For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ: 59,500 ಪಾಯಿಂಟ್ಸ್ ಗಡಿದಾಟಿದೆ

|

ಭಾರತದ ಷೇರುಪೇಟೆ ಶುಕ್ರವಾರ ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 59,500 ಪಾಯಿಂಟ್ಸ್ ಗಡಿದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು 110 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 413.10 ಪಾಯಿಂಟ್ಸ್ ಅಥವಾ ಶೇಕಡಾ 0.70ರಷ್ಟು ಹೆಚ್ಚಾಗಿ 59554.26 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 110.8 ಪಾಯಿಂಟ್ಸ್ ಅಥವಾ ಶೇಕಡಾ 0.63ರಷ್ಟು ಏರಿಕೆಗೊಂಡು 17740.30 ಪಾಯಿಂಟ್ಸ್ ಮುಟ್ಟಿದೆ.

ಇಂದು, ಬಿಎಸ್‌ಇಯಲ್ಲಿ ಒಟ್ಟು 1,851 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ 1,363 ಷೇರುಗಳು ಏರಿಕೆಗೊಂಡರೆ, 398 ಷೇರುಗಳು ಕುಸಿದವು. ಅದೇ ಸಮಯದಲ್ಲಿ, 90 ಕಂಪನಿಗಳ ಷೇರು ಬೆಲೆ ಯಾವುದೇ ರೀತಿಯಲ್ಲಿ ವ್ಯತ್ಯಾಸಗೊಳ್ಳದೆ ಆರಂಭವಾಯಿತು.

ಏರಿಕೆಗೊಂಡ ಪ್ರಮುಖ ಷೇರುಗಳು:

ಏರಿಕೆಗೊಂಡ ಪ್ರಮುಖ ಷೇರುಗಳು:

ಐಟಿಸಿಯ ಷೇರು ಸುಮಾರು 5 ರೂ. ಹೆಚ್ಚಾಗಿ 235.75 ರೂ.ನಲ್ಲಿ ಆರಂಭವಾಯಿತು. ಎಸ್‌ಬಿಐನ ಷೇರುಗಳು ಸುಮಾರು ರೂ .7 ಗಳಿಕೆಯೊಂದಿಗೆ ಪ್ರಾರಂಭವಗಿ 770.40 ರಲ್ಲಿ ಪ್ರಾರಂಭವಾದವು. ಎಸ್‌ಬಿಐ ಲೈಫ್‌ನ ಷೇರು ರೂ .1198.40 ಕ್ಕೆ ಪ್ರಾರಂಭವಾಯಿತು, ರೂ. 14 ಹೆಚ್ಚಾಗಿದೆ. ಆಕ್ಸಿಸ್ ಬ್ಯಾಂಕಿನ ಷೇರುಗಳು ರೂ. 811.80 ರಲ್ಲಿ ಆರಂಭವಾಗಿದ್ದು, ಸುಮಾರು ರೂ .9 ಗಳಿಸಿದೆ. ಐಷರ್ ಮೋಟಾರ್ಸ್ ನ ಷೇರುಗಳು ರೂ .2887.75 ಕ್ಕೆ ಆರಂಭವಾಗಿದ್ದು, ರೂ .28 ರಷ್ಟು ಏರಿಕೆಯಾಗಿದೆ.

ಸತತ 12ನೇ ದಿನ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ: ಸೆ. 17ರ ರೇಟ್ ಇಲ್ಲಿದೆಸತತ 12ನೇ ದಿನ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ: ಸೆ. 17ರ ರೇಟ್ ಇಲ್ಲಿದೆ

ಇಳಿಕೆಗೊಂಡ ಪ್ರಮುಖ ಷೇರುಗಳು:

ಇಳಿಕೆಗೊಂಡ ಪ್ರಮುಖ ಷೇರುಗಳು:

ಟಾಟಾ ಸ್ಟೀಲ್ ನ ಷೇರುಗಳು ರೂ. 1,426.40 ಕ್ಕೆ ಆರಂಭವಾಗಿದ್ದು, ಸುಮಾರು ರೂ. 10 ರಷ್ಟು ಇಳಿಕೆಯಾಗಿದೆ. ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ. 686.95 ಕ್ಕೆ ಆರಂಭವಾಗಿದ್ದು, ಸುಮಾರು ರೂ. 3 ರಷ್ಟು ಇಳಿಕೆಯಾಗಿದೆ. ಇನ್ಫೋಸಿಸ್ ಷೇರುಗಳು ರೂ. 1,698.95 ರಲ್ಲಿ ಪ್ರಾರಂಭವಾದವು, ಸುಮಾರು 3 ರೂ. ಕುಸಿದಿದೆ. ಎಚ್‌ಸಿಎಲ್ ಟೆಕ್‌ನ ಷೇರುಗಳು ರೂ .1,261.65 ಕ್ಕೆ ಪ್ರಾರಂಭವಾಗಿದ್ದು, ಸುಮಾರು 1 ರೂ. ಕುಸಿದಿದೆ. ಎನ್‌ಟಿಪಿಸಿ ಷೇರುಗಳು ರೂ. 123.90 ಕ್ಕೆ ಆರಂಭವಾಗಿದ್ದು, ಸುಮಾರು 10 ಪೈಸೆ ಇಳಿಕೆಯಾಗಿದೆ.

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಚಿನ್ನದ ಬೆಲೆ ಇಳಿಕೆ

ಚಿನ್ನದ ಬೆಲೆ ಇಳಿಕೆ

ಕಳೆದ ವಹಿವಾಟಿನಲ್ಲಿ ಭಾರೀ ಕುಸಿತದ ನಂತರ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತಷ್ಟು ಇಳಿಕೆಯ ಹಾದಿ ಹಿಡಿದಿದೆ. ಎಂಸಿಎಕ್ಸ್‌ನಲ್ಲಿ, ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಂಗೆ 46,050 ರೂಪಾಯಿಗೆ ಇಳಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 0.26% ನಷ್ಟು ಇಳಿಕೆಗೊಂಡು 61,233 ಕ್ಕೆ ಏರಿಕೆಯಾಗಿದೆ. ಕಳೆದ ವಹಿವಾಟಿನಲ್ಲಿ, ಚಿನ್ನವು ಪ್ರತಿ 10 ಗ್ರಾಂಗೆ 1.7% ಅಥವಾ 807 ರೂಪಾಯಿ ಕುಸಿದಿದೆ, ಈ ಮೂಲಕ ಮೂರು ದಿನಗಳಲ್ಲಿ 1200 ರೂಪಾಯಿ ಇಳಿದಿದೆ. ಕಳೆದ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 2150 ಅಥವಾ 3.5% ಕುಸಿದಿದೆ.

English summary

Sensex And Nifty Trade At Fresh Record High: Sensex Crosses 59500

The BSE index Sensex rose by 413.10 points, or 0.70 per cent, to 5,5554.26 points. The NSE Nifty gained 110.8 points, or 0.63 per cent, to 17740.30 points.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X