ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು 25 ಬಿಪಿಎಸ್ ಏರಿಕೆ ಮಾಡಬಹುದು ಎಂದುಕೊಳ್ಳುತ್ತಿದ್ದಂತೆ ಆರ್‌ಬಿಐ ಆಶ್ವರ್ಯಕರ ನಿರ್ಧಾರವನ್ನು ಕೈಗೊಂಡಿದೆ. ಸುಮಾರು 6 ಬಾರಿ ರೆಪೋ ದರವನ್ನು ಏರಿಕೆ ಮಾಡಿದ್ದ ಆರ್‌ಬಿಐ ಏಪ್ರಿಲ್ ಎಂಪಿಸಿ ಸಭೆಯ ಬಳಿಕ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವವರಿಗೆ ರಿಲೀಫ್ ದೊರೆತಿದೆ. ಇನ್ನು ಆರ್‌ಬಿಐ ತನ್ನ ವಿತ್ತೀಯ ನೀತಿಯನ್ನು ಘೋಷಣೆ ಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ.
ಇನ್ನು ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟನ್ನು ಆರಂಭ ಮಾಡಿತ್ತು. ಏಪ್ರಿಲ್ 6ರಂದು ಭಾರತೀಯ ಮಾರುಕಟ್ಟೆ ಕುಸಿತದೊಂದಿಗೆ ವಹಿವಾಟಿಗೆ ಇಳಿದಿದ್ದು, ನಿಫ್ಟಿ 17500 ಆಸುಪಾಸಿನಲ್ಲಿತ್ತು. ಆರಂಭಿಕ ವಹಿವಾಟಿನಲ್ಲಿ ಅಂದರೆ ಬೆಳ್ಳಿಗ್ಗೆ ಸುಮಾರು 9:16ರ ಸಮಯಕ್ಕೆ ಸೆನ್ಸೆಕ್ಸ್ 123.63 ಪಾಯಿಂಟ್ ಅಥವಾ ಶೇ.0.21ರಷ್ಟು ಇಳಿಕೆಯಾಗಿ, 59,565.68ಕ್ಕೆ ತಲುಪಿದೆ. ನಿಫ್ಟಿ 31.40 ಅಂಕ, ಶೇ.0.18ರಷ್ಟು ಕುಸಿತ ಕಂಡು 17,525.60ಕ್ಕೆ ತಲುಪಿದೆ. 1190 ಷೇರುಗಳು ಏರಿಕೆಯಾಗಿದ್ದರೆ, 716 ಷೇರುಗಳು ಇಳಿಕೆಯಾಗಿದೆ. 92 ಷೇರುಗಳು ಸ್ಥಿರವಾಗಿತ್ತು.

ಆದರೆ ಆರ್‌ಬಿಐ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆಯನ್ನು ಮಾಡುತ್ತಿದ್ದಂತೆ ರೆಪೋ ದರ 100 ಮೂಲಾಂಕ ಏರಿಕೆಯಾಗಿದೆ. ಒಟ್ಟಾಗಿ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಸೆನ್ಸೆಕ್ಸ್ 131.97 ಪಾಯಿಂಟ್ ಅಥವಾ ಶೇ.0.22ರಷ್ಟು ಏರಿಕೆಯಾಗಿ, 59,821.28ಕ್ಕೆ ತಲುಪಿದೆ. ನಿಫ್ಟಿ 31.50 ಅಂಕ, ಶೇ.0.18ರಷ್ಟು ಕುಸಿತ ಕಂಡು 17,588.50ಕ್ಕೆ ತಲುಪಿದೆ. 2001 ಷೇರುಗಳು ಏರಿಕೆಯಾಗಿದ್ದರೆ, 900 ಷೇರುಗಳು ಇಳಿಕೆಯಾಗಿದೆ. 100 ಷೇರುಗಳು ಸ್ಥಿರವಾಗಿದೆ.
ಯಾವುದೇ ಸಂದರ್ಭದಲ್ಲಿ ಕ್ರಮಕೈಗೊಳ್ಳಲು ಆರ್‌ಬಿಐ ಹಿಂಜರಿಯದು
ಎಂಪಿಸಿ ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, "ಹಣಕಾಸು ವರ್ಷ 2024 ಹಣದುಬ್ಬರವು ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ. ಬೆಲೆ ಏರಿಕೆಗೆ ಕೊಂಚ ತಡೆ ಒಡ್ಡುವ ನಿಟ್ಟಿನಲ್ಲಿ ಸದ್ಯ ರೆಪೋ ದರವನ್ನು ಸ್ಥಿರವಾಗಿ ಇರಿಸಲಾಗಿದೆ. ಆದರೆ ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಆರ್‌ಬಿಐ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಸಂದರ್ಭ ಕಷ್ಟಕರವಾಗಿದ್ದರೆ ಎಂಪಿಸಿ ಆ ಸಂದರ್ಭವೇ ಕ್ರಮಕೈಗೊಳ್ಳಲಿದೆ," ಎಂದು ತಿಳಿಸಿದ್ದಾರೆ.
10:18ರ ಸಮಯಕ್ಕೆ ಸೆನ್ಸೆಕ್ಸ್ 150 ಅಂಕ ಏರಿಕೆ ಕಂಡಿದೆ. ಈ ಸಂದರ್ಭದಲ್ಲಿ ಎಲ್‌ಟಿ, ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಸನ್‌ಫಾರ್ಮಾ, ಭಾರ್ತಿ ಏರ್‌ಟೆಲ್, ಎಂ&ಎಂ, ಟಿಸಿಎಸ್, ಎಸ್‌ಬಿಐ ಇನ್ಶೂರೆನ್ಸ್ ಸ್ಟಾಕ್ ಏರಿಕೆಯಾಗಿದೆ. ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್, ವಿಪ್ರೋ, ಐಟಿಸಿ, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಟಾಟಾ ಮೋಟರ್ಸ್, ಎನ್‌ಟಿಪಿಸಿ, ಮಾರುತಿ, ಎಚ್‌ಡಿಎಎಫ್‌ಸಿ ಬ್ಯಾಂಕ್, ಟೈಟಾನ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ನೆಸ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್, ಟೆಕ್ ಎಂ, ಹಿಂದೂಸ್ತಾನ್ ಯೂನಿಲಿವರ್, ಎಚ್‌ಸಿಎಲ್ ಟೆಕ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್ ಸ್ಟಾಕ್ ಇಳಿಕೆ ಕಂಡಿದೆ.
ಇನ್ನು ಆರ್‌ಬಿಐನ ಘೋಷಣೆಯಂತೆ ಆಸಕ್ತಿದಾಯಕ ಬೆಳವಣಿಗೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಟಾಪ್ ಗೇನರ್ ಆಗಿದೆ. ಹಿಂಡನ್‌ಬರ್ಗ್ ವರದಿ ಬಳಿಕ ನಿರಂತರವಾಗಿ ಕುಸಿತ ಕಾಣುತ್ತಿದ್ದ ಅದಾನಿ ಗ್ರೂಪ್ ಸ್ಟಾಕ್‌ಗಳು ಪುಟಿದೆದ್ದಿದೆ. ಈ ಸಮಯದ ಟಾಪ್ ಗೇನರ್ ಸ್ಟಾಕ್ ಆಗಿರುವ ಅದಾನಿ ಎಂಟರ್‌ಪ್ರೈಸಸ್ ಶೇಕಡ 3.86ರಷ್ಟು ಏರಿಕೆ ಕಂಡು 1763.55 ರೂಪಾಯಿಗೆ ತಲುಪಿದೆ. ಇನ್ನು ಒಎನ್‌ಜಿಸಿ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 1.47ರಷ್ಟು ಇಳಿದು 150.65 ರೂಪಾಯಿಗೆ ತಲುಪಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಬೆಸ್ಟ್ ಸೆಕ್ಟರ್ ಆಗಿದ್ದು ಶೇಕಡ 1.46ರಷ್ಟು ಏರಿಕೆಯಾಗಿದೆ. ನಿಫ್ಟಿ ಎಫ್‌ಎಂಸಿಜಿ ಭಾರೀ ನಷ್ಟವನ್ನು ಕಂಡ ಸೆಕ್ಟರ್ ಆಗಿದೆ.


Click it and Unblock the Notifications