ಐ.ಟಿ. ಷೇರುಗಳಲ್ಲಿ ಭರ್ಜರಿ ಖರೀದಿ ಕಂಡುಬಂದಿದ್ದರಿಂದ ಗುರುವಾರ (ಅಕ್ಟೋಬರ್ 8, 2020) ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರೀ ಏರಿಕೆ ಕಂಡವು. ಟಿಸಿಎಸ್ ಷೇರು ಬೆಲೆಯಲ್ಲಿ ಉತ್ತಮ ಏರಿಕೆಯಾಯಿತು. ಇದರ ಹೊರತಾಗಿ ಜಾಗತಿಕ ಪ್ರಭಾವ ಕೂಡ ಸೇರಿ ಇನ್ನಷ್ಟು ಹೆವ್ವಳಕ್ಕೆ ಕಾರಣವಾಯಿತು.
ನಿಫ್ಟಿ ಸೂಚ್ಯಂಕವು 95 ಪಾಯಿಂಟ್ ಹೆಚ್ಚಳವಾದರೆ, ಸೆನ್ಸೆಕ್ಸ್ 304 ಪಾಯಿಂಟ್ ಏರಿಕೆ ಕಂಡು, ದಿನಾಂತ್ಯಕ್ಕೆ 40,182 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿತು. ಆ ಮೂಲಕ 40,000 ಪಾಯಿಂಟ್ ಗೂ ಮೇಲ್ಮಟ್ಟದಲ್ಲೇ ವ್ಯವಹಾರ ಚುಕ್ತಾಗೊಳಿಸಿತು. ಬಿಎಸ್ ಇ ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ ರೆಪ್ಕೋ ಹೋಮ್ ಫೈನಾನ್ಸ್ ಷೇರು 13% ಏರಿಕೆ ಕಂಡು, ಟಾಪ್ ಗೇಯ್ನರ್ ಆಯಿತು.
ಇನ್ನು ಷೇರು ಬೈಬ್ಯಾಕ್ ಮಾಡುವ ಬಗ್ಗೆ ಅಕ್ಟೋಬರ್ 13ನೇ ತಾರೀಕಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಸುದ್ದಿ ಹಿನ್ನೆಲೆಯಲ್ಲಿ ವಿಪ್ರೋ ಕಂಪೆನಿ ಷೇರು ನಿಫ್ಟಿ ಸೂಚ್ಯಂಕದಲ್ಲಿ ಟಾಪ್ ಗೇಯ್ನರ್ ಆಯಿತು. 7% ದರ ಹೆಚ್ಚಳವಾಯಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ವಿಪ್ರೋ 7.20%
ಸಿಪ್ಲಾ 4.89%
ಟಿಸಿಎಸ್ 3.28%
ಅಲ್ಟ್ರಾಟೆಕ್ ಸಿಮೆಂಟ್ 3.15%
ಎಚ್ ಸಿಎಲ್ ಟೆಕ್ನಾಲಜಿ 2.60%

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಗೇಲ್ 2.94%
ಒಎನ್ ಜಿಸಿ 2.91%
ಐಟಿಸಿ 1.39%
ಐಷರ್ ಮೋಟಾರ್ಸ್ 1.30%
ಕೋಲ್ ಇಂಡಿಯಾ 1%


Click it and Unblock the Notifications