For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 205 ಪಾಯಿಂಟ್ಸ್ ಕುಸಿತ: ನಿಫ್ಟಿ 51 ಪಾಯಿಂಟ್ಸ್‌ ಇಳಿಕೆ

|

ಭಾರತದ ಷೇರುಪೇಟೆ ಸೋಮವಾರ ನಕಾರಾತ್ಮಕವಾಗಿ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 205 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 51 ಪಾಯಿಂಟ್ಸ್‌ ಕುಸಿತಗೊಂಡಿದೆ.

11 ಗಂಟೆ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 215.02 ಪಾಯಿಂಟ್ಸ್ ಅಥವಾ ಶೇಕಡಾ 0.37ರಷ್ಟು ಇಳಿಕೆಗೊಂಡು 58090.05 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.31ರಷ್ಟು ಅಥವಾ 54.60 ಪಾಯಿಂಟ್ಸ್ ಕುಸಿದು 17314.70 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಆರಂಭದಲ್ಲಿ ಸುಮಾರು 1,066 ಷೇರುಗಳು ಏರಿಕೆಗೊಂಡರೆ, 570 ಷೇರುಗಳು ಕುಸಿದವು. ಅದೇ ಸಮಯದಲ್ಲಿ, 195 ಕಂಪನಿಗಳ ಷೇರು ಬೆಲೆ ಯಾವುದೇ ವ್ಯತ್ಯಾಸಗೊಳ್ಳದೆ ತೆರೆದಿದೆ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಹಿಂಡಾಲ್ಕೊ ಷೇರು 473.45 ರೂಪಾಯಿಗೆ ಆರಂಭಗೊಂಡಿದ್ದು, ಗ್ರೇಸಿಯಂ ಷೇರು 12 ರೂ ಗಳಿಕೆಯೊಂದಿಗೆ 1,610.00 ರೂಪಾಯಿಗೆ ತೆರೆಯಿತು. BPCL ನ ಷೇರುಗಳು 494.05 ರಲ್ಲಿ ಆರಂಭವಾಗಿದ್ದು ಸುಮಾರು ರೂ .3 ಗಳಿಸಿದೆ. ಕೋಲ್ ಇಂಡಿಯಾದ ಷೇರುಗಳು ರೂ. 150.20 ರಲ್ಲಿ ಆರಂಭವಾಗಿದ್ದು , ಎಚ್‌ಡಿಎಫ್‌ಸಿ ಷೇರುಗಳು 18 ರೂ.ಗಳ ಏರಿಕೆಯೊಂದಿಗೆ 2,847.75 ರೂ. ತಲುಪಿದೆ.

ಸೆಪ್ಟೆಂಬರ್ 13ರ ಪೆಟ್ರೋಲ್, ಡೀಸೆಲ್ ದರ: ದೇಶದ ಯಾವ ನಗರದಲ್ಲಿ ದರ ಎಷ್ಟಿದೆ?ಸೆಪ್ಟೆಂಬರ್ 13ರ ಪೆಟ್ರೋಲ್, ಡೀಸೆಲ್ ದರ: ದೇಶದ ಯಾವ ನಗರದಲ್ಲಿ ದರ ಎಷ್ಟಿದೆ?

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಐಸಿಐಸಿಐ ಬ್ಯಾಂಕಿನ ಷೇರುಗಳು ರೂ. 6 ರ ಕುಸಿತದೊಂದಿಗೆ 714.30 ಕ್ಕೆ ಆರಂಭವಾಗಿದ್ದು, ನೆಸ್ಲೆ ಷೇರುಗಳು ಸುಮಾರು 151 ರೂ. ಕುಸಿದು 20,306.10 ರೂಪಾಯಿಗೆ ಆರಂಭಗೊಂಡವು, ಇನ್ಫೋಸಿಸ್ ಷೇರುಗಳು 1,681.45 ರಲ್ಲಿ ಆರಂಭವಾಗಿದ್ದು, ಸುಮಾರು ರೂ. 10 ರಷ್ಟು ಇಳಿಕೆಯಾಗಿದೆ. ಅದಾನಿ ಪೋರ್ಟ್ಸ್ ನ ಷೇರು 747.00 ರೂ.ನಲ್ಲಿ ಆರಂಭವಾಯಿತು, ಸುಮಾರು 3 ರೂ. ಕುಸಿದಿದೆ ಮತ್ತು ಸಿಪ್ಲಾ ಷೇರು ರೂ. 944.90 ಕ್ಕೆ ಪ್ರಾರಂಭವಾಯಿತು, ಸುಮಾರು 4 ರೂ. ಇಳಿಕೆಗೊಂಡಿದೆ.

ಬ್ಯಾಂಕುಗಳು ಮತ್ತು ತೈಲ ಮತ್ತು ಅನಿಲ ವಲಯಗಳು ಒತ್ತಡದಲ್ಲಿವೆ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕವು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದೆ.

ಡಾಲರ್ ಎದುರು ರೂಪಾಯಿ
 

ಡಾಲರ್ ಎದುರು ರೂಪಾಯಿ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ದುರ್ಬಲತೆಯಿಂದ ಆರಂಭವಾಯಿತು. ಇಂದು ಡಾಲರ್ ಎದುರು ರೂಪಾಯಿ 13 ಪೈಸೆ ಇಳಿಕೆಗೊಂಡು 73.63 ರೂ. ತಲುಪಿದೆ. ಅದೇ ಸಮಯದಲ್ಲಿ, ಗುರುವಾರ, ರೂಪಾಯಿ 10 ಪೈಸೆ ಬಲಗೊಂಡು ಡಾಲರ್ ಎದುರು 73.50 ರೂ. ತಲುಪಿತು. ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ದಿನದ ವಹಿವಾಟು ಅಂತ್ಯಕ್ಕೆ

ದಿನದ ವಹಿವಾಟು ಅಂತ್ಯಕ್ಕೆ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯದಲ್ಲಿ 127.31 ಪಾಯಿಂಟ್ಸ್ ಅಥವಾ ಶೇಕಡಾ 58,177.16 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 13.95 ಪಾಯಿಂಟ್ಸ್ ಅಥವಾ ಶೇಕಡಾ 0.08ರಷ್ಟು ಇಳಿಕೆಗೊಂಡು 17,355.30 ಪಾಯಿಂಟ್ಸ್‌ ಮುಟ್ಟಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದುಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಹೀಂದ್ರಾ & ಮಹೀಂದ್ರಾ ಷೇರುಗಳ ಸೆನ್ಸೆಕ್ಸ್‌ನಲ್ಲಿ ಅಗ್ರವಾಗಿ ನಷ್ಟ ಅನುಭವಿಸಿದರೆ, ಮತ್ತೊಂದೆಡೆ, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಬಜಾಜ್ ಫಿನ್‌ಸರ್ವ್ ಮತ್ತು ಮಾರುತಿ ಸುಜುಕಿ ಟಾಪ್ ಸೆನ್ಸೆಕ್ಸ್ ಗಳಿಕೆದಾರರಾಗಿ ಹೊರಹೊಮ್ಮಿವೆ.

 

English summary

Sensex Down 215 Points: Nifty Shed 54 Points

Sensex is down 215.02 points or 0.37% at 58090.05, and the Nifty shed 54.60 points or 0.31% at 17314.70.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X