ಭಾರತದ ಷೇರುಪೇಟೆ ಸೋಮವಾರ (ಸೆ. 20) ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 525 ಪಾಯಿಂಟ್ಸ್ ಕುಸಿತಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 17,400 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಸತತ ಎರಡನೇ ಸೆಷನ್ ಇಳಿಕೆಗೊಂಡಿದ್ದು, 524.96 ಪಾಯಿಂಟ್ಸ್ ಅಥವಾ ಶೇಕಡಾ 0.89ರಷ್ಟು ಕುಸಿದಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 188.30 ಪಾಯಿಂಟ್ಸ್ ಅಥವಾ ಶೇಕಡಾ 1.07ರಷ್ಟು ಇಳಿಕೆಗೊಂಡು 17,396.90 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಅಂತ್ಯದಲ್ಲಿ 995 ಷೇರುಗಳು ಏರಿಕೆಗೊಂಡರೆ, 2308 ಷೇರುಗಳು ಕುಸಿದವು ಮತ್ತು 132 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು
ಹೆಚ್‌ಯುಎಲ್, ಬಜಾಜ್ ಫಿನ್‌ಸರ್ವ್, ಐಟಿಸಿ, ಎಚ್‌ಸಿಎಲ್ ಟೆಕ್, ನೆಸ್ಲೆ , ಬಜಾಜ್ ಫೈನಾನ್ಸ್ ಮತ್ತು ರಿಲಯನ್ಸ್ ಬಿಎಸ್‌ಇಐನಲ್ಲಿ ಏರಿಕೆಗೊಂಡ ಷೇರುಗಳಾಗಿವೆ.
ಇಳಿಕೆಗೊಂಡ ಪ್ರಮುಖ ಷೇರುಗಳು:
ಟಾಟಾ ಸ್ಟ್ರೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೋ ಇಂಡಸ್ಟ್ರೀಸ್, ಯುಪಿಎಲ್, ಎಸ್‌ಬಿಐ , ಪಿಐ ಇಂಡಸ್ಟ್ರೀಸ್, ಹಿಂಡಾಲ್ಕೊ, ಟಾಟಾ ಕೆಮಿಕಲ್ಸ್ ಇಳಿಕೆಗೊಂಡ ಪ್ರಮುಖ ಷೇರುಗಳಾಗಿವೆ.
ಎಫ್‌ಎಂಸಿಜಿಯನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳು , ಎಲ್ಲಾ ಇತರ ವಲಯದ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡವು, ಲೋಹದ ಸೂಚ್ಯಂಕವು ಸುಮಾರು 7 ಪ್ರತಿಶತದಷ್ಟು ಕಡಿಮೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 2 ಪ್ರತಿಶತ ಕುಸಿದವು.
ಡಾಲರ್ ಎದುರು ರೂಪಾಯಿ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ದುರ್ಬಲತೆಯಿಂದ ಆರಂಭಗೊಂಡು 34 ಪೈಸೆ ನಷ್ಟದೊಂದಿಗೆ ಕೊನೆಗೊಂಡಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 34 ಪೈಸೆ ಇಳಿಕೆ ಕಂಡು 73.82 ಕ್ಕೆ ತಲುಪಿದೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು ರೂಪಾಯಿ 73.82 ಕ್ಕೆ ಪ್ರಾರಂಭವಾಯಿತು, ಕೊನೆಯ ಮುಕ್ತಾಯದ ಹಂತದಲ್ಲಿ 34 ಪೈಸೆ ಕುಸಿತವನ್ನು ದಾಖಲಿಸಿದೆ. ಶುಕ್ರವಾರದ ವಹಿವಾಟಿನಲ್ಲಿ, ಯುಎಸ್ ಡಾಲರ್ ಎದುರು ರೂಪಾಯಿ 73.48 ಕ್ಕೆ ಸ್ಥಿರವಾಗಿದೆ.
ಷೇರು ಖರೀದಿಸುವುದು ಹೇಗೆ?
ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ಪ್ರಮುಖ ಅಮೆರಿಕಾದ ಷೇರುಗಳ ಕುಸಿತ
ಪ್ರಮುಖ ಯುಎಸ್ ಷೇರು ಸೂಚ್ಯಂಕಗಳು ಸೆಪ್ಟೆಂಬರ್ 20 ರಂದು ವಹಿವಾಟಿನ ಪ್ರಾರಂಭದಲ್ಲಿ ಕುಸಿಯಿತು, ಷೇರುದಾರರು ಸಾಲ ಬಾಧಿತ ಚೀನೀ ಆಸ್ತಿ ದೈತ್ಯ ಎವರ್‌ಗ್ರಾಂಡೆ ಕುಸಿತವನ್ನು ನಿರೀಕ್ಷಿಸಿದರು.
ಬೆಂಚ್‌ಮಾರ್ಕ್ ಡೌ ಜೋನ್ಸ್ ಕೈಗಾರಿಕಾ ಸರಾಸರಿಯು ಶೇಕಡಾ 1.5ರಷ್ಟು ಇಳಿಕೆಯಾಗಿ 34,074.21 ಕ್ಕೆ ಮುಕ್ತವಾಗಿದೆ. ಎಸ್ & ಪಿ 500 ಶೇಕಡಾ 1.6ರಷ್ಟು ಕುಸಿದು 4,364.42 ಕ್ಕೆ ಕಳೆದುಕೊಂಡಿತು ಮತ್ತು ಟೆಕ್-ರಿಚ್ ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ ಶೇಕಡಾರಷ್ಟು 0.9ರಷ್ಟು ಕುಸಿದು 15,043.97 ಕ್ಕೆ ತಲುಪಿದೆ.


Click it and Unblock the Notifications