For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 290 ಪಾಯಿಂಟ್ ಗಳಿಕೆ; ಇಂಡಸ್ ಇಂಡ್ ಬ್ಯಾಂಕ್ 8% ಏರಿಕೆ

|

ಭಾರತದ ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದಂದು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ 290.36 ಪಾಯಿಂಟ್ ಏರಿಕೆ ಕಂಡು, 34,247.05 ಅಂಶದೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 69.50 ಪಾಯಿಂಟ್ ಏರಿಕೆ ಕಂಡು, 10,116.20 ಅಂಶದೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ.

 

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

1503 ಕಂಪೆನಿಯ ಷೇರುಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದರೆ, 1005 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಈ ಮಧ್ಯೆ 155 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ.

 

ನಿಫ್ಟಿಯಲ್ಲಿ ಲಾಭ ಕಂಡು ಟಾಪ್ ಐದು ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಹಿಂಡಾಲ್ಕೋ ಇಂಡಸ್ಟ್ರೀಸ್

ಕೊಟಕ್ ಮಹೀಂದ್ರಾ ಬ್ಯಾಂಕ್

ಶ್ರೀ ಸಿಮೆಂಟ್ಸ್

ರಿಲಯನ್ಸ್ ಇಂಡಸ್ಟ್ರೀಸ್

ಸೆನ್ಸೆಕ್ಸ್ 290 ಪಾಯಿಂಟ್ ಗಳಿಕೆ; ಇಂಡಸ್ ಇಂಡ್ ಬ್ಯಾಂಕ್ 8% ಏರಿಕೆ

ನಿಫ್ಟಿಯಲ್ಲಿ ನಷ್ಟ ಕಂಡ ಟಾಪ್ ಐದು ಷೇರುಗಳು
ಹೀರೋ ಮೋಟೋಕಾರ್ಪ್

ಗೇಲ್

ಕೋಲ್ ಇಂಡಿಯಾ

ಬಜಾಜ್ ಆಟೋ

ಟಾಟಾ ಸ್ಟೀಲ್

ಯು.ಎಸ್. ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 75.542 ಇದೆ. ಇನ್ನು ಸತತವಾಗಿ ನಾಲ್ಕನೇ ದಿನ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

English summary

Sensex, Nifty Gain On June 10; Indus Ind Bank Up By 8 Percent

India share market index Sensex and nifty surge on Wednesday, June 10, 2020. Indus Ind Bank gained more than 7 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X