ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ: 55,000 ಗಡಿ ದಾಟಿದೆ!

ಭಾರತದ ಷೇರುಪೇಟೆ ಆಗಸ್ಟ್‌ 13ರಂದು ಶುಕ್ರವಾರ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದು, ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 55,000 ಗಡಿಯನ್ನು ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಜಿಗಿತಗೊಂಡಿದ್ದು 62 ಪಾಯಿಂಟ್ಸ್ ಹೆಚ್ಚಾಗಿದೆ.

ಬೆಳಿಗ್ಗೆ 9.26ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 214.16 ಪಾಯಿಂಟ್ಸ್ ಅಥವಾ ಶೇಕಡಾ 0.39ರಷ್ಟು ಏರಿಕೆಗೊಂಡು 55058.14 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 62.6 ಪಾಯಿಂಟ್ಸ್ ಅಥವಾ ಶೇಕಡಾ 0.38ರಷ್ಟು ಹೆಚ್ಚಾಗಿ 16427 ಪಾಯಿಂಟ್ಸ್‌ ಮುಟ್ಟಿದೆ.

ಇನ್ನು ನಿಫ್ಟಿ ಬ್ಯಾಂಕ್ ಕೂಡ ಭರ್ಜರಿ ಆರಂಭ ಪಡೆದಿದ್ದು, 204.05 ಪಾಯಿಂಟ್ಸ್ ಅಥವಾ ಶೇಕಡಾ 0.57ರಷ್ಟು ಹೆಚ್ಚಾಗಿ 36141.10 ದಾಖಲಾಗಿದೆ. ನಿಫ್ಟಿ ಮಿಡ್‌ಕ್ಯಾಫ್ 100 ಪಾಯಿಂಟ್ಸ್ ಅಥವಾ ಶೇಕಡಾ 45.9ರಷ್ಟು ಏರಿಕೆಗೊಂಡು 27729.90 ಪಾಯಿಂಟ್ಸ್‌ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ 1480 ಷೇರುಗಳು ಏರಿಕೆಗೊಂಡರೆ, 677 ಷೇರುಗಳು ಕುಸಿದವು ಮತ್ತು 79 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಟಾಟಾ ಮೋಟಾರ್ಸ್ ನ ಷೇರು 2.30 ರೂಪಾಯಿ ಏರಿಕೆಗೊಂಡು 308.30ಕ್ಕೆ ಆರಂಭವಾಗಿದ್ದು, ಮಹೀಂದ್ರಾ & ಮಹೀಂದ್ರಾ ಷೇರು 84 ರೂಪಾಯಿ ಗಳಿಕೆಯೊಂದಿಗೆ 784.35 ಕ್ಕೆ ಆರಂಭವಾಯಿತು. ಐಸಿಐಸಿಐ ಬ್ಯಾಂಕಿನ ಷೇರುಗಳು 8 ರೂಪಾಯಿ ಹೆಚ್ಚಾಗಿ 709.35 ಕ್ಕೆ ಆರಂಭವಾಗಿದ್ದು, ಎಸ್‌ಬಿಐನ ಷೇರುಗಳು ಸುಮಾರು 3 ರೂಪಾಯಿ ಗಳಿಕೆಯೊಂದಿಗೆ 429.95 ರಲ್ಲಿ ಆರಂಭವಾಗಿದೆ. ವಿಪ್ರೋ ಷೇರುಗಳು 609.15 ರಲ್ಲಿ ಆರಂಭವಾಗಿದೆ.

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಐಷರ್ ಮೋಟಾರ್ಸ್ ನ ಷೇರುಗಳು 55 ರೂಪಾಯಿ ಇಳಿಕೆಯಾಗಿ 2,561.70 ಕ್ಕೆ ಪ್ರಾರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು 1417.20 ಕ್ಕೆ ಆರಂಭವಾಗಿದ್ದು, 18 ರೂಪಾಯಿಗಳಷ್ಟು ಇಳಿಕೆಯಾಗಿದೆ. ಸನ್ ಫಾರ್ಮಾ ಷೇರುಗಳು ಸುಮಾರು ರೂ. 10 ರಷ್ಟು ಇಳಿಕೆಯಾಗಿದ್ದು, 768.55 ರಲ್ಲಿ ಆರಂಭವಾಗಿದೆ. ಇನ್ನು ಟೆಕ್ ಮಹೀಂದ್ರಾ ಷೇರುಗಳು 136 ರೂಪಾಯಿ ಇಳಿಕೆಯಾಗಿ 1369.80 ಕ್ಕೆ ಆರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ಸುಮಾರು 1 ರೂ. ಇಳಿಕೆಯಾಗಿ 186.25 ರೂ. ತಲುಪಿದೆ.

ಐಷರ್ ಮೋಟಾರ್ಸ್ ಷೇರು ಶೇ. 3ರಷ್ಟು ಕುಸಿತ

ಐಷರ್ ಮೋಟಾರ್ಸ್ ಷೇರು ಶೇ. 3ರಷ್ಟು ಕುಸಿತ

ಐಷರ್ ಮೋಟಾರ್ಸ್ ಷೇರಿನ ಬೆಲೆ ಆಗಸ್ಟ್ 13 ರಂದು ಸುಮಾರು ಶೇಕಡಾ 3ರಷ್ಟು ಕುಸಿಯಿತು, ಕಂಪನಿಯು ಗುರುವಾರ ತನ್ನ ಜೂನ್ ತ್ರೈಮಾಸಿಕ ಫಲಿತಾಂಶ 237 ಕೋಟಿ ತೆರಿಗೆಯ ನಂತರ ಕ್ರೂಢೀಕೃತ ಲಾಭವನ್ನು ಘೋಷಿಸಿದ ನಂತರ ಹಾಗೂ ಸುಧಾರಿತ ಮಾರಾಟವನ್ನು ಪ್ರಕಟಿಸಿತ್ತು.

ಕಂಪನಿಯು 2020-21ರ ಏಪ್ರಿಲ್-ಜೂನ್ ಅವಧಿಯಲ್ಲಿ 55 ಕೋಟಿ ರೂಪಾಯಿಗಳ ನಷ್ಟವನ್ನು ಕಂಡಿದೆ. ಕಾರ್ಯಾಚರಣೆಗಳ ಒಟ್ಟು ಆದಾಯವು 2020-21ರ ಹಣಕಾಸು ವರ್ಷದಲ್ಲಿ 818 ಕೋಟಿಯಿಂದ 1,974 ಕೋಟಿಗೆ ಏರಿಕೆಯಾಗಿದೆ.

ಹೀರೋ ಮೊಟೊಕಾರ್ಪ್ ತ್ರೈಮಾಸಿಕ ಆದಾಯ ಆರು ಪಟ್ಟು ಹೆಚ್ಚಳ

ಹೀರೋ ಮೊಟೊಕಾರ್ಪ್ ತ್ರೈಮಾಸಿಕ ಆದಾಯ ಆರು ಪಟ್ಟು ಹೆಚ್ಚಳ

ಹೀರೋ ಮೋಟೋಕಾರ್ಪ್ ಆಗಸ್ಟ್ 12 ರಂದು ನಿವ್ವಳ ಲಾಭದಲ್ಲಿ 6 ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 61.3 ಕೋಟಿ ರೂ. ನಿವ್ವಳ ಲಾಭ ವರದಿ ಮಾಡಿತ್ತು.

ಪರಿಶೀಲಿಸಿದ ತ್ರೈಮಾಸಿಕದಲ್ಲಿ ಆದಾಯವು ರೂ. 5,487 ಕೋಟಿಗೆ ಏರಿತು, ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ರೂ 2,971.5 ಕೋಟಿಗೆ ಹೋಲಿಸಿದರೆ ಶೇಕಡಾ 85 ರಷ್ಟು ಹೆಚ್ಚಾಗಿದೆ.

ಇದರ ಪರಿಣಾಮ ಹೀರೋ ಮೋಟೋಕಾರ್ಪ್ ಬಿಎಸ್‌ಇಯಲ್ಲಿ ರೂ. 22.15 ಅಥವಾ ಶೇ .0.80 ರಷ್ಟು ಹೆಚ್ಚಾಗಿ 2,760.50 ಕ್ಕೆ ತಲುಪಿದೆ.

 

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಫ್ಯೂಚರ್ ಗ್ರೂಪ್

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಫ್ಯೂಚರ್ ಗ್ರೂಪ್

ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯನ್ನು ಅನುಭವಿಸಿದ ಬಳಿಕ ಆಗಸ್ಟ್‌ 12ರಂದು ಫ್ಯೂಚರ್ ಗ್ರೂಪ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂದು ಸಿಎನ್‌ಬಿಸಿ ಟಿವಿ18 ವರದಿ ಮಾಡಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಅಮೆಜಾನ್ ಪರವಾಗಿ ತೀರ್ಪು ನೀಡಿತ್ತು. ಫ್ಯೂಚರ್ ಕೂಪನ್ಸ್‌, ಫ್ಯೂಚರ್ ರೀಟೆಲ್ ಮತ್ತು ಫ್ಯೂಚರ್ ಗ್ರೂಪ್ ಸಿಇಒ ಕಿಶೋರ್ ಬಿಯಾನಿ ಒಡೆತನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+