ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ (ಮಾರ್ಚ್ 17, 2020) ಬೆಳಗ್ಗೆಯಿಂದಲೂ ಹಾವು- ಏಣಿ ಆಟದಂತೆ ಏರಿಳಿತ ಕಂಡು, ದಿನದ ಕೊನೆಗೆ ಸೆನ್ಸೆಕ್ಸ್ 810.98 ಪಾಯಿಂಟ್ ಇಳಿಕೆ ಕಂಡು, ದಿನಾಂತ್ಯಕ್ಕೆ 30,579.09 ಪಾಯಿಂಟ್ ಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತು. ಇನ್ನು ನಿಫ್ಟಿ 50 ಸೂಚ್ಯಂಕ 230.95 ಅಂಶಗಳ ಇಳಿಕೆ ಕಂಡು, 8967.05 ಪಾಯಿಂಟ್ ನೊಂದಿಗೆ ದಿನದ ಕೊನೆಗೆ ವ್ಯವಹಾರ ಚುಕ್ತಾ ಮಾಡಿತು.
ಆದರೆ, ಇಡೀ ದಿನ ಎರಡೂ ಸೂಚ್ಯಂಕಗಳು ಭಾರೀ ಏರಿಳಿತವನ್ನೇ ಪ್ರದರ್ಶಿಸಿದವು. ಬ್ಯಾಂಕಿಂಗ್ ಮತ್ತು ಫೈನಾನ್ಸ್ ಷೇರುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟದ ಒತ್ತಡ ಕಂಡುಬಂತು. ಹಾಗೆ ನೋಡಿದರೆ ಎಲ್ಲ ವಲಯಗಳು ಕುಸಿತ ದಾಖಲಿಸಿದವು. ಸೆನ್ಸೆಕ್ಸ್ ನಲ್ಲಿ ಹಿಂದೂಸ್ತಾನ್ ಯುನಿಲಿವರ್, ಹೀರೋ ಮೋಟೋಕಾರ್ಪ್ ಮತ್ತು ಪವರ್ ಗ್ರಿಡ್ ಷೇರುಗಳು ಏರಿಕೆ ದಾಖಲಿಸಿದವು.

ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡವು. ಭಾರತದಲ್ಲಿ ಕೊರೊನಾ ಭೀತಿ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಮಂಗಳವಾರದಂದು ಮಹಾರಾಷ್ಟ್ರದಲ್ಲಿ ಮೂರನೇ ವ್ಯಕ್ತಿ ಬಲಿಯಾಗಿದ್ದಾರೆ. ಕೊರೊನಾ ಆತಂಕ, ಆರ್ಥಿಕ ಕುಸಿತ ಸೇರಿದಂತೆ ಜಾಗತಿಕ ಅಂಶಗಳು ಸೇರಿ ಷೇರು ಮಾರ್ಕೆಟ್ ನಿರಂತರ ಇಳಿಕೆ ದಾಖಲಿಸುತ್ತಿದೆ.


Click it and Unblock the Notifications