Closing Bell: ಸೆನ್ಸೆಕ್ಸ್ 78 ಪಾಯಿಂಟ್ಸ್ ಕುಸಿತ: ನಿಫ್ಟಿ 15 ಪಾಯಿಂಟ್ಸ್ ಇಳಿಕೆ

ಭಾರತದ ಷೇರುಪೇಟೆ ಮಂಗಳವಾರ ಭರ್ಜರಿ ಏರಿಕೆಯ ಬಳಿಕ ಬುಧವಾರ ಸಮತಟ್ಟಾಗಿ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 78 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಪಾಯಿಂಟ್ಸ್ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 77.94 ಪಾಯಿಂಟ್ಸ್ ಅಥವಾ ಶೇಕಡಾ 0.13ರಷ್ಟು ಕುಸಿದು 58,927.33 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ 15.30 ಪಾಯಿಂಟ್ಸ್ ಅಥವಾ ಶೇಕಡಾ 0.09ಱ್ಟು ಇಳಿಕೆಗೊಂಡು 17,546.70 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 2047 ಷೇರುಗಳು ಏರಿಕೆಗೊಂಡರೆ, 1113 ಪಾಯಿಂಟ್ಸ್ ಕುಸಿದಿದೆ. 162 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ಕೋಲ್ ಇಂಡಿಯಾದ ಷೇರು 162.10 ರೂ.ನಲ್ಲಿ ಕೊನೆಗೊಂಡಿದ್ದು, ಸುಮಾರು 6 ರೂ. ಹೆಚ್ಚಾಗಿದೆ. ಟೆಕ್ ಮಹೀಂದ್ರಾ ಷೇರುಗಳು ರೂ 52 ರ ಏರಿಕೆಯೊಂದಿಗೆ 1,513.60 ಕ್ಕೆ ಕೊನೆಗೊಂಡಿತು. ಟಾಟಾ ಮೋಟಾರ್ಸ್ ಷೇರುಗಳು ರೂ. 310.10 ಕ್ಕೆ ಕೊನೆಗೊಂಡಿದ್ದು, ರೂ. 8 ರಷ್ಟು ಏರಿಕೆಯಾಗಿದೆ. ಹಿಂಡಾಲ್ಕೊ ಷೇರು ರೂ. 463.00 ಕ್ಕೆ ಕೊನೆಗೊಂಡಿತು, ರೂ 12 ಹೆಚ್ಚಾಗಿದೆ. ಮಹೀಂದ್ರಾ & ಮಹೀಂದ್ರಾ ಷೇರು ರೂ 14 ರ ಏರಿಕೆಯೊಂದಿಗೆ 752.50 ರೂಗಳಲ್ಲಿ ಕೊನೆಗೊಂಡಿತು.

ಜೀ ಎಂಟರ್‌ಟೈನ್‌ಮೆಂಟ್ ಷೇರು ಏರಿಕೆ

ಜೀ ಎಂಟರ್‌ಟೈನ್‌ಮೆಂಟ್ ಷೇರು ಏರಿಕೆ

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ ಲಿಮಿಟೆಡ್, ಮನರಂಜನಾ ಕ್ಷೇತ್ರದ ಬಹುದೊಡ್ಡ ಸಂಸ್ಥೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ವಿಲೀನಗೊಳ್ಳಲಿದೆ. ಈ ಕುರಿತಾಗಿ ಮಂಡಳಿಯು ತಾತ್ವಿಕ ಒಪ್ಪಿಗೆಯನ್ನು ನೀಡಿರುವುದಾಗಿ ಜೀ ಎಂಟರ್‌ಟೈನ್‌ಮೆಂಟ್ ಬುಧವಾರ ತಿಳಿಸಿದೆ.

ಸೋನಿಯೊಂದಿಗೆ ಜೀ ಎಂಟರ್‌ಟೈನ್‌ಮೆಂಟ್ ವಿಲೀಗೊಳ್ಳುತ್ತಿದೆ ಎಂದು ಸುದ್ದಿ ಹೊರಬಿದ್ದ ಕೂಡಲೇ ಜೀ ಎಂಟರ್‌ಟೈನ್‌ಮೆಂಟ್ ಷೇರುಗಳು ಇಂದು ಏರಿಕೆಯಾದವು. ದಿನದ ವಹಿವಾಟು ಅಂತ್ಯಕ್ಕೆ ಎನ್‌ಎಸ್‌ಇನಲ್ಲಿ ಜೀ ಎಂಟರ್‌ಟೈನ್‌ಮೆಂಟ್ ಷೇರುಗಳು ಶೇಕಡಾ 30.50ರಷ್ಟು ಅಥವಾ 78 ರೂಪಾಯಿ ಏರಿಕೆಗೊಂಡು 333.70 ರೂಪಾಯಿಗೆ ತಲುಪಿದೆ. ಇನ್ನು ಬಿಎಸ್‌ಇನಲ್ಲಿ ಶೇಕಡಾ 31.86ರಷ್ಟು ಅಥವಾ 81.46 ರೂಪಾಯಿ ಹೆಚ್ಚಾಗಿ 337.10 ರೂಪಾಯಿಗೆ ತಲುಪಿದೆ.

 

ಇಳಿಕೆಗೊಂಡ ಪ್ರಮುಖ ಷೇರುಗಳು:

ಇಳಿಕೆಗೊಂಡ ಪ್ರಮುಖ ಷೇರುಗಳು:

ಎಚ್‌ಡಿಎಫ್‌ಸಿ ಷೇರುಗಳು ರೂ. 2,734.70 ರಲ್ಲಿ ಕೊನೆಗೊಂಡಿದ್ದು, ಸುಮಾರು 40 ರೂ. ಇಳಿಕೆಗೊಂಡಿದೆ. ನೆಸ್ಲೆ ಷೇರು ರೂ .264 ರಷ್ಟು ಇಳಿಕೆಯಾಗಿ ರೂ .19,925.20 ಕ್ಕೆ ಕೊನೆಗೊಂಡಿತು. ಕೋಟಕ್ ಮಹೀಂದ್ರಾ ಷೇರು ರೂ. 25 ರಷ್ಟು ಇಳಿಕೆಯಾಗಿ ರೂ .1,985.55 ಕ್ಕೆ ಕೊನೆಗೊಂಡಿತು. ಐಸಿಐಸಿಐ ಬ್ಯಾಂಕಿನ ಷೇರುಗಳು ರೂ .93 ರಷ್ಟು ಇಳಿಕೆಯಾಗಿ 703.35 ಕ್ಕೆ ಕೊನೆಗೊಂಡಿತು. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ರೂ .1533.70 ಕ್ಕೆ ಕೊನೆಗೊಂಡಿದ್ದು, ರೂ. 18 ರಷ್ಟು ಇಳಿಕೆಯಾಗಿದೆ.

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಚಿನ್ನದ ಬೆಲೆ ಏರಿಕೆ

ಚಿನ್ನದ ಬೆಲೆ ಏರಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ. ಬುಧವಾರ (ಸೆ. 22) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,000 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,180 ರೂಪಾಯಿಗೆ ಜಿಗಿದಿದೆ.

ಇನ್ನು ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನ ರೂ. 43,850 (350 ರೂ. ಏರಿಕೆ) ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 47,840 (380 ರೂ. ಏರಿಕೆ) ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 1100 ರೂಪಾಯಿ ಹೆಚ್ಚಾಗಿ 60,900 ರೂಪಾಯಿ ದಾಖಲಾಗಿದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+