For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 500 ಪಾಯಿಂಟ್ಸ್ ಕುಸಿತ: ನಿಫ್ಟಿ 160 ಪಾಯಿಂಟ್ಸ್ ಇಳಿಕೆ

|

ಭಾರತೀಯ ಷೇರುಪೇಟೆ ಬುಧವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 500 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 160 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬೆಳಿಗ್ಗೆ 10.30ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 537.23 ಪಾಯಿಂಟ್ಸ್ ಅಥವಾ ಶೇಕಡಾ 1.02ರಷ್ಟು ಇಳಿಕೆಗೊಂಡು 52041.53 ಪಾಯಿಂಟ್ಸ್ ತಲುಪಿದೆ. ಎನ್ಎಸ್‌ಇ ಸೂಚ್ಯಂಕ ನಿಫ್ಟಿ 159.2 ಪಾಯಿಂಟ್ಸ್‌ ಅಥವಾ ಶೇಕಡಾ 1.01ರಷ್ಟು ಹೆಚ್ಚಾಗಿ 15587.25 ಪಾಯಿಂಟ್ಸ್‌ ಮುಟ್ಟಿದೆ.

ಸೆನ್ಸೆಕ್ಸ್ 500 ಪಾಯಿಂಟ್ಸ್ ಕುಸಿತ: ನಿಫ್ಟಿ 160 ಪಾಯಿಂಟ್ಸ್ ಇಳಿಕೆ

ದಿನದ ವಹಿವಾಟು ಆರಂಭದಲ್ಲಿ 1102 ಷೇರುಗಳು ಏರಿಕೆಗೊಂಡರೆ, 1594 ಷೇರುಗಳು ಕುಸಿದವು, ಮತ್ತು 92 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರುಪಾಯಿ ಬುಧವಾರ ಪ್ರತಿ ಡಾಲರ್‌ಗೆ 74.43 ಕ್ಕೆ ತಲುಪಿದೆ. ಜುಲೈ 27 ರಂದು ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 74.46 ಕ್ಕೆ ತಲುಪಿತ್ತು.

ಇಳಿಕೆಗೊಂಡ ಷೇರುಗಳು:
ನಿಫ್ಟಿಯ ಹೆಚ್ಚು ಇಳಿಕೆಗೊಂಡ ಷೇರುಗಳಲ್ಲಿ ಎಚ್‌ಡಿಎಫ್‌ಸಿ ಷೇರುಗಳು 42 ರೂ.ಗಳ ಕುಸಿತ ಕಂಡು 2,391.60 ರೂ., ಡಾ. ರೆಡ್ಡೀಸ್ ಲ್ಯಾಬ್‌ನ ಷೇರು 49 ರೂ. ಕುಸಿದು 4,794.20 ರೂ.ಗೆ ಪ್ರಾರಂಭವಾಗಿದ್ದು, ಹಿಂಡಾಲ್ಕೊ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 412.50 ರೂ., ಆಕ್ಸಿಸ್ ಬ್ಯಾಂಕಿನ ಷೇರುಗಳು 7 ರೂಗಳ ಕುಸಿತದೊಂದಿಗೆ 724.60 ರೂಗಳಲ್ಲಿ ಪ್ರಾರಂಭವಾಯಿತು. ಲಾರ್ಸೆನ್ ಷೇರು ಸುಮಾರು 18 ರೂ. ಕುಸಿದು 1,590.50 ರೂ.ಗೆ ಪ್ರಾರಂಭವಾಯಿತು.

English summary

Sensex Down 500 Points: Nifty Slash 160 Points

Sensex Down 537.23 Points or 1.02% to 52041.53, Nifty Slashes 159.2 Points or 1.01% To 15587.25 Points
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X