For Quick Alerts
ALLOW NOTIFICATIONS  
For Daily Alerts

Closing Bell: ಏರಿಕೆಗೊಂಡಿದ್ದ ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತ

|

ಏರುಮುಖದತ್ತ ಸಾಗುತ್ತಿದ್ದ ಭಾರತದ ಷೇರುಪೇಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 44 ಪಾಯಿಂಟ್ಸ್ ಇಳಿಕೆಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 125 ಪಾಯಿಂಟ್ಸ್ ಅಥವಾ ಶೇಕಡಾ 0.21ರಷ್ಟು ಹೆಚ್ಚಾಗಿ 59,015.89 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 44 ಪಾಯಿಂಟ್ಸ್ ಅಥವಾ ಶೇಕಡಾ 0.25ರಷ್ಟು ಕುಸಿದು 17,585.15 ಪಾಯಿಂಟ್ಸ್ ಮುಟ್ಟಿದೆ.

ಇದಲ್ಲದೇ, ಒಟ್ಟು 3,442 ಕಂಪನಿಗಳು ಇಂದು ಬಿಎಸ್‌ಇಯಲ್ಲಿ ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಸುಮಾರು 1,245 ಷೇರುಗಳು ಏರಿಕೆಯಾದವು ಮತ್ತು 2,047 ಷೇರುಗಳು ಕುಸಿದವು. 150 ಕಂಪನಿಗಳ ಷೇರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಮತ್ತೊಂದೆಡೆ, ಇಂದು ಸಂಜೆ ಡಾಲರ್ ಎದುರು ರೂಪಾಯಿ 4 ಪೈಸೆ ಬಲಗೊಂಡು 73.48 ರೂ. ತಲುಪಿತು.

ಇನ್ನು ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ. 1.14 ರಷ್ಟು ಕುಸಿದಿದೆ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 1.06ರಷ್ಟು ನಷ್ಟದೊಂದಿಗೆ ಮುಚ್ಚಿದೆ.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ಕೋಟಕ್ ಮಹೀಂದ್ರಾ ಷೇರುಗಳು ರೂ .107 ರಷ್ಟು ಏರಿಕೆಯೊಂದಿಗೆ 2,007.95 ರೂಗಳಲ್ಲಿ ಕೊನೆಗೊಂಡಿತು. ಎಚ್‌ಡಿಎಫ್‌ಸಿ ಬ್ಯಾಂಕ್ ನ ಷೇರು ರೂ. 22 ರಷ್ಟು ಏರಿಕೆಯಾಗಿ 1,582.15 ರೂಪಾಯಿಗಳಿಗೆ ಮುಕ್ತಾಯವಾಯಿತು. ಈಚರ್ ಮೋಟಾರ್ಸ್ ನ ಷೇರುಗಳು ರೂ .38 ರಷ್ಟು ಏರಿಕೆಯಾಗಿ 2,898.55 ರೂಗಳಲ್ಲಿ ಕೊನೆಗೊಂಡಿತು. ಭಾರ್ತಿ ಏರ್‌ಟೆಲ್‌ನ ಷೇರುಗಳು ರೂ .728.15 ರಲ್ಲಿ ಕೊನೆಗೊಂಡಿದ್ದು, ಸುಮಾರು 10 ರೂಪಾಯಿಗಳ ಲಾಭದೊಂದಿಗೆ ಕೊನೆಗೊಂಡಿದೆ. ಮಾರುತಿ ಸುಜುಕಿಯ ಷೇರು 84 ರೂ.ಗಳ ಏರಿಕೆಯೊಂದಿಗೆ 7,014.45 ಕ್ಕೆ ಕೊನೆಗೊಂಡಿತು.

GST ಅಡಿಯಲ್ಲಿ ಬಂದಿತೇ ಪೆಟ್ರೋಲ್ ಮತ್ತು ಡೀಸೆಲ್ ?GST ಅಡಿಯಲ್ಲಿ ಬಂದಿತೇ ಪೆಟ್ರೋಲ್ ಮತ್ತು ಡೀಸೆಲ್ ?

ಇಳಿಕೆಗೊಂಡ ಪ್ರಮುಖ ಷೇರುಗಳು:

ಇಳಿಕೆಗೊಂಡ ಪ್ರಮುಖ ಷೇರುಗಳು:

ಟಾಟಾ ಸ್ಟೀಲ್ ನ ಷೇರುಗಳು ರೂ .385.90 ಕ್ಕೆ ಮುಕ್ತಾಯಗೊಂಡಿದ್ದು, ಸುಮಾರು 51 ರೂಪಾಯಿ ಇಳಿಕೆಯಾಗಿದೆ. ಕೋಲ್ ಇಂಡಿಯಾದ ಷೇರು ಸುಮಾರು ರೂ. 6 ರಷ್ಟು ಇಳಿಕೆಯಾಗಿ ರೂ 156.70 ಕ್ಕೆ ಕೊನೆಗೊಂಡಿತು. ಹಿಂಡಾಲ್ಕೊ ಷೇರು ರೂ. 473.05 ಕ್ಕೆ ಕೊನೆಗೊಂಡಿತು. ಎಸ್‌ಬಿಐನ ಷೇರು 454.10 ರೂಪಾಯಿಗೆ ತಲುಪಿದ್ದು, 10 ರೂ.ಗಳ ಕುಸಿತದೊಂದಿಗೆ ಕೊನೆಗೊಂಡಿತು. ಟಿಸಿಎಸ್ ನ ಷೇರುಗಳು 827.85 ಕ್ಕೆ ಕೊನೆಗೊಂಡಿದ್ದು, ರೂ .75 ರಷ್ಟು ಇಳಿಕೆಯಾಗಿದೆ.

ಷೇರು ಖರೀದಿಸುವುದು ಹೇಗೆ?
 

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

English summary

Sensex And Nifty Snap 3 Day Winning Streak

Sensex closed 125 points, or 0.21 percent, lower at 59,015.89 while the Nifty finished at 17,585.15, down 44 points, or 0.25 percent.
Story first published: Friday, September 17, 2021, 16:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X