ಭಾರತೀಯ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯು ಹೊಸ ರಿವಾರ್ಡ್ ನೀಡುವ ಆಫರ್ ಅನ್ನು ನೀಡಿದೆ. ಡಿಫಾಲ್ಟರ್‌ಗಳ (ಸಾಲ ಮರುಪಾವತಿ ಮಾಡದವರ) ಬಗ್ಗೆ ಮಾಹಿತಿಯನ್ನು ನೀಡಿದರೆ ಸೆಬಿಯು ಭಾರೀ ರಿವಾರ್ಡ್ ಅನ್ನು ನೀಡಲಿದೆ. ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ಹೊಸ ಯೋಜನೆ ಪ್ರಕಾರವಾಗಿ ಡಿಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದವರು 20 ಲಕ್ಷ ರೂಪಾಯಿವರೆಗೆ ರಿವಾರ್ಡ್ ಪಡೆಯಬಹುದಾಗಿದೆ.
ಸೆಬಿಯು ತಪ್ಪಿಸಿಕೊಂಡಿರುವ ಡಿಫಾಲ್ಟರ್‌ಗಳಿಂದ ದಂಡವನ್ನು ಪಡೆಯಬೇಕಾಗಿದೆ. ಇದಕ್ಕಾಗಿ ಸೆಬಿಗೆ ಮಾಹಿತಿ ನೀಡಿವರಿಗೆ ಎರಡು ಹಂತದ ರಿವಾರ್ಡ್ ಅನ್ನು ನೀಡಲಾಗುತ್ತದೆ. ಒಂದು ಮಧ್ಯಂತರ ರಿವಾರ್ಡ್ ಮತ್ತೊಂದು ಅಂತಿಮ ರಿವಾರ್ಡ್ ಆಗಿದೆ. ಡಿಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದರೆ ಮಧ್ಯಂತರ ರಿವಾರ್ಡ್ ಲಭ್ಯವಾಗಲಿದೆ. ಇದು ಡಿಫಾಲ್ಟರ್‌ಗಳ ಒಟ್ಟು ಆಸ್ತಿ ಮೌಲ್ಯದ ಶೇಕಡ 2.5ರಷ್ಟು ಅಥವಾ 5 ಲಕ್ಷ ರೂಪಾಯಿ, ಯಾವುದು ಕಡಿಮೆಯೋ ಆ ಮೊತ್ತ ಲಭ್ಯವಾಗಲಿದೆ.

20 ಲಕ್ಷ ರೂಪಾಯಿವರೆಗೆ ರಿವಾರ್ಡ್ ಪಡೆಯಿರಿ
ಕೊನೆಯ ಹಂತದ ರಿವಾರ್ಡ್‌ನಲ್ಲಿ ಡಿಫಾಲ್ಟರ್‌ಗಳ ಆಸ್ತಿಯ ಒಟ್ಟು ಮೌಲ್ಯದ ಶೇಕಡ 10ರಷ್ಟು ಅಥವಾ 20 ಲಕ್ಷ ರೂಪಾಯಿ, ಈ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತ ರಿವಾರ್ಡ್ ಆಗಿ ಲಭ್ಯವಾಗಲಿದೆ. ಸೆಬಿ ಹೊಸ ರಿವಾರ್ಡ್ ವ್ಯವಸ್ಥೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಡಿಫಾಲ್ಟರ್‌ಗಳ ಮಾಹಿತಿ ನೀಡಿದ ಬಳಿಕ ಮೊತ್ತವನ್ನು ಹೇಗೆ ಜಮೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.
ಇನ್ನು ಮಾಹಿತಿ ನೀಡಿದವರ ಗುರುತು ಮತ್ತು ಅವರು ಎಷ್ಟು ರಿವಾರ್ಡ್ ಅನ್ನು ಪಡೆದಿದ್ದಾರೆ ಎಂಬ ವಿವರವನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಯಾರ ಸಾಲವನ್ನು ಮರುಪಡೆಯಲು ಅತೀ ಕಷ್ಟವಿದೆಯೋ ಅಂತಹ ಡಿಫಾಲ್ಟರ್‌ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದರೆ ಮಾತ್ರ ಮಾಹಿತಿ ನೀಡಿದವರು ರಿವಾರ್ಡ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲೇ ಸೆಬಿ 515 ಡಿಫಾಲ್ಟರ್‌ಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ.
ಹೂಡಿಕೆದಾರರ ಸುರಕ್ಷತೆ ಮತ್ತು ಶಿಕ್ಷಣ ಫಂಡ್‌ನಿಂದ ರಿವಾರ್ಡ್ ಅನ್ನು ಪಾವತಿ ಮಾಡಲಾಗುತ್ತದೆ. ಸೆಬಿಯು ಮಾಹಿತಿದಾರರ ರಿವಾರ್ಡ್ ಸಮಿತಿಯನ್ನು ರಚನೆ ಮಾಡುತ್ತದೆ. ಇದರಲ್ಲಿ ರಿಕವರಿ ಆಂಡ್ ರಿಫಂಡ್ ಡಿಪಾರ್ಟ್‌ಮೆಂಟ್‌ನ ಮುಖ್ಯ ನಿರ್ದೇಶಕರು, ನ್ಯಾಯಾಂಗದ ಬಗ್ಗೆ ಮಾಹಿತಿ ತಿಳಿದಿರುವವರು, ಸೆಬಿಯ ಹಲವಾರು ಅಧಿಕಾರಿಗಳು ಇರಲಿದ್ದಾರೆ. ಸೆಬಿಯು ನೂತನ ಮಾರ್ಗಸೂಚಿಯು ಮಾರ್ಚ್ 8, 2023ರಿಂದ ಜಾರಿಗೆ ಬರುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications