ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಐದನೇ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಕೊಂಚ ಏರಿಕೆಯನ್ನು ಕಂಡಿದೆ. ಈ ನಡುವೆಯೇ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಎಲ್ಲ ಹಣಕಾಸು ಮಾರುಕಟ್ಟೆ ಬೆಳ್ಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಣೆ ಮಾಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಆದರೆ 11 ಗಂಟೆ ಸುಮಾರಿಗೆ ಸೆನ್ಸೆಕ್ಸ್ 150 ಅಂಕ ಕುಸಿತ ಕಂಡಿದೆ.
ಈ ಹಿಂದೆ ಷೇರು ಮಾರುಕಟ್ಟೆ ಬೆಳ್ಳಿಗ್ಗೆ 09:15ಕ್ಕೆ ವಹಿವಾಟು ಆರಂಭ ಮಾಡಿ, ಸಂಜೆ 03:30ಕ್ಕೆ ಅಂತಿಮ ವಹಿವಾಟು ನಡೆಸುತ್ತಿತ್ತು. "ಇನ್ನು ಬೆಳ್ಳಿಗ್ಗೆ 09ರಿಂದ ಸಂಜೆ 5 ಗಂಟೆಯವರೆಗೆ ಎಲ್ಲ ಮಾರುಕಟ್ಟೆಗಳು ಕಾರ್ಯನಿರ್ವಹಣೆ ಮಾಡಲಿದೆ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿರುವುದಾಗಿ ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 208 ಅಂಕ ಇಳಿಕೆಯಾಗಿ 62,626.36ಕ್ಕೆ ತಲುಪಿದೆ. ಇನ್ನು ನಿಫ್ಟಿ 58 ಅಂಕ ಕುಸಿದು 18,642.75ಕ್ಕೆ ವಹಿವಾಟು ಆರಂಭ ಮಾಡಿದೆ. ಆದರೆ ರೆಪೋ ದರ ಏರಿಕೆ ಬಳಿಕ ಷೇರುಪೇಟೆ ಕೊಂಚ ಏರಿಕೆಯಾಗಿದೆ. ಇನ್ನು ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 65 ಪೈಸೆ ಕುಸಿದಿದ್ದು 82.50ಕ್ಕೆ ತಲುಪಿದೆ.

ರೆಪೋ ದರ ಏರುತ್ತಿದ್ದಂತೆ ಬ್ಯಾಂಕಿಂಗ್ ಸ್ಟಾಕ್ ಜಿಗಿತ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಳ ಮಾಡುತ್ತಿದ್ದಂತೆ ಬಹುತೇಕ ಬ್ಯಾಂಕ್ ಸ್ಟಾಕ್‌ಗಳು ಜಿಗಿದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಸಿಒ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸಿಎಸ್‌ಬಿ ಬ್ಯಾಂಕ್ ಲಿಮಿಟೆಡ್, ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಬ್ಯಾಂಕ್ ಆಫ್ ಮಹಾರಾಷ್ಟ್ರ,, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್ ಸ್ಟಾಕ್‌ಗಳು ಏರಿಕೆಯಾಗಿದೆ. ಅದರಲ್ಲೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಕ್ ಶೇಕಡ 7ರಷ್ಟು ಹೆಚ್ಚಳ ಕಂಡಿದೆ.
ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಎಲ್‌ಟಿ, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಹಿಂದೂಸ್ತಾನ್ ಯೂನಿಲಿವರ್, ಎಸ್‌ಬಿಐ ಇನ್ಶೂರೆನ್ಸ್, ಸನ್‌ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಐಟಿಸಿ, ಡಾ ರೆಡ್ಡೀಸ್ ಸ್ಟಾಕ್ ಏರಿಕೆಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ನೆಸ್ಲೆ ಇಂಡಿಯಾ, ರಿಲಯನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಎಚ್‌ಡಿಎಫ್‌ಸಿ, ಟೈಟಾನ್, ಎಂ&ಎಂ, ಟೆಕ್ ಎಂ, ಮಾರುತಿ, ಎಚ್‌ಸಿಎಲ್ ಟೆಕ್, ಟಿಸಿಎಸ್, ವಿಪ್ರೋ, ಕೋಟಕ್ ಬ್ಯಾಂಕ್ ಎನ್‌ಟಿಪಿಸಿ ಸ್ಟಾಕ್ ಇಳಿಕೆಯಾಗಿದೆ.


Click it and Unblock the Notifications