ಭಾರತೀಯ ಷೇರುಪೇಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 587 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 171 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 1.10ರಷ್ಟು ಅಥವಾ 587 ಪಾಯಿಂಟ್ಸ್ ಕುಸಿಯುವ ಮೂಲಕ 52,553.40 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 1.07 ರಷ್ಟು ಅಥವಾ 171 ಪಾಯಿಂಟ್ಸ್ ಇಳಿಕೆಗೊಂಡು 15752.40 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಅಂತ್ಯಕ್ಕೆ ಅನೇಕ ಷೇರುಗಳು ಏರಿಳಿತ ಸಾಧಿಸಿದ್ದು, ಅದಾನಿ ಸಮೂಹಕ್ಕೆ ಸೇರಿದ ಷೇರುಗಳು ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿರುವಂತೆ ಅದಾನಿ ಸಮೂಹದ ಕೆಲವು ಕಂಪನಿಗಳನ್ನ ಕಾನೂನು ಅಡಿಯಲ್ಲಿ ಸೆಬಿ ತನಿಖೆ ನಡೆಸುತ್ತಿದೆ.

ಏರಿಕೆಗೊಂಡ ಷೇರುಗಳು:
ಪಿಐ ಇಂಡಸ್ಟ್ರೀಸ್, ಭಾರತ್ ಎಲೆಕ್ಟ್ರಿಕ್, ಅಲ್ಕೀಮ್ ಲ್ಯಾಬ್, ಅಪೊಲೊ ಹಾಸ್ಪಿಟಲ್, ಎಲ್&ಟಿ ಇನ್ಫೋಟೆಕ್, ಎನ್‌ಟಿಪಿಸಿ, ಹೆಚ್‌ಪಿಸಿಎಲ್, ಡಾಬರ್ ಇಂಡಿಯಾ, ಟಾಟಾ ಪವರ್, ಬಿಪಿಸಿಎಲ್
ಇಳಿಕೆಗೊಂಡ ಷೇರುಗಳು:
ಇಂಡಸ್ ಟವರ್ಸ್, ಎಲ್&ಟಿ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಂ&ಎಂ ಫೈನಾನ್ಷಿಯಲ್, ವೊಡಾಫೋನ್ ಐಡಿಯಾ, ನಿಪ್ಪಾನ್
ಇನ್ನುಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.58ರಷ್ಟು ಕಡಿಮೆಯಾಗಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ. 0.31 ಪ್ರತಿಶತದಷ್ಟು ಕುಸಿದಿವೆ.


Click it and Unblock the Notifications