For Quick Alerts
ALLOW NOTIFICATIONS  
For Daily Alerts

Closing Bell: 900ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆಗೊಂಡ ಸೆನ್ಸೆಕ್ಸ್

|

ಭಾರತದ ಷೇರುಪೇಟೆ ಭರ್ಜರಿ ವಹಿವಾಟಿನ ಮೂಲಕ ಗುರುವಾರ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 900ಕ್ಕೂ ಅಧಿಕ ಪಾಯಿಂಟ್ಸ್ ಹೆಚ್ಚಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 276 ಪಾಯಿಂಟ್ಸ್ ಜಿಗಿದಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 958.03 ಪಾಯಿಂಟ್ಸ್ ಅಥವಾ ಶೇಕಡಾ 1.63ರಷ್ಟು ಏರಿಕೆಗೊಂಡು 59,885.36 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 276.30 ಪಾಯಿಂಟ್ಸ್ ಅಥವಾ ಶೇಕಡಾ 1.57ರಷ್ಟು ಹೆಚ್ಚಾಗಿ 17,823 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ 1866 ಷೇರುಗಳು ಏರಿಕೆಗೊಂಡರೆ, 1305 ಷೇರುಗಳು ಕುಸಿದವು ಮತ್ತು 148 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು

ಏರಿಕೆಗೊಂಡ ಪ್ರಮುಖ ಷೇರುಗಳು

ಬಜಾಜ್ ಫಿನ್‌ಸರ್ವ್‌ನ ಷೇರುಗಳು 889 ರೂಪಾಯಿಗಳಷ್ಟು ಏರಿಕೆಯಾಗಿ 18,503.85 ರೂಪಾಯಿಗೆ ಕೊನೆಗೊಂಡಿತು. ಹಿಂಡಾಲ್ಕೊ ಷೇರು ರೂ. 483.25 ಕ್ಕೆ ಕೊನೆಗೊಂಡಿದ್ದು,, ರೂ. 20 ರಷ್ಟು ಹೆಚ್ಚಾಗಿದೆ. ಟಾಟಾ ಮೋಟಾರ್ಸ್ ನ ಷೇರುಗಳು 11.40 ರೂಪಾಯಿ ಏರಿಕೆಯಾಗಿ ರೂ .321.50 ಕ್ಕೆ ಕೊನೆಗೊಂಡಿತು. ಲಾರ್ಸನ್ ಷೇರು ರೂ. 59 ರಷ್ಟು ಏರಿಕೆಯಾಗಿ 1,769.70 ರೂ.ನಲ್ಲಿ ಕೊನೆಗೊಂಡಿತು. ಕೋಲ್ ಇಂಡಿಯಾದ ಷೇರು ರೂ. 167.35 ಕ್ಕೆ ಕೊನೆಗೊಂಡಿದ್ದು, ಸುಮಾರು 5 ರೂ. ಹೆಚ್ಚಾಗಿದೆ.

ಗುಡ್‌ನ್ಯೂಸ್: ಚಿನ್ನದ ಬೆಲೆ ಇಳಿಕೆ, ಸೆ. 23ರ ಬೆಲೆ ಇಲ್ಲಿದೆಗುಡ್‌ನ್ಯೂಸ್: ಚಿನ್ನದ ಬೆಲೆ ಇಳಿಕೆ, ಸೆ. 23ರ ಬೆಲೆ ಇಲ್ಲಿದೆ

ಇಳಿಕೆಗೊಂಡ ಪ್ರಮುಖ ಷೇರುಗಳು
 

ಇಳಿಕೆಗೊಂಡ ಪ್ರಮುಖ ಷೇರುಗಳು

ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ರೂ. 724.65 ಕ್ಕೆ ಕೊನೆಗೊಂಡವು. ಡಾ. ರೆಡ್ಡಿ ಲ್ಯಾಬ್ಸ್ ನ ಷೇರುಗಳು ರೂ. 49 ರಷ್ಟು ಇಳಿಕೆಯಾಗಿ ರೂ. 4,797.30 ಕ್ಕೆ ಕೊನೆಗೊಂಡಿತು. ನೆಸ್ಲೆ ಷೇರುಗಳು ರೂ. 86 ರಷ್ಟು ಇಳಿಕೆಯಾಗಿ ರೂ .19,839.00 ಕ್ಕೆ ಕೊನೆಗೊಂಡಿತು. ಐಟಿಸಿಯ ಷೇರು ರೂ. 242.50 ಕ್ಕೆ ಕೊನೆಗೊಂಡಿತು, ಸುಮಾರು 1 ರೂ. ಕುಸಿದಿದೆ. ಟಾಟಾ ಕನ್ಸೂಮರ್ ಷೇರು ರೂ. 850.65 ಕ್ಕೆ ಕೊನೆಗೊಂಡಿದ್ದು, ಸುಮಾರು 4 ರೂ. ಇಳಿಕೆಗೊಂಡಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತ ಏರಿಕೆಯಾಗಿರುವುದರಿಂದ ವಿಶಾಲ ಮಾರುಕಟ್ಟೆಯು ಮಾನದಂಡಗಳನ್ನು ಮೀರಿಸಿದೆ. ರಿಯಾಲ್ಟಿ ಸೂಚ್ಯಂಕವು ಸುಮಾರು 9 ಪ್ರತಿಶತವನ್ನು ಗಳಿಸಿದೆ. ಐಟಿ, ಲೋಹ, ಬ್ಯಾಂಕ್, ಬಂಡವಾಳ ಸರಕುಗಳು, ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ 1 ಪ್ರತಿಶತ ಏರಿಕೆಯಾಗಿದೆ.

 

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಚಿನ್ನದ ಬೆಲೆ ಇಳಿಕೆ

ಚಿನ್ನದ ಬೆಲೆ ಇಳಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ (ಸೆ. 23) ಹಳದಿ ಲೋಹದ ಇಳಿಕೆಗೊಂಡಿದ್ದು, ಆಭರಣ ಪ್ರಿಯರಿಗೆ ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,750 ರೂಪಾಯಿಗೆ ಕುಸಿದಿದ್ದು, ಶುದ್ಧ ಚಿನ್ನ 10 ಗ್ರಾಂ 49,900 ರೂಪಾಯಿಗೆ ಇಳಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಕುಸಿದು 60,600 ರೂಪಾಯಿ ದಾಖಲಾಗಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ರೂ. 43,600 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ ರೂ. 47,560 (280 ರೂ. ಇಳಿಕೆ) ತಲುಪಿದೆ.

 

English summary

Sensex Jumps 958 Points: Nifty Ends Above 17800

Sensex was up 958.03 points or 1.63% at 59,885.36, and the Nifty was up 276.30 points or 1.57% at 17,823
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X