For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ: ಅಲ್ಟ್ರಾಟೆಕ್ ಸಿಮೆಂಟ್ ಮುಂಚೂಣಿ ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಗಳವಾರ (ಜುಲೈ 28, 2020) ಭರ್ಜರಿ ಏರಿಕೆಯನ್ನು ದಾಖಲಿಸಿವೆ. ಸೆನ್ಸೆಕ್ಸ್ 558.22 ಪಾಯಿಂಟ್ ಏರಿಕೆ ಕಂಡು 38,492.55 ಪಾಯಿಂಟ್ ನಲ್ಲಿ ಹಾಗೂ ನಿಫ್ಟಿ 168.75 ಪಾಯಿಂಟ್ ಹೆಚ್ಚಳವಾಗಿ 11,300.55 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿವೆ.

ವಾಹನ, ಮಾಹಿತಿ ತಂತ್ರಜ್ಞಾನ (ಐ.ಟಿ.) ಹಾಗೂ ಲೋಹದ ಕಂಪೆನಿ ಷೇರುಗಳು ಈ ಏರಿಕೆಯ ನೇತೃತ್ವ ವಹಿಸಿದ್ದವು. 1315 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 1300 ಕಂಪೆನಿ ಷೇರುಗಳು ಕುಸಿದವು ಹಾಗೂ 151 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ವಹಿವಾಟು ಮುಕ್ತಾಯಗೊಳಿಸಿದವು.

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಈ ವರ್ಷದ ಮಾರ್ಚ್ 24ನೇ ತಾರೀಕು ನಿಫ್ಟಿ ಸೂಚ್ಯಂಕವು 7511 ಪಾಯಿಂಟ್ ನೊಂದಿಗೆ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಅಲ್ಲಿಂದ ಈ ವರೆಗೆ 48 ಪರ್ಸೆಂಟ್ ಹೆಚ್ಚಳ ದಾಖಲಿಸಿದೆ.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು
ಅಲ್ಟಾಟೆಕ್ ಸಿಮೆಂಟ್

ಟಾಟಾ ಮೋಟಾರ್ಸ್

ಟಿಸಿಎಸ್

ಕೊಟಕ್ ಮಹೀಂದ್ರಾ

ಗ್ರಾಸಿಮ್

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ: ಅಲ್ಟ್ರಾಟೆಕ್ ಸಿಮೆಂಟ್ ಮುಂಚೂಣಿ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಭಾರ್ತಿ ಇನ್ ಫ್ರಾಟೆಲ್

ಐಸಿಐಸಿಐ ಬ್ಯಾಂಕ್

ನೆಸ್ಟ್ಲೆ

ಒಎನ್ ಜಿಸಿ

ಏಷ್ಯನ್ ಪೇಂಟ್ಸ್

English summary

Sensex And Nifty Surge On July 28; Ultra Tech Cement Top Gainer

Indian stock market index sensex and nifty surge on July 28. Ultra Tech Cement top gainer in nifty.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X