ಭಾರತೀಯ ಷೇರುಪೇಟೆ ಬುಧವಾರ ದುರ್ಬಲ ಜಾಗತಿಕ ಸೂಚನೆ ಹಿನ್ನಲೆಯಲ್ಲಿ ನಷ್ಟದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 135 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15700 ಮಟ್ಟದಲ್ಲೇ ಉಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 135.05 ಪಾಯಿಂಟ್ಸ್ ಅಥವಾ ಶೇಕಡಾ 0.26ರಷ್ಟು ಇಳಿಕೆಗೊಂಡು 52443.71 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 37.05 ಪಾಯಿಂಟ್ಸ್ ಅಥವಾ ಶೇ. 0.24ರಷ್ಟು ಕುಸಿದು 15709.40 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಅಂತ್ಯಕ್ಕೆ 1299 ಷೇರುಗಳು ಏರಿಕೆಗೊಂಡರೆ, 1682 ಷೇರುಗಳು ಕುಸಿದವು ಮತ್ತು 90 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಡಾ. ರೆಡ್ಡಿಸ್ ಲ್ಯಾಬ್ಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಮೋಟಾರ್ಸ್, ಸಿಪ್ಲಾ ಮತ್ತು ಎಂ ಅಂಡ್ ಎಂ ನಿಫ್ಟಿಯಲ್ಲಿ ನಷ್ಟಗೊಂಡ ಪ್ರಮುಖ ಷೇರುಗಳಾಗಿವೆ. ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಡಿವಿಸ್ ಲ್ಯಾಬ್ಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಏರಿಕೆಗೊಂಡಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಸಮತಟ್ಟಾಗಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.4 ರಷ್ಟು ಕುಸಿಯಿತು. ಲೋಹದ ಸೂಚ್ಯಂಕವು ಶೇಕಡಾ 1 ಕ್ಕಿಂತ ಹೆಚ್ಚಾಗಿದೆ ಮತ್ತು ಐಟಿ ಸೂಚ್ಯಂಕವು ಶೇಕಡಾ 0.2ರಷ್ಟು ಏರಿಕೆಯಾಗಿದೆ, ಆದಾಗ್ಯೂ, ಆಟೋ, ಬ್ಯಾಂಕ್, ಇಂಧನ ಮತ್ತು ಫಾರ್ಮಾ ಕ್ಷೇತ್ರಗಳಲ್ಲಿ ಮಾರಾಟ ಕಂಡುಬಂದಿದೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ 9 ಪೈಸೆ ಹೆಚ್ಚಳದಿಂದ ಪ್ರತಿ ಡಾಲರ್‌ಗೆ 74.37 ಕ್ಕೆ ತಲುಪಿದೆ.


Click it and Unblock the Notifications