For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ದಾಖಲೆ: ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ!

|

ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ಕಂಡಿದ್ದು, ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಈಗಾಗಲೇ 16,000 ಪಾಯಿಂಟ್ಸ್‌ಗಿಂತ ಹೆಚ್ಚಾಗಿದೆ.

ಬೆಳಿಗ್ಗೆ 9.30 ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.76ರಷ್ಟು ಅಥವಾ 409.95 ಪಾಯಿಂಟ್ಸ್ ಏರಿಕೆಗೊಂಡು 54233.31 ಪಾಯಿಂಟ್ಸ್‌ ತಲುಪಿದೆ. ಎನ್ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.71 ರಷ್ಟು ಅಥವಾ 113.9 ಪಾಯಿಂಟ್ಸ್ ಹೆಚ್ಚಾಗಿ 16244.65 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಆರಂಭದಲ್ಲಿ 1391 ಷೇರುಗಳು ಏರಿಕೆಗೊಂಡರೆ, 338 ಷೇರುಗಳು ಕುಸಿದವು ಮತ್ತು 68 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು

ಏರಿಕೆಗೊಂಡ ಷೇರುಗಳು

ಎಚ್‌ಡಿಎಫ್‌ಸಿ ಷೇರುಗಳು ರೂ .598.80 ರಲ್ಲಿ ಆರಂಭವಾಗಿದ್ದು, 44 ರೂ. ರಷ್ಟು ಹೆಚ್ಚಾಗಿದೆ. ಅದಾನಿ ಪೋರ್ಟ್ಸ್ ಷೇರುಗಳು 9 ರೂ. ರಷ್ಟು ಏರಿಕೆಯಾಗಿ 714.25 ಕ್ಕೆ ಪ್ರಾರಂಭವಾದವು. ಟಾಟಾ ಸ್ಟೀಲ್ ಷೇರುಗಳು 19 ರೂ. ಏರಿಕೆಯಾಗಿ 1,426.10 ರೂಪಾಯಿಗೆ ಆರಂಭವಾಯಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು 13 ರೂಪಾಯಿ ಏರಿಕೆಯಾಗಿದೆ 1,447.85 ಕ್ಕೆ ತಲುಪಿದೆ. ಇನ್ನು ಇನ್ಫೋಸಿಸ್ ಷೇರುಗಳು 16 ರೂಪಾಯಿ ಹೆಚ್ಚಾಗಿ 1671.60 ರೂ. ಪ್ರಾರಂಭವಾಗಿದೆ.

18 ದಿನದಿಂದ ಪೆಟ್ರೋಲ್ ದರ ಬದಲಾಗಿಲ್ಲ: ಜನಸಾಮಾನ್ಯರಿಗೆ ಹೊರೆ ತಪ್ಪಿಲ್ಲ!18 ದಿನದಿಂದ ಪೆಟ್ರೋಲ್ ದರ ಬದಲಾಗಿಲ್ಲ: ಜನಸಾಮಾನ್ಯರಿಗೆ ಹೊರೆ ತಪ್ಪಿಲ್ಲ!

 

 

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಭಾರ್ತಿ ಏರ್‌ಟೆಲ್‌ನ ಷೇರುಗಳು ಕುಸಿದು 773.10, ಟಾಟಾ ಕನ್ಸೂಮರ್ ಷೇರು 762.15 ಕ್ಕೆ ಆರಂಭವಾಯಿತು, ದೇವಿ ಲ್ಯಾಬ್‌ನ ಷೇರು 4,999.30 , ಒಎನ್ ಜಿಸಿ ಹಾಗೂ ಎಸ್‌ಬಿಐನ ಷೇರುಗಳು ಕೂಡ ಆರಂಭಿಕ ಕುಸಿತ ದಾಖಲಿಸಿದೆ.

18,000 ಗಡಿ ಮುಟ್ಟಲಿದ್ಯಾ ನಿಫ್ಟಿ50

18,000 ಗಡಿ ಮುಟ್ಟಲಿದ್ಯಾ ನಿಫ್ಟಿ50

ನಿಫ್ಟಿ 50 ಆಗಸ್ಟ್ 3 ರಂದು 16,100 ಪಾಯಿಂಟ್ಸ್‌ಗಿಂತ ಹೆಚ್ಚಾಗಿ ಹೊಸ ದಾಖಲೆಯನ್ನು ಮುಟ್ಟಿತು ಮತ್ತು 17,000 ಗಡಿಯತ್ತಲೂ ಹೆಜ್ಜೆ ಹಾಕಬಹುದು. ಆದರೆ ಷೇರುಪೇಟೆಯಲ್ಲಿ ಗೂಳಿಯ ಓಟ ನೋಡುತ್ತಿದ್ದರೆ ಡಿಸೆಂಬರ್ ವೇಳೆಗೆ 18,000 ಗಡಿ ಮುಟ್ಟಬಹುದು ಎಂದು ಷೇರುಪೇಟೆ ತಜ್ಞರು ಅಂದಾಜಿಸಿದ್ದಾರೆ.

ನಿಫ್ಟಿ 50 ಸುಮಾರು ಐದು ತಿಂಗಳಲ್ಲಿ 18,000 ಪಾಯಿಂಟ್ಸ್ ತಲುಪಬಹುದೇ ಎಂಬ ವಿಚಾರ ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಕೊನೆಯ 1,000 ಪಾಯಿಂಟ್‌ಗಳು ವೇಗವಾಗಿ ತಲುಪಿದ್ದು, ನಿಫ್ಟಿ ಕೂಡ ಹೊಸ ದಾಖಲೆ ಬರೆದಿದೆ.

 ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ 872 ಪಾಯಿಂಟ್ಸ್ ಜಿಗಿತ ಮೊಟ್ಟ ಮೊದಲ ಬಾರಿಗೆ 16,000 ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ 872 ಪಾಯಿಂಟ್ಸ್ ಜಿಗಿತ

ನಿಫ್ಟಿ 16,000 ಪಾಯಿಂಟ್ಸ್ ಓಟ

ನಿಫ್ಟಿ 16,000 ಪಾಯಿಂಟ್ಸ್ ಓಟ

ನಿಫ್ಟಿ 50 ಫೆಬ್ರವರಿ 5 ರಂದು ಮೊದಲ ಬಾರಿಗೆ 15000 ಗಡಿ ಅನ್ನು ಮುಟ್ಟಿತು ಮತ್ತು ನಂತರ ಜೂನ್ ನಿಂದ 16000 ಅನ್ನು ಮುಟ್ಟಲು ಹಲವು ಬಾರಿ ಪ್ರಯತ್ನಿಸಿತು, ಆದರೆ ಪ್ರತಿ ಬಾರಿ ವಿಫಲವಾಗಿದೆ. ಸೂಚ್ಯಂಕವು 15900-16000 ಬಳಿ ಪ್ರಬಲ ಪ್ರತಿರೋಧವನ್ನು ಎದುರಿಸಿತು, ಆದರೆ ಇದು ಮಂಗಳವಾರದಂದು( ಆಗಸ್ಟ್‌ 03) ತನ್ನ ಮಟ್ಟವನ್ನು ಮೀರಿಸುವಲ್ಲಿ ಯಶಸ್ವಿಯಾಯಿತು.

ನಿಫ್ಟಿಯ ಈ 1000 ಪಾಯಿಂಟ್ ಗಳಿಕೆಯ ಪ್ರಯಾಣದ ಸಮಯದಲ್ಲಿ, ನಿಫ್ಟಿ500 ನಲ್ಲಿ 29 ಷೇರುಗಳು 100 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಇವುಗಳಲ್ಲಿ ಜೆಎಸ್‌ಡಬ್ಲ್ಯೂ ಎನರ್ಜಿ, ಶ್ರೀ ರೇಣುಕಾ, ಪ್ರಜ್ ಇಂಡಸ್ಟ್ರೀಸ್, ಲಕ್ಸ್ ಇಂಡಸ್ಟ್ರೀಸ್, ಅದಾನಿ ಟೋಟಲ್ ಗ್ಯಾಸ್, ಸಿಡಿಎಸ್‌ಎಲ್, ಕೆಪಿಐಟಿ ಟೆಕ್ನಾಲಜೀಸ್ ಮತ್ತು ಸೆಲ್ ಮುಂತಾದ ಕಂಪನಿಯ ಷೇರುಗಳು ಸೇರಿವೆ.

 

English summary

Sensex Hits 54000: Indices Open At Fresh Record High

Sensex was up 409.95 points or 0.76% at 54233.31, and the Nifty was up 113.9 points or 0.71% at 16244.65
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X