ಭಾರತದ ಷೇರುಪೇಟೆ ಮಂಗಳವಾರ ಕೂಡ ತನ್ನ ಓಟವನ್ನು ಮುಂದುವರಿಸಿದ್ದು, ಭರ್ಜರಿ ಜಿಗಿತವನ್ನು ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 57,000 ಗಡಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ರಾಷ್ಟ್ರೀಯ ಷೇರುಪೇಟೆ ನಿಪ್ಟಿ 17,000 ಗಡಿ ಸಮೀಪಿಸಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 11.30ರ ಸುಮಾರಿಗೆ ಶೇಕಡಾ 0.18ರಷ್ಟು ಅಥವಾ 104.64 ಪಾಯಿಂಟ್ಸ್ ಏರಿಎಕಗೊಂಡು 56,994.40 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 37.65 ಪಾಯಿಂಟ್ಸ್ ಅಥವಾ ಶೇಕಡಾ 0.22ರಷ್ಟು ಇಳಿಕೆಗೊಂಡು 16968.70 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟಿನ ಆರಂಭದಲ್ಲಿ ಇಂದು, ಬಿಎಸ್‌ಇಯಲ್ಲಿ ಒಟ್ಟು 1,355 ಕಂಪನಿಗಳಲ್ಲಿ ವಹಿವಾಟು ಆರಂಭವಾಯಿತು, ಅದರಲ್ಲಿ 929 ಷೇರುಗಳು ಏರಿಕೆಯೊಂದಿಗೆ ಮತ್ತು 326 ಕುಸಿತದೊಂದಿಗೆ ಪ್ರಾರಂಭವಾದವು. ಅದೇ ಸಮಯದಲ್ಲಿ, 100 ಕಂಪನಿಗಳ ಷೇರು ಬೆಲೆ ಯಾವುದೇ ಬದಲಾವಣೆ ಕಂಡಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು:
ಭಾರ್ತಿ ಏರ್‌ಟೆಲ್‌ನ ಷೇರುಗಳು 72 ರೂಪಾಯಿ ಲಾಭದೊಂದಿಗೆ 627.90 ರೂಪಾಯಿಗೆ ಆರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ಸುಮಾರು 1 ರೂಪಾಯಿ ಏರಿಕೆಯಾಗಿ 176.85 ರೂ., ದೇವಿ ಲ್ಯಾಬ್‌ನ ಷೇರು 5155.00 ಕ್ಕೆ ಆರಂಭವಾಯಿತು. ಎಚ್‌ಸಿಎಲ್ ಟೆಕ್‌ನ ಷೇರುಗಳು ರೂ. 10 ರಷ್ಟು ಹೆಚ್ಚಾಗಿ 1173.85 ರಲ್ಲಿ ಆರಂಭವಾಗಿದೆ. ಟೆಕ್ ಮಹೀಂದ್ರಾ ಷೇರುಗಳು 12 ರೂಪಾಯಿಗಳ ಲಾಭದೊಂದಿಗೆ 1431.00 ರಲ್ಲಿ ಪ್ರಾರಂಭವಾಯಿತು.
ಇಳಿಕೆಗೊಂಡ ಪ್ರಮುಖ ಷೇರುಗಳು:
ಒಎನ್ ಜಿಸಿ ಷೇರುಗಳು 199.65 ರೂಪಾಯಿಗೆ ಆರಂಭವಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ. 683.35 ಕ್ಕೆ ಆರಂಭವಾಗಿದ್ದು, ಸುಮಾರು ರೂ. 3 ರಷ್ಟು ಇಳಿಕೆಯಾಗಿದೆ. ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ರೂ. 710.65 ಕ್ಕೆ ಆರಂಭವಾಗಿದ್ದು, ಸುಮಾರು ರೂ. 2 ರಷ್ಟು ಇಳಿಕೆಯಾಗಿದೆ. ಹಿಂಡಾಲ್ಕೊ ಷೇರು ರೂ. 445.15 ಕ್ಕೆ ಆರಂಭವಾಯಿತು. ಟಾಟಾ ಮೋಟಾರ್ಸ್ ಷೇರುಗಳು 290 ರೂಪಾಯಿಗೆ ಕುಸಿದಿದೆ.
ಈ ವರ್ಷದಲ್ಲೇ 18,000 ಗಡಿ ಮುಟ್ಟಲಿದೆ ನಿಫ್ಟಿ
ನಿಫ್ಟಿ 17,000 ಗಡಿ ಬಳಿ ವಹಿವಾಟು ನಡೆಸುತ್ತಿದೆ ಮತ್ತು ಸೆನ್ಸೆಕ್ಸ್ 57,000 ಗಡಿ ದಾಟಿದೆ. ಇದರ ನಡುವೆ ಕೋವಿಡ್ ಮೂರನೇ ಅಲೆಯ ಅಪಾಯವು ಎದುರಾಗಿದೆ. ಆದರೂ ಹೆಚ್ಚಿನ ವಿಶ್ಲೇಷಕರ ಅಭಿಪ್ರಾಯದಂತೆ ಮಾರುಕಟ್ಟೆ ಮತ್ತಷ್ಟು ಏರಿಕೆಯಾಗಬಹುದು. ಜೊತೆಗೆ ನಿಫ್ಟಿ , ಡಿಸೆಂಬರ್ ವೇಳೆಗೆ 18,000 ಗಡಿ ತಲುಪಬಹುದು. ಮಧ್ಯಂತರ ಲಾಭ-ಬುಕಿಂಗ್ ಇರಬಹುದು ಆದರೆ ಮಧ್ಯಮದಿಂದ ದೀರ್ಘಾವಧಿಯ ನಿರೀಕ್ಷೆಗಳು ಬಲಿಷ್ಠವಾಗಿರುತ್ತವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ಬಲವಾಗಿ ತೆರೆಯಿತು. ಇಂದು ಡಾಲರ್ ಎದುರು ರೂಪಾಯಿ 1 ಪೈಸೆ ಬಲದೊಂದಿಗೆ 73.25 ರೂ. ಮುಟ್ಟಿದೆ. ಅದೇ ಸೋಮವಾರದಂದು ಡಾಲರ್ ಎದುರು ರೂಪಾಯಿ 42 ಪೈಸೆ ಏರಿಕೆ ಕಂಡು 73.26 ರೂ. ತಲುಪಿತ್ತು. ಹೀಗಾಗಿ ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.
ಷೇರು ಖರೀದಿಸುವುದು ಹೇಗೆ?
ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.


Click it and Unblock the Notifications