ಭಾರತೀಯ ಷೇರುಪೇಟೆ ಜಾಗತಿಕ ನಕಾರಾತ್ಮಕ ಸೂಚನೆಗಳ ಹಿನ್ನಲೆಯಲ್ಲಿ ಮಂಗಳವಾರವೂ ಮತ್ತಷ್ಟು ಕುಸಿತಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 226 ಪಾಯಿಂಟ್ಸ್ ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 64 ಪಾಯಿಂಟ್ಸ್ ಕುಸಿತಗೊಂಡಿದೆ.
9.20ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.43ರಷ್ಟು ಅಥವಾ 226.22 ಪಾಯಿಂಟ್ಸ್ ಇಳಿಕೆಗೊಂಡು 52327.18 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.41ರಷ್ಟು ಅಥವಾ 64.65 ಪಾಯಿಂಟ್ಸ್ ಕುಸಿದು 15687.75 ಪಾಯಿಂಟ್ಸ್ ಮುಟ್ಟಿದೆ.
ಇಂದು, ಬಿಎಸ್‌ಇಯಲ್ಲಿ ಒಟ್ಟು 1,525 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಈ ಪೈಕಿ 917 ಷೇರುಗಳು ಏರಿಕೆಯೊಂದಿಗೆ ಮತ್ತು 522 ಷೇರುಗಳು ಕುಸಿತದೊಂದಿಗೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ, 86 ಕಂಪನಿಗಳ ಷೇರು ಬೆಲೆ ಯಾವುದೇ ವ್ಯತ್ಯಾಸವಾಗದೆ ತೆರೆಯಿತು.

ಏರಿಕೆಗೊಂಡ ಷೇರುಗಳು:
ಅಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು 140 ರೂ.ಗಳ ಏರಿಕೆಗೊಂಡು 7,452.00 ರೂ., ಶ್ರೀ ಸಿಮೆಂಟ್‌ನ ಷೇರು 223 ರೂ.ಗಳ ಏರಿಕೆ ಕಂಡು 28,219.50 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 2 ರೂ.ಗಳ ಏರಿಕೆ ಕಂಡು 235.15 ರೂ., ಏಷ್ಯನ್ ಪೇಂಟ್ಸ್‌ನ ಷೇರುಗಳು 26 ರೂ. ಹೆಚ್ಚಾಗಿ 3,007.65 ಕ್ಕೆ ಪ್ರಾರಂಭವಾಗಿದ್ದು, ಐಒಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 106.35 ರೂ. ತಲುಪಿದೆ.
ಇಳಿಕೆಗೊಂಡು ಷೇರುಗಳು:
ಒಎನ್‌ಜಿಸಿಯ ಷೇರು 2 ರೂ. ಇಳಿಕೆಗೊಂಡು 112.45 ರೂ.ಗೆ ಪ್ರಾರಂಭವಾಯಿತು. ಎಚ್‌ಡಿಎಫ್‌ಸಿ ಬ್ಯಾಂಕಿನ ಷೇರುಗಳು 23 ರೂ.ಗಳಷ್ಟು ಇಳಿಕೆಯಾಗಿ 1,447.75 ರೂ., ಎಚ್‌ಸಿಎಲ್ ಟೆಕ್ ಷೇರುಗಳು 17 ರೂ. ಕುಸಿದು 982.95 ರೂ. ಪ್ರಾರಂಭವಾಗಿದ್ದು, ಭಾರ್ತಿ ಏರ್‌ಟೆಲ್ ಷೇರುಗಳು 62 ರೂ. ಇಳಿಕೆಗೊಂಡು 532.20 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರು 7 ರೂ.ಗಳ ಇಳಿಕೆಯೊಂದಿಗೆ 768.80 ರೂ.ಗೆ ಪ್ರಾರಂಭವಾಯಿತು.


Click it and Unblock the Notifications