ಅಕ್ಟೋಬರ್‌ ಆರಂಭದಲ್ಲೇ ನಷ್ಟದಿಂದ ಶುರುವಾದ ಭಾರತದ ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ

ಭಾರತದ ಷೇರುಪೇಟೆ ಅಕ್ಟೋಬರ್ ತಿಂಗಳಿನಲ್ಲಿ ನಕಾರಾತ್ಮಕ ಆರಂಭ ಪಡೆದಿದ್ದು, ಶುಕ್ರವಾರ (ಅ.1) ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 110 ಪಾಯಿಂಟ್ಸ್ ಇಳಿಕೆಗೊಂಡಿದೆ.

9.17ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.67ರಷ್ಟು ಅಥವಾ 394.26 ಪಾಯಿಂಟ್ಸ್ ಕುಸಿದು 58,732.10 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 110 ಪಾಯಿಂಟ್ಸ್ ಅಥವಾ ಶೇಕಡಾ 0.62ರಷ್ಟು ಇಳಿಕೆಗೊಂಡು 17508.20 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟಿನ ಆರಂಭದಲ್ಲಿ 807 ಷೇರುಗಳು ಏರಿಕೆಗೊಂಡರೆ, 981 ಷೇರುಗಳು ಕುಸಿದವು ಮತ್ತು 117 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಒಎನ್ ಜಿಸಿ ಷೇರು 146.10 ರೂ.ನಲ್ಲಿ ಆರಂಭವಾಗಿದ್ದು ಸುಮಾರು 2 ರೂ. ಗಳಿಸಿದೆ. ದೇವಿ ಲ್ಯಾಬ್ಸ್‌ನ ಷೇರುಗಳು ರೂ. 4,815.85 ರಲ್ಲಿ ಆರಂಭವಾಗಿದ್ದು, 17 ರೂ. ಏರಿಕೆಗೊಂಡಿದೆ. ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ಸುಮಾರು ರೂ 1 ರಷ್ಟು ಏರಿಕೆಯಾಗಿ ರೂ 190.50 ಮಟ್ಟದಲ್ಲಿ ಪ್ರಾರಂಭವಾಯಿತು. ಟಿಸಿಎಸ್ ಷೇರುಗಳು ರೂ. 28 ರಷ್ಟು ಏರಿಕೆಯಾಗಿ 3,803.25 ರೂ. ಮುಟ್ಟಿದೆ. ಅಲ್ಟ್ರಾ ಟೆಕ್ ಸಿಮೆಂಟ್ ನ ಷೇರು ರೂ. 7,401.25 ರಲ್ಲಿ ಆರಂಭವಾಗಿದ್ದು, ಸುಮಾರು ರೂ .5 ಗಳಿಸಿದೆ.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಮಾರುತಿ ಸುಜುಕಿಯ ಷೇರು 7,146.25 ಕ್ಕೆ ಪ್ರಾರಂಭವಾಗಿದ್ದು, ಇದು ಸುಮಾರು 192 ರೂಪಾಯಿಗಳಷ್ಟು ಕಡಿಮೆಯಾಗಿದೆ. ಹಿಂಡಾಲ್ಕೊ ಷೇರು ರೂ. 478.70 ಕ್ಕೆ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು ರೂ. 1,268.65 ಕ್ಕೆ ಆರಂಭವಾಗಿದ್ದು, ಸುಮಾರು 20 ರೂ. ಕುಸಿದಿದೆ. ಐಸಿಐಸಿಐ ಬ್ಯಾಂಕ್‌ನ ಷೇರುಗಳು ರೂ. 690.75 ಕ್ಕೆ ಆರಂಭವಾಗಿದ್ದು, ಸುಮಾರು ರೂ. 10 ರಷ್ಟು ಇಳಿಕೆಯಾಗಿದೆ. ಎಸ್‌ಬಿಐನ ಸ್ಟಾಕ್ ರೂ. 445.75 ಕ್ಕೆ ಆರಂಭವಾಯಿತು.

ಆಟೊಮೊಬೈಲ್ ವಲಯದ ಬಹುತೇಕ ಷೇರುಗಳ ಕುಸಿತ

ಆಟೊಮೊಬೈಲ್ ವಲಯದ ಬಹುತೇಕ ಷೇರುಗಳ ಕುಸಿತ

ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಸೆಪ್ಟೆಂಬರ್ ಮಾರಾಟದ ದತ್ತಾಂಶದ ನಿರೀಕ್ಷೆಗಳ ನಡುವೆ ಆಟೋಮೊಬೈಲ್ ಉತ್ಪಾದನಾ ಕಂಪನಿಗಳ ಷೇರುಗಳು ಶುಕ್ರವಾರ ಬಹುತೇಕ ಇಳಿಕೆಯೊಂದಿಗೆ ಆರಂಭ ಪಡೆದಿವೆ. ವಾಹನ ಕಂಪನಿಗಳು ತಮ್ಮ ಮಾಸಿಕ ಮಾರಾಟ ಅಂಕಿಅಂಶವನ್ನು ಶುಕ್ರವಾರ ವರದಿ ಮಾಡಲಿವೆ.

ಐಷರ್ ಮೋಟಾರ್ಸ್, ಬಜಾಜ್ ಆಟೋ, ಹೀರೋ ಮೋಟೋಕಾರ್ಪ್ ಮತ್ತು ಮಾರುತಿ ಸುಜುಕಿ ಶೇ 1ಕ್ಕಿಂತ ಹೆಚ್ಚು ಇಳಿಕೆಯಾಗಿದ್ದು, ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ ಕಂಪನಿ ಭಾರೀ ಇಳಿಕೆಯತ್ತ ಮುಖಮಾಡಿವೆ.

 

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಡಾಲರ್ ಎದುರು ರೂಪಾಯಿ

ಡಾಲರ್ ಎದುರು ರೂಪಾಯಿ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ದುರ್ಬಲತೆಯಿಂದ ಆರಂಭವಾಯಿತು. ಇಂದು ಡಾಲರ್ ಎದುರು ರೂಪಾಯಿ 9 ಪೈಸೆ ದೌರ್ಬಲ್ಯದೊಂದಿಗೆ 74.32 ರೂ. ತಲುಪಿದೆ. ಅದೇ ಸಮಯದಲ್ಲಿ, ಗುರುವಾರ, ರೂಪಾಯಿ ಡಾಲರ್ ಎದುರು 8 ಪೈಸೆ ದೌರ್ಬಲ್ಯದೊಂದಿಗೆ 74.23 ರೂ. ಮುಟ್ಟಿತ್ತು. ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+