ಗುರುವಾರ ಷೇರು ಮಾರುಕಟ್ಟೆಯ ಹೂಡಿಕೆದಾರರಲ್ಲಿ ಖುಷಿಯೋ ಖುಷಿ ಇದಕ್ಕೆ ಕಾರಣ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಭಾರೀ ಜಿಗಿತ ಕಂಡಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 634.61 ಅಂಶಗಳ ಏರಿಕೆ ಕಂಡಿದೆ.
ಸೆನ್ಸೆಕ್ಸ್ 1.5 ಪರ್ಸೆಂಟ್‌ನಷ್ಟು ಏರಿಕೆಯಾಗಿ 41,452.35 ಅಂಶಗಳನ್ನು ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 1.59 ಪರ್ಸೆಂಟ್ ಅಥವಾ 190.50 ಅಂಶಗಳು ಏರಿಕೆಯಾಗಿ 12,215.90ಕ್ಕೆ ತಲುಪಿದೆ . ಈ ಮೂಲಕ ಕಳೆದ ಮೂರು ತಿಂಗಳಿನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಅಂಶಗಳು ಏರಿಕೆಯಾಗುವ ಮೂಲಕ ದಾಖಲೆಯಾಗಿದೆ.

ಅಮೆರಿಕಾ ಸೇನಾ ನೆಲೆ ಮೇಲೆ ಇರಾನ್ ದಾಳಿ ಕುರಿತು ಬುಧವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದ ಮೇಲೆ ಜಾಗತಿಕ ಮಾರುಕಟ್ಟೆಯು ಇಂದು ಚೇತರಿಕೆ ಕಂಡಿತು. ಜೊತೆಗೆ ಕಚ್ಛಾ ತೈಲದರವು ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಇದರಿಂದಾಗಿ ಹೂಡಿಕೆದಾರರು ಷೇರು ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ.
ಗುರುವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ಎಸ್‌ಬಿಐ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್ ಷೇರುಗಳು ಉತ್ತಮ ಏರಿಕೆ ಕಂಡಿದ್ದು ಟಿಸಿಎಸ್, ಹೆಚ್‌ಸಿಎಲ್ ಟೆಕ್, ಎನ್‌ಟಿಪಿಸಿ ಹಾಗೂ ಸನ್ ಫಾರ್ಮ ಷೇರುಗಳು ಇಳಿಮುಖ ಸಾಧಿಸಿವೆ.
ಇನ್ನು ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ) ನಿಫ್ಟಿ ಕೂಡ ಏರಿಕೆ ದಾಖಲಿಸಿದ್ದು ಜಿಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಷೇರುಗಳು 3 ಪರ್ಸೆಂಟ್‌ಗೂ ಅಧಿಕ ಲಾಭಗಳಿಸಿವೆ. ಟಿಸಿಎಸ್, ಕೋಲ್ ಇಂಡಿಯಾ, ಹೆಚ್‌ಸಿಎಲ್ ಟೆಕ್, ಬ್ರಿಟಾನಿಯಾ ಎನ್‌ಟಿಪಿಸಿ ಇಳಿಕೆ ದಾಖಲಿಸಿವೆ.


Click it and Unblock the Notifications