ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಮಂಗಳವಾರ (ನವೆಂಬರ್ 24, 2020) ಹೊಸ ದಾಖಲೆ ಬರೆಯಿತು. ನಿಫ್ಟಿ ಇದೇ ಮೊದಲ ಬಾರಿಗೆ 13,000 ಪಾಯಿಂಟ್ ಗಳ ಗಡಿ ದಾಟಿ, ಸಾರ್ವಕಾಲಿಕ ದಾಖಲೆ ಬರೆದಿದೆ. ದಿನದ ಕೊನೆಗೆ 128.7 ಪಾಯಿಂಟ್ ಗಳ ಏರಿಕೆ ಕಂಡು, 13,055 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿತು. ಇನ್ನು ಸೆನ್ಸೆಕ್ಸ್ 445.87 ಪಾಯಿಂಟ್ ಮೇಲೇರಿ 44,523 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾಗೊಳಿಸಿತು.
ಇನ್ನು ನಿಫ್ಟಿ ಸೂಚ್ಯಂಕವು ದಿನದ ಗರಿಷ್ಠ ಮಟ್ಟವಾದ 13,059 ಪಾಯಿಂಟ್ ತಲುಪಿತ್ತು. ಅದಾನಿ ಪೋರ್ಟ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಹಿಂಡಾಲ್ಕೋ ಮತ್ತು ಐಷರ್ ಮೋಟಾರ್ಸ್ ಈ ದಿನ ಗಳಿಕೆ ಕಂಡ ಷೇರುಗಳು. ಟೈಟಾನ್ ಕಂಪೆನಿ, ಶ್ರೀ ಸಿಮೆಂಟ್ಸ್, ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್ ಹಾಗೂ ಬಿಪಿಸಿಎಲ್ ಇಳಿಕೆ ದಾಖಲಿಸಿದವು.

ಎಚ್ ಡಿಎಫ್ ಸಿ ಬ್ಯಾಂಕ್ ಐವತ್ತೆರಡು ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು. ಅದೇ ರೀತಿ ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಐಷರ್ ಮೋಟಾರ್ಸ್ ಸಹ ಐವತ್ತೆರಡು ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿತು. ನಿಫ್ಟಿ ರಿಯಾಲ್ಟಿ ಸೂಚ್ಯಂಕದಲ್ಲಿ ಉತ್ತಮ ಗಳಿಕೆ ಕಂಡುಬಂತು.


Click it and Unblock the Notifications