ಸತತ ನಾಲ್ಕು ದಿನಗಳ ಇಳಿಕೆ ಹಾದಿಯಿಂದ ಶುಕ್ರವಾರ ಏರಿಕೆಗೆ ಮರಳಿವೆ ಸೆನ್ಸೆಕ್ಸ್, ನಿಫ್ಟಿ. 1627.75 ಪಾಯಿಂಟ್ ಗಳ ಏರಿಕೆ ದಾಖಲಿಸಿರುವ ಸೆನ್ಸೆಕ್ಸ್, ದಿನಾಂತ್ಯಕ್ಕೆ 29,915.96 ಪಾಯಿಂಟ್ ಗಳೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು 482 ಪಾಯಿಂಟ್ ಗಳ ಏರಿಕೆ ದಾಖಲಿಸಿರುವ ನಿಫ್ಟಿ, 8745.45 ಪಾಯಿಂಟ್ ಗಳೊಂದಿಗೆ ವ್ಯವಹಾರ ಮುಗಿಸಿದೆ.
ನಿಫ್ಟಿ ದಿನದ ಕನಿಷ್ಠ ಮಟ್ಟವಾದ 8178.20 ಪಾಯಿಂಟ್ ನಿಂದ 567 ಪಾಯಿಂಟ್ ಮೇಲೇರಿದ್ದರೆ, ಸೆನ್ಸೆಕ್ಸ್ ದಿನದ ಕನಿಷ್ಠ ಮಟ್ಟವಾದ 27,932.67 ಪಾಯಿಂಟ್ ನಿಂದ 1983 ಪಾಯಿಂಟ್ ಮೇಲೇರಿದೆ.

ನಿಫ್ಟಿಯಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಭಾರ್ತಿ ಇನ್ ಫ್ರಾಟೆಲ್
ಒಎನ್ ಜಿಸಿ
ಗೇಲ್
ಅಲ್ಟ್ರಾಟೆಕ್ ಸಿಮೆಂಟ್
ಹಿಂದೂಸ್ಥಾನ್ ಯುನಿಲಿವರ್
ಸೆನ್ಸೆಕ್ಸ್ ನಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಒಎನ್ ಜಿಸಿ
ಅಲ್ಟ್ರಾಟೆಕ್ ಸಿಮೆಂಟ್
ಹಿಂದೂಸ್ತಾನ್ ಯುನಿಲಿವರ್
ರಿಲಯನ್ಸ್
ಟಿಸಿಎಸ್
ಈ ಏರಿಕೆಗೆ ಮಾರುಕಟ್ಟೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯುರೋಪ್ ಷೇರು ಮಾರುಕಟ್ಟೆಗಳಲ್ಲಿ ಹಾಗೂ ಯು.ಎಸ್. ಡೌ ಫ್ಯೂಚರ್ಸ್ ನಲ್ಲಿ ಏರಿಕೆ ಕಂಡು ಬಂದಿದ್ದರಿಂದ ಭಾರತದಲ್ಲಿ ಆ ಪರಿಣಾಮ ಆಗಿದೆ ಎನ್ನಲಾಗುತ್ತಿದ್ದು, ಇದು ಶಾರ್ಟ್ ಕವರಿಂಗ್ ಏರಿಕೆ ಎಂದು ಕೂಡ ಅಭಿಪ್ರಾಯ ಪಡುತ್ತಿದ್ದಾರೆ.


Click it and Unblock the Notifications