ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಐದನೇ ದಿನ ಏರಿಕೆ ದಾಖಲಿಸಿದವು. ಸೆನ್ಸೆಕ್ಸ್, ನಿಫ್ಟಿ ಮತ್ತೆ ಹೊಸ ಎತ್ತರಕ್ಕೆ ಏರಿ, ದಾಖಲೆ ಬರೆದಿದೆ. ಸೆನ್ಸೆಕ್ಸ್ ಸೂಚ್ಯಂಕವು 223.88 ಪಾಯಿಂಟ್ ಗಳ ಏರಿಕೆ ಕಂಡು, 46,890.34 ಪಾಯಿಂಟ್ ನೊಂದಿಗೆ ದಿನಾಂತ್ಯ ಕಂಡರೆ, ನಿಫ್ಟಿ 58 ಪಾಯಿಂಟ್ ಹೆಚ್ಚಳ ಕಂಡು, 13,740.70 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
1234 ಕಂಪೆನಿಗಳ ಷೇರಿನ ಬೆಲೆ ಏರಿಕೆ ದಾಖಲಿಸಿದರೆ, 1485 ಕಂಪೆನಿಗಳ ಷೇರು ಇಳಿಕೆ ಕಂಡಿದೆ. 137 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಫಾರ್ಮಾ ಮತ್ತು ಬ್ಯಾಂಕ್ ವಲಯಗಳನ್ನು ಹೊರತುಪಡಿಸಿ ಉಳಿದ ಸೂಚ್ಯಂಕಗಳು ಇಳಿಕೆಯಲ್ಲೇ ಮುಕ್ತಾಯ ಆದವು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಅಲ್ಪ ಪ್ರಮಾಣದ ನಷ್ಟ ಕಂಡವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಎಚ್ ಡಿಎಫ್ ಸಿ 2.88%
ಡಿವೀಸ್ ಲ್ಯಾಬ್ಸ್ 2.87%
ಬಜಾಜ್ ಫೈನಾನ್ಸ್ 2.72%
ಎಚ್ ಡಿಎಫ್ ಸಿ ಬ್ಯಾಂಕ್ 2.20%
ಇಂಡಸ್ ಇಂಡ್ ಬ್ಯಾಂಕ್ 1.52%

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಹಿಂಡಾಲ್ಕೋ -2.23%
ಅದಾನಿ ಪೋರ್ಟ್ಸ್ -1.64%
ಪವರ್ ಗ್ರಿಡ್ ಕಾರ್ಪೊರೇಷನ್ -1.48%
ಕೋಲ್ ಇಂಡಿಯಾ -1.41%
ಒಎನ್ ಜಿಸಿ -1.36%


Click it and Unblock the Notifications