ನಿರೀಕ್ಷೆಯಂತೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಸ್ಥಿರವಾಗಿರಿಸಿಕೊಂಡಿದೆ. ಬಹುತೇಕ ತಜ್ಞರುಗಳು ಜೂನ್ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ರೆಪೋ ದರ ಪರಿಷ್ಕರಣೆ ಮಾಡದು ಎಂದು ಅಭಿಪ್ರಾಯಿಸಿದ್ದರು, ಅದರಂತೆಯೇ ಕೇಂದ್ರ ಬ್ಯಾಂಕ್ ನಿರ್ಧಾರವನ್ನು ಕೈಗೊಂಡಿದೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರವನ್ನು ಘೋಷಣೆ ಮಾಡುವುದಕ್ಕೂ ಮುನ್ನ, ಅಂದರೆ 10 ಗಂಟೆಗೆ ಸೆನ್ಸೆಕ್ಸ್ 78.1 ಪಾಯಿಂಟ್ ಅಥವಾ ಶೇ.0.12ರಷ್ಟು ಏರಿಕೆಯಾಗಿ, 63,221.07ಕ್ಕೆ ತಲುಪಿದೆ. ನಿಫ್ಟಿ 23.30 ಅಂಕ, ಶೇ.0.12ರಷ್ಟು ಜಿಗಿತ ಕಂಡು 18,749.70ಕ್ಕೆ ತಲುಪಿದೆ. 1902 ಷೇರುಗಳು ಏರಿಕೆಯಾಗಿದ್ದರೆ, 1041 ಷೇರುಗಳು ಇಳಿಕೆಯಾಗಿದೆ. 110 ಷೇರುಗಳು ಸ್ಥಿರವಾಗಿತ್ತು.

ಆದರೆ ರೆಪೋ ದರವನ್ನು ಘೋಷಣೆ ಮಾಡಿದ ಬಳಿಕ ಸೆನ್ಸೆಕ್ಸ್ ಸುಮಾರು ಶೇಕಡ 150 ಅಂಕ ಜಿಗಿತ ಕಂಡಿದ್ದರೆ, ನಿಫ್ಟಿ ಟಾಪ್ 18,750ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ರೆಪೋ ದರ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಈ ನಡುವೆ ನಾವು ಏಪ್ರಿಲ್‌ನಲ್ಲಿದ್ದ ಷೇರು ಮಾರುಕಟ್ಟೆ ಸ್ಥಿತಿಗೂ ಪ್ರಸ್ತುತ ಇರುವ ಸ್ಟಾಕ್ ಸ್ಥಿತಿಗೂ ಸ್ಪಷ್ಟವಾದ ವ್ಯತ್ಯಾಸ ಕಾಣಬಹುದಾಗಿದೆ.
ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಹೇಗಿದೆ?
ಇಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 57.30 ಪಾಯಿಂಟ್ ಅಥವಾ ಶೇ.0.09ರಷ್ಟು ಏರಿಕೆಯಾಗಿ, 63,200.26ಕ್ಕೆ ತಲುಪಿದೆ. ನಿಫ್ಟಿ 12.60 ಅಂಕ, ಶೇ.0.07ರಷ್ಟು ಜಿಗಿತ ಕಂಡು 18,739ಕ್ಕೆ ತಲುಪಿದೆ. 1594 ಷೇರುಗಳು ಏರಿಕೆಯಾಗಿದ್ದರೆ, 565 ಷೇರುಗಳು ಇಳಿಕೆಯಾಗಿದೆ. 112 ಷೇರುಗಳು ಸ್ಥಿರವಾಗಿತ್ತು.
ಹೀರೋ ಮೋಟೊಕಾರ್ಪ್, ಪವರ್ ಗ್ರಿಡ್ ಕಾರ್ಪ್, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ನೆಸ್ಲೆ ಸ್ಟಾಕ್ ಲಾಭವನ್ನು ಗಳಿಸಿದ್ದರೆ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಿಪಿಸಿಎಲ್, ಈಚರ್ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಸ್ಟಾಕ್ ನಷ್ಟವನ್ನು ಕಂಡಿದೆ.
ಈ ಸಮಯಕ್ಕೆ ಜೆಎಸ್‌ಡಬ್ಲ್ಯೂ ಸ್ಟೀಲ್ ಅತೀ ದೊಡ್ಡ ಗೇನರ್ ಆಗಿದ್ದು, ಸ್ಟಾಕ್ ಶೇಕಡ 4.32ರಷ್ಟು ಏರಿಕೆಯಾಗಿ 761.30 ರೂಪಾಯಿಗೆ ತಲುಪಿದೆ. ಇನ್ನು ಅಪೋಲೋ ಹಾಸ್ಪಿಟಲ್ ಸ್ಟಾಕ್ ಭಾರೀ ನಷ್ಟವನ್ನು ಕಂಡ ಸ್ಟಾಕ್ ಆಗಿದೆ. ಷೇರು ಶೇಕಡ 1.36ರಷ್ಟು ಇಳಿಕೆಯಾಗಿ, 4,958 ರೂಪಾಯಿಗೆ ತಲುಪಿದೆ.
ನಿಫ್ಟಿ ಮೆಟಲ್ ಸ್ಟಾಕ್ ಬೆಸ್ಟ್ ಸೆಕ್ಟರ್ ಆಗಿದ್ದು, ಶೇಕಡ 1.26ರಷ್ಟು ಜಿಗಿದು 6133.85 ರೂಪಾಯಿ ಆಗಿದೆ. ನಿಫ್ಟಿ ಐಟಿ ಅತೀ ಕೆಟ್ಟ ಪ್ರದರ್ಶನವನ್ನು ತೋರುತ್ತಿದ್ದು, ಶೇಕಡ 0.55ರಷ್ಟು ಕುಸಿದು 28,755.80 ರೂಪಾಯಿಗೆ ಇಳಿದಿದೆ. ಪೇಟಿಎಂ, ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟಾಕ್‌ಗಳಲ್ಲಿ ಹೆಚ್ಚಿನ ವಹಿವಾಟು ಕಂಡುಬರುತ್ತಿದೆ.


Click it and Unblock the Notifications