ಮೊಟ್ಟ ಮೊದಲ ಬಾರಿಗೆ 59,000 ಗಡಿ ದಾಟಿದ ಸೆನ್ಸೆಕ್ಸ್: ನಿಫ್ಟಿ ಕೂಡ ದಾಖಲೆ

ಭಾರತದ ಷೇರುಪೇಟೆ ಗುರುವಾರ (ಸೆ. 16) ಸಾರ್ವಕಾಲಿಕ ದಾಖಲೆಯನ್ನೇ ಸೃಷ್ಟಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 59,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಹೊಸ ದಾಖಲೆಯನ್ನೇ ಬರೆದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಗರಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದ್ದು, 418 ಪಾಯಿಂಟ್ಸ್ ಅಥವಾ ಶೇಕಡಾ 0.71 ರಷ್ಟು ಹೆಚ್ಚಾಗಿ 59,141.16 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 110 ಪಾಯಿಂಟ್ಸ್ ಅಥವಾ ಶೇಕಡಾ 0.63ರಷ್ಟು ಏರಿಕೆಗೊಂಡು 17,629.50 ಪಾಯಿಂಟ್ಸ್ ತಲುಪಿದೆ.

ಮೊಟ್ಟ ಮೊದಲ ಬಾರಿಗೆ 59,000 ಗಡಿ ದಾಟಿದ ಸೆನ್ಸೆಕ್ಸ್: ನಿಫ್ಟಿ ದಾಖಲೆ

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಇಂಟ್ರಾಡೇ ಟ್ರೇಡ್‌ನಲ್ಲಿ ಕ್ರಮವಾಗಿ 25,384.22 ಮತ್ತು 28,456.77 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದವು.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.42ರಷ್ಟು ಅಧಿಕವಾಗಿ 25,321.78 ಕ್ಕೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.04 ಏರಿಕೆಯಾಗಿ 28,294.36 ಕ್ಕೆ ಕೊನೆಗೊಂಡಿತು. ವಲಯಗಳಲ್ಲಿ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 5.43 ರಷ್ಟು ಏರಿಕೆಯಾಗಿದ್ದು, ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕವು ಶೇಕಡಾ 2.67 ಏರಿಕೆಯನ್ನು ದಾಖಲಿಸಿದೆ. ನಿಫ್ಟಿ ಮೆಟಲ್ ಮತ್ತು ಐಟಿ ಸೂಚ್ಯಂಕಗಳು ತಲಾ 0.62 ಪ್ರತಿಶತ ಕುಸಿದವು.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಇಂಡಸ್ಇಂಡ್ ಬ್ಯಾಂಕ್ ಷೇರುಗಳು ರೂ .71 ರಷ್ಟು ಏರಿಕೆಯಾಗಿ 1,130.95 ರಲ್ಲಿ ಕೊನೆಗೊಂಡಿತು. ಐಟಿಸಿಯ ಷೇರು ರೂ 15 ರಷ್ಟು ಏರಿಕೆಯೊಂದಿಗೆ 230.75 ರೂಪಾಯಿಗೆ ಕೊನೆಗೊಂಡಿತು. ಎಸ್‌ಬಿಐನ ಷೇರುಗಳು ರೂ. 20 ರಷ್ಟು ಏರಿಕೆಯಾಗಿ 463.70 ರೂ.ನಲ್ಲಿ ಕೊನೆಗೊಂಡಿತು. ರಿಲಯನ್ಸ್ ಷೇರು ರೂ. 50 ರಷ್ಟು ಏರಿಕೆಯೊಂದಿಗೆ 2,428.20 ಕ್ಕೆ ಕೊನೆಗೊಂಡಿತು. ಕೋಟಕ್ ಮಹೀಂದ್ರಾ ಷೇರು 35 ರೂಪಾಯಿಗಳ ಏರಿಕೆಯೊಂದಿಗೆ 1,906.80 ರೂಗಳಲ್ಲಿ ಕೊನೆಗೊಂಡಿತು.

ಕುಸಿದ ಷೇರುಗಳು:

ಕುಸಿದ ಷೇರುಗಳು:

ಬಿಪಿಸಿಎಲ್‌ನ ಷೇರುಗಳು ರೂ 51 ಕ್ಕೆ ಇಳಿಕೆಯಾಗಿ 439.05 ರೂಗಳಲ್ಲಿ ಕೊನೆಗೊಂಡಿತು. ಗ್ರೇಸಿಮ್ ನ ಷೇರು ಸುಮಾರು ರೂ. 28 ರಷ್ಟು ಇಳಿಕೆಯಾಗಿ ರೂ 1,578.45 ಕ್ಕೆ ಕೊನೆಗೊಂಡಿತು. ಟಿಸಿಎಸ್ ನ ಷೇರುಗಳು ರೂ .3903.30 ಕ್ಕೆ ಕೊನೆಗೊಂಡಿದ್ದು, 51 ರೂ. ಇಳಿಕೆಯಾಗಿದೆ. ಟಾಟಾ ಸ್ಟೀಲ್ ನ ಷೇರುಗಳು 1436.75 ರೂಪಾಯಿಗೆ ಮುಕ್ತಾಯಗೊಂಡಿದ್ದು, ಸುಮಾರು 18 ರೂ. ಕುಸಿದಿದೆ. ಶ್ರೀ ಸಿಮೆಂಟ್ ಷೇರುಗಳು 380 ರೂಪಾಯಿ ಇಳಿಕೆಯಾಗಿ 30,660.65 ರೂಪಾಯಿಗೆ ಕೊನೆಗೊಂಡಿತು.

52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಷೇರುಗಳು

52 ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಷೇರುಗಳು

ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್, ಲಾರ್ಸೆನ್ ಮತ್ತು ಟೂಬ್ರೊ, NTPC, ONGC, TCS ಮತ್ತು Titan ಸೇರಿದಂತೆ 280 ಕ್ಕೂ ಹೆಚ್ಚು ಷೇರುಗಳು ಸೆಪ್ಟೆಂಬರ್ 16 ರಂದು 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿದವು.

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+