ಭಾರತೀಯ ಷೇರುಪೇಟೆ ಸೋಮವಾರ ಇಳಿಕೆಯ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 500ಕ್ಕೂ ಅಧಿಕ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 141 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.95ರಷ್ಟು ಅಥವಾ 503.57 ಪಾಯಿಂಟ್ಸ್ ಕುಸಿದು 52636.49 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.89ರಷ್ಟು ಅಥವಾ 141.20 ಪಾಯಿಂಟ್ಸ್ ಇಳಿಕೆಗೊಂಡು 15782.20 ಪಾಯಿಂಟ್ಸ್ ಮುಟ್ಟಿದೆ.

ಏರಿಕೆಗೊಂಡ ಷೇರುಗಳು:
ನಿಫ್ಟಿಯ ಟಾಪ್ ಏರಿಕೆಗೊಂಡ ಷೇರುಗಳಲ್ಲಿ ಟೈಟಾನ್ ಕಂಪನಿಯ ಷೇರುಗಳು ಸುಮಾರು 6 ರೂ.ಗಳ ಲಾಭದೊಂದಿಗೆ 1,701.10 ರೂಗಳಲ್ಲಿ ಪ್ರಾರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 1 ರೂ.ಗಳಷ್ಟು ಏರಿಕೆಯಾಗಿ 234.50 ರೂ., ಬಿಪಿಸಿಎಲ್‌ನ ಷೇರುಗಳು ಸುಮಾರು 1 ರೂ.ಗಳ ಲಾಭದೊಂದಿಗೆ 448.45 ರೂ., ಕೋಲ್ ಇಂಡಿಯಾದ ಷೇರುಗಳು 1 ರೂ. ಏರಿಕೆಯಾಗಿ 145.70 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ನಿಫ್ಟಿಯ ನಷ್ಟಗೊಂಡ ಷೇರುಗಳಲ್ಲಿ ಪ್ರಮುಖವಾದವು ಎಚ್‌ಡಿಎಫ್‌ಸಿ ಬ್ಯಾಂಕಿನ ಷೇರು 43 ರೂ.ಗಳ ಇಳಿಕೆಗೊಂಡು 1,479.10 ರೂ., ಎಚ್‌ಡಿಎಫ್‌ಸಿ ಷೇರುಗಳು ಸುಮಾರು 42 ರೂ.ಗಳಷ್ಟು ಇಳಿಕೆಯಾಗಿ 2,495.25 ರೂ., ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳಷ್ಟು ಇಳಿಕೆಯಾಗಿ 1,030.95 ರೂ., ಒಎನ್‌ಜಿಸಿಯ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 115.20 ರೂ., ಯುಪಿಎಲ್ ಷೇರುಗಳು ಸುಮಾರು 10 ರೂ.ಗಳಷ್ಟು ಇಳಿಕೆಯಾಗಿ 827.85 ರೂ. ತಲುಪಿದೆ.


Click it and Unblock the Notifications