For Quick Alerts
ALLOW NOTIFICATIONS  
For Daily Alerts

45,000 ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್ ಹೊಸ ದಾಖಲೆ; ನಿಫ್ಟಿ ಮತ್ತೊಂದು ಎತ್ತರಕ್ಕೆ

|

ಷೇರು ಮಾರ್ಕೆಟ್ ‌ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರದಂದು (ಡಿಸೆಂಬರ್ 4, 2020) ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 45,000 ಪಾಯಿಂಟ್ ಗಳ ಗಡಿಯನ್ನು ದಾಟಿ ಬಂದಿದೆ ಸೆನ್ಸೆಕ್ಸ್. ಬೆಳಗ್ಗೆ 11.40ರ ಹೊತ್ತಿಗೆ ಸೆನ್ಸೆಕ್ಸ್ 231.68 ಪಾಯಿಂಟ್ ಗಳ ಏರಿಕೆ ಕಂಡು, 44,864.33 ಪಾಯಿಂಟ್ ನೊಂದಿಗೆ ವಹಿವಾಟು ನಡೆಸುತ್ತಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪ್ರಮುಖಾಂಶಗಳುರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಪ್ರಮುಖಾಂಶಗಳು

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ವೇಳೆ, ಅದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದಿಂದ ಲಾಕ್ ಡೌನ್ ಘೋಷಿಸಿದ ಮೇಲೆ ಈ ವರ್ಷದ ಮಾರ್ಚ್ ನಲ್ಲಿ ವಾರ್ಷಿಕ ಕನಿಷ್ಠ ಮಟ್ಟವಾದ 25,638.90 ಪಾಯಿಂಟ್ ಗಳ ತಳಮಟ್ಟ ಕಂಡಿದ್ದ ಸೆನ್ಸೆಕ್ಸ್, ಅಲ್ಲಿಂದ 19,000 ಪಾಯಿಂಟ್ ಗೂ ಹೆಚ್ಚು ಏರಿಕೆಯನ್ನು ಕಂಡಿದೆ. ನಿಫ್ಟಿ ಕೂಡ 13250.30 ಪಾಯಿಂಟ್ ಮುಟ್ಟುವ ಮೂಲಕ ಹೊಸ ದಾಖಲೆ ಬರೆದಿದೆ. ಈ ವರ್ಷದ ಮಾರ್ಚ್ ನಲ್ಲಿ ವಾರ್ಷಿಕ ಕನಿಷ್ಠ ಮಟ್ಟವಾದ 7511.10 ಪಾಯಿಂಟ್ ತಲುಪಿತ್ತು ನಿಫ್ಟಿ.

45,000 ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್ ಹೊಸ ದಾಖಲೆ

ನಿಫ್ಟಿಯಲ್ಲಿ ಹಿಂಡಾಲ್ಕೋ, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್ ಟೆಲ್, ಗ್ರಾಸಿಮ್ ಮತ್ತು ಐಸಿಐಸಿಐ ಬ್ಯಾಂಕ್ ಏರಿಕೆ ಕಂಡಿದ್ದರೆ, ಕೋಲ್ ಇಂಡಿಯಾ, ರಿಲಯನ್ಸ್, ಬಿಪಿಸಿಎಲ್, ಎಚ್ ಡಿಎಫ್ ಸಿ ಲೈಫ್ ಹಾಗೂ ಡಿವೀಸ್ ಲ್ಯಾಬ್ಸ್ ಇಳಿಕೆ ದಾಖಲಿಸಿವೆ.

English summary

Sensex Hits 45,000 For The First Time After RBI Changes Its FY21 Real GDP Target

Indian stock market index sensex crosses 45000 point mark first time on December 4, 2020. Here is the top gainers of nifty.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X