ್ತಿರುವುದು ಹಲವರಿಗೆ ಅನುಮಾನಗಳಿಗೆ ಕಾರಣವಾಗಿತ್ತು. ಒಟ್ಟು ಹದಿನಾರು ಚೀನಿ ಎಫ್ ಪಿಐಗಳು ಭಾರತದಲ್ಲಿ ನೋಂದಣಿ ಮಾಡಿದ್ದು, ಟಾಪ್ ಕಂಪೆನಿ ಷೇರುಗಳಲ್ಲಿ 110 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿವೆ. ನೇರ ಹಾಗೂ ಪರೋಕ್ಷ ಮಾರ್ಗದಲ್ಲಿ ಚೀನಾದ ಹೂಡಿಕೆ ಭಾರತದಲ್ಲಿ ಎಷ್ಟಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಸೆಬಿ ಮತ್ತು ಡೆಪಾಸಿಟರೀಸ್ ಮೂಲಕ ಬಯಲು ಮಾಡಿರುವುದು ಭಾರತದಲ್ಲಿ ಹೂಡಿಕೆ ಮಾಡುವ ಟಾಪ್ ಟೆನ್ ಕಾರ್ಯವ್ಯಾಪ್ತಿಯನ್ನು ಮಾತ್ರ. ಚೀನಾದಲ್ಲಿ ಅದರಲ್ಲಿ ಒಂದಲ್ಲ. ಅಸೆಟ್ ಮ್ಯಾನೇಜರ್ ಗಳು ಹೇಳುವಂತೆ, ಚೀನಾ ಮತ್ತು ಜಪಾನ್ ನಿಂದ ಬರುವ ಹೂಡಿಕೆಗಳನ್ನು ಸಾಂಪ್ರದಾಯಿಕ ಮಾರ್ಗದಲ್ಲಿ ತಿಳಿದುಕೊಳ್ಳುವುದು ಬಹಳ ಕಷ್ಟ.
ಅಮೆರಿಕ ಅಸೆಟ್ ಮ್ಯಾನೇಜರ್ಸ್ ಜತೆ ಚೀನಾ ಕಾರ್ಯ ನಿರ್ವಹಣೆ
ಚೀನಾದ ಅತಿದೊಡ್ಡ ಎಪ್ ಪಿಐಗಳಾದ ಪಿಬಿಒಸಿ, ಸಿಐಎಫ್ ಎಂ, ಏಷ್ಯಾ ಪೆಸಿಫಿಕ್ ಫಂಡ್, ಚೀನಾ ಇಂಟರ್ ನ್ಯಾಷನಲ್ ಫಂಡ್ ಮ್ಯಾನೇಜ್ ಮೆಂಟ್, ಬೆಸ್ಟ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಷನ್, ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ತ್ ಮೆಂಟ್... ಹೀಗೆ ಕೆಲವು ಫಂಡ್ಸ್ ಗಳು ಅಮೆರಿಕ ಮೂಲದ ಅಸೆಟ್ ಮ್ಯಾನೇಜರ್ಸ್ ಜತೆಗೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತವೆ. ಪೀಪಲ್ ಬ್ಯಾಂಕ್ ಆಫ್ ಚೀನಾವು ಎಚ್ ಡಿಎಫ್ ಸಿ ಲಿಮಿಟೆಡ್ ನಲ್ಲಿ 1%ಗೂ ಹೆಚ್ಚು ಪಾಲನ್ನು ಹೊಂದಿದೆ. ಇನ್ನು ಜೆಪಿ ಮೋರ್ಗನ್ ಅಸೆಟ್ ಮ್ಯಾನೇಜ್ ಮೆಂಟ್ ಜತೆ ಸೇರಿ ಸಿಐಎಫ್ ಎಂ ಏಷ್ಯಾ ಪೆಸಿಫಿಕ್ ಫಂಡ್ ಭಾರತೀಯ ಬ್ಯಾಂಕ್ ಗಳು, ಮೂಲಸೌಕರ್ಯ ಕಂಪೆನಿಗಳು ಮತ್ತಿತರ ಕಡೆ ಒಟ್ಟು 13.5% ಪಾಲು ಹೊಂದಿದೆ. ಒಂಬತ್ತು ಕಂಪೆನಿಗಳಲ್ಲಿ 1% ಗೂ ಹೆಚ್ಚಿನ ಪ್ರಮಾಣದ ಷೇರಿನ ಪಾಲು ಹೊಂದಿದೆ.


Click it and Unblock the Notifications