ಕೇಂದ್ರ ಸರ್ಕಾರ ಘೋಷಣೆ ಮಾಡಿದ ಆತ್ಮನಿರ್ಭರ್ ಭಾರತ್ 3.0 ಅನ್ನು ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರು ಸಕಾರಾತ್ಮಕಾವಾಗಿ ತೆಗೆದುಕೊಂಡಿಲ್ಲ. ಗುರುವಾರದಂದು (ನವೆಂಬರ್ 12, 2020) ದಿನದ ವಹಿವಾಟಿನ ಕೊನೆಗೆ ನಿಫ್ಟಿ ಸೂಚ್ಯಂಕವು 0.46 ಪರ್ಸೆಂಟ್ ಅಥವಾ 58 ಪಾಯಿಂಟ್ ಗಳ ಇಳಿಕೆಯೊಂದಿಗೆ 12,690.8ರಲ್ಲಿ ಮುಕ್ತಾಯಗೊಂಡರೆ, ಸೆನ್ಸೆಕ್ಸ್ 0.54% ಇಳಿದು, 43,357.19 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿತು.
ಇಂದಿನ ದುರ್ಬಲ ಮಾರ್ಕೆಟ್ ಮಧ್ಯೆಯೂ ಏರಿಕೆ ಕಂಡು, ಮಿಂಚಿದ ಷೇರುಗಳೆಂದರೆ ಗ್ರಾಸಿಮ್, ಹಿಂದೂಸ್ತಾನ್ ಯುನಿಲಿವರ್, ಶ್ರೀ ಸಿಮೆಂಟ್ಸ್, ಹಿಂಡಾಲ್ಕೋ ಹಾಗೂ ಐಟಿಸಿ. ಇನ್ನು ನಷ್ಟ ಕಂಡಿದ್ದು ಪ್ರಮುಖವಾಗಿ ಬ್ಯಾಂಕಿಂಗ್ ಷೇರುಗಳು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಕೊಟಕ್ ಮಹೀಂದ್ರಾ, ಕೋಲ್ ಇಂಡಿಯಾ ಮತ್ತು ಎನ್ ಟಿಪಿಸಿ.

ಇನ್ನು ಗೊಬ್ಬರಕ್ಕೆ ಅರವತ್ತೈದು ಸಾವಿರ ಕೋಟಿ ರುಪಾಯಿ ಸಬ್ಸಿಡಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಗೊಬ್ಬರದ ಕಂಪೆನಿಯ ಷೇರುಗಳು ಏರಿಕೆ ಕಂಡುವು. ಸರ್ಕಾರದ ಕ್ರಮದ ಕಾರಣಕ್ಕೆ ರಿಯಾಲ್ಟಿ ಸೂಚ್ಯಂಕ ಹೆಚ್ಚಳವಾಯಿತು. ಮನೆ ಖರೀದಿಗಾಗಿ ಮಧ್ಯಮ ವರ್ಗದವರಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ ಕಾರಣಕ್ಕೂ ಒಂದಿಷ್ಟು ಬೆಂಬಲ ಸಿಕ್ಕಿತು.
ಇಂಡಿಯಾಬುಲ್ಸ್ ರಿಯಾಲ್ಟಿ, ಒಬೆರಾಯ್ ರಿಯಾಲ್ಟಿ, ಪ್ರೆಸ್ಟೀಜ್ ಎಸ್ಘೇಟ್ ಮತ್ತು ಗೋದ್ರೆಜ್ ಪ್ರಾಪರ್ಟೀಸ್ ಏರಿಕೆ ಕಂಡವು. ಈ ಮಧ್ಯೆ ಯುರೋಪಿಯನ್ ಮಾರ್ಕೆಟ್ ಗಳು ಇಳಿಕೆ ಕಂಡಿವೆ.


Click it and Unblock the Notifications