ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆ, ನಿಫ್ಟಿ 64 ಪಾಯಿಂಟ್ಸ್ ಹೆಚ್ಚಳ

ಭಾರತೀಯ ಷೇರುಪೇಟೆ ಮಂಗಳವಾರವೂ ಏರಿಕೆಯನ್ನ ಮುಂದುವರಿಸಿದ್ದು ಜಾಗತಿಕ ಸಕಾರಾತ್ಮಕ ಸೂಚನೆಗಳ ಬೆನ್ನಲ್ಲೇ ಜಿಗಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 64 ಪಾಯಿಂಟ್ಸ್ ಹೆಚ್ಚಳವಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.47ರಷ್ಟು ಅಥವಾ 257 ಪಾಯಿಂಟ್ಸ್ ಏರಿಕೆಗೊಂಡಿದ್ದು 54660.40 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.40ರಷ್ಟು ಅಥವಾ 64.55 ಪಾಯಿಂಟ್ಸ್‌ ಹೆಚ್ಚಾಗಿ 16322.80 ಪಾಯಿಂಟ್ಸ್‌ ಮುಟ್ಟಿದೆ.

ಇಂದು, ಬಿಎಸ್‌ಇಯಲ್ಲಿ ಒಟ್ಟು 1,417 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 829 ಷೇರುಗಳು ಏರಿಕೆಗೊಂಡರೆ, 487 ಷೇರುಗಳು ಕುಸಿತದೊಂದಿಗೆ ಪ್ರಾರಂಭವಾದವು. ಅದೇ ಸಮಯದಲ್ಲಿ, 101 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 257 ಪಾಯಿಂಟ್ಸ್ ಏರಿಕೆ, ನಿಫ್ಟಿ 64 ಪಾಯಿಂಟ್ಸ್ ಹೆಚ್ಚಳ

ಏರಿಕೆಗೊಂಡ ಷೇರುಗಳು:
ಎಚ್‌ಡಿಎಫ್‌ಸಿ ಷೇರುಗಳು 26 ರೂಪಾಯಿ ಏರಿಕೆಯಾಗಿ 2,649.90 ರೂ., ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು 670.70 ರೂ. ಆರಂಭವಾಗಿದ್ದು, ಟೈಟಾನ್ ಕಂಪನಿಯ ಷೇರು 14 ರೂಪಾಯಿ ಹೆಚ್ಚಾಗಿ 1,813.50 ರೂಪಾಯಿಗೆ ಪ್ರಾರಂಭವಾಯಿತು. ಕೋಟಕ್ ಮಹೀಂದ್ರಾ ಷೇರು 12 ರೂಪಾಯಿ ಹೆಚ್ಚಾಗಿ 1792.70 ಕ್ಕೆ ಪ್ರಾರಂಭವಾಯಿತು. ಬಜಾಜ್ ಫಿನ್‌ಸರ್ವ್‌ನ ಷೇರುಗಳು 74 ರೂಪಾಯಿ ಹೆಚ್ಚಾಗಿ 14,321.00 ಕ್ಕೆ ಪ್ರಾರಂಭವಾಯಿತು.

ಇಳಿಕೆಗೊಂಡ ಷೇರುಗಳು:
ಶ್ರೀ ಸಿಮೆಂಟ್ ನ ಷೇರುಗಳು 255 ರೂ. ಇಳಿಕೆಯಾಗಿ 27,508.30 ಕ್ಕೆ ಆರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಷನ್ ಷೇರುಗಳು 2 ರೂಪಾಯಿನಷ್ಟು ಕುಸಿದು 174.90 ರೂ. ತಲುಪಿದೆ. ಹೀರೋ ಮೋಟೋಕಾರ್ಪ್ ಷೇರುಗಳು 2,817.90 ಕ್ಕೆ ಪ್ರಾರಂಭವಾಯಿತು. ಬಜಾಜ್ ಆಟೋ ಷೇರು 13 ರೂಪಾಯಿ ಇಳಿಕೆಯಾಗಿ 3,842.20 ಕ್ಕೆ ಪ್ರಾರಂಭವಾಯಿತು. ಅಲ್ಟ್ರಾಟೆಕ್ ಸಿಮೆಂಟಾ ಷೇರುಗಳು 15 ರೂಪಾಯಿ ಇಳಿಕೆಯಾಗಿ 7,480.20 ಕ್ಕೆ ಆರಂಭವಾಯಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 211.91 ಕೋಟಿ ಮೌಲ್ಯದ ನಿವ್ವಳ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ 716.15 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಸತತ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಮಂಗಳವಾರ ಬಹು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಮೆರಿಕಾದ ಉದ್ಯೋಗ ಮಟ್ಟದಲ್ಲಿ ಬಲವಾದ ಏರಿಕೆ ಕಂಡ ಬಳಿಕ ಚಿನ್ನದ ಬೆಲೆ ಸತತ ಇಳಿಕೆ ಕಾಣುತ್ತಿದೆ.

ಇನ್ನು ಹಿಂದಿನ ಸೆಶನ್‌ನಲ್ಲಿ ಮೂರು ವಾರಗಳ ಕನಿಷ್ಠ ಮಟ್ಟದಿಂದ ಮಂಗಳವಾರ ತೈಲ ಬೆಲೆಗಳು ಏರಿಕೆಯಾದವು. ಆದರೆ ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಮತ್ತು ನಿರ್ಬಂಧಗಳು ಇಂಧನ ಬೇಡಿಕೆಯನ್ನು ತಗ್ಗಿಸುತ್ತವೆ ಎಂಬ ಆತಂಕದ ಮೇಲೆ ಲಾಭಗಳು ಸೀಮಿತವಾಗುವ ಸಾಧ್ಯತೆಯಿದೆ.

ದಿನದ ವಹಿವಾಟು ಅಂತ್ಯಕ್ಕೆ:
ಭಾರತೀಯ ಷೇರುಪೇಟೆ ಮಂಗಳವಾರ (ಆಗಸ್ಟ್ 10) ಹಸಿರು ಬಣ್ಣದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಶೇಕಡಾ 0.28ರಷ್ಟು ಅಥವಾ 151.81 ಪಾಯಿಂಟ್ಸ್ ಹೆಚ್ಚಳಗೊಂಡು 54554.66 ಪಾಯಿಂಟ್ಸ್ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇಕಡಾ 0.13ರಷ್ಟು ಅಥವಾ 21.80 ಪಾಯಿಂಟ್ಸ್ ಹೆಚ್ಚಾಗಿ 16280.10 ಪಾಯಿಂಟ್ಸ್ ತಲುಪಿದೆ.

ಇಂದು 679 ಷೇರುಗಳು ಏರಿಕೆಗೊಂಡರೆ, 2401 ಷೇರುಗಳು ಕುಸಿದವು ಮತ್ತು 98 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಐಟಿ ಹೊರತುಪಡಿಸಿ, ನಿಫ್ಟಿ ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ 2 ಪ್ರತಿಶತದಷ್ಟು ಕುಸಿದವು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು 2 ಪ್ರತಿಶತದಷ್ಟು ಕುಸಿದಿದ್ದರೆ, ಮಿಡ್‌ಕ್ಯಾಪ್ ಸೂಚ್ಯಂಕವು ಸುಮಾರು 1 ಪ್ರತಿಶತದಷ್ಟು ಕಡಿಮೆಯಾಗಿದೆ.

ಭಾರ್ತಿ ಏರ್‌ಟೆಲ್‌, ಟೆಕ್‌ ಮಹೀಂದ್ರಾ, ಎಚ್‌ಡಿಎಫ್‌ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಂ&ಎಂ ನಿಫ್ಟಿಯಲ್ಲಿ ಅಗ್ರಸ್ಥಾನಗಳಿಸಿದ್ದು, ಶ್ರೀ ಸಿಮೆಂಟ್ಸ್‌, ಜಿಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಪವರ್‌ ಗ್ರಿಡ್‌ ಕಾರ್ಪ್ ಮತ್ತು ಐಒಸಿ ಕುಸಿದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+