ಭಾರತೀಯ ಷೇರುಪೇಟೆ ಶುಕ್ರವಾರ (ಆಗಸ್ಟ್ 13) ಹೂಡಿಕೆದಾರರಿಗೆ ಶುಭ ನೀಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ ಮಟ್ಟದಲ್ಲಿ 55 ಸಾವಿರ ಗಡಿದಾಟಿದ್ದು, ದಿನದ ವಹಿವಾಟು ಅಂತ್ಯದಲ್ಲಿ 593 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ 593.31 ಪಾಯಿಂಟ್ಸ್ ಅಥವಾ ಶೇಕಡಾ 1.08ರಷ್ಟು ಹೆಚ್ಚಾಗಿ 55,437.29 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 164.70 ಪಾಯಿಂಟ್ಸ್ ಅಥವಾ ಶೇಕಡಾ 1.01ರಷ್ಟು ಏರಿಕೆಗೊಂಡು 16,529.10 ಪಾಯಿಂಟ್ಸ್‌ಗೆ ಜಿಗಿದಿದೆ.

ದಿನದ ವಹಿವಾಟು ಅಂತ್ಯದಲ್ಲಿ 1412 ಷೇರುಗಳು ಏರಿಕೆಗೊಂಡರೆ, 1583 ಷೇರುಗಳು ಕುಸಿದವು ಮತ್ತು 81 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಟಿಸಿಎಸ್, ಎಲ್&ಟಿ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್ನಾಲಜೀಸ್ ನಿಫ್ಟಿಯಲ್ಲಿ ಹೆಚ್ಚು ಲಾಭಗಳಿಸಿದ ಷೇರುಗಳಾಗಿದ್ದು, ಐಷರ್ ಮೋಟಾರ್ಸ್, ಡಾ. ರೆಡ್ಡಿ ಲ್ಯಾಬ್ಸ್, ಸಿಪ್ಲಾ, ಪವರ್‌ಗ್ರಿಡ್ ಕಾರ್ಪ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಷೇರುಗಳು ಕುಸಿತಗೊಂಡಿವೆ.
ಫಾರ್ಮಾ ಹೊರತುಪಡಿಸಿ ಇತರೆ ಬಹುತೇಕ ಎಲ್ಲಾ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡು ಶೇಕಡಾ 1ರಷ್ಟು ಏರಿಕೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಮತಟ್ಟಾಗಿವೆ.


Click it and Unblock the Notifications