For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಏರಿಕೆ; ರೊಸಾರಿ ಬಯೋಟೆಕ್ ಒಂದೇ ದಿನದಲ್ಲಿ 75% ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರ ಭಾರೀ ಏರಿಕೆ ಕಂಡಿವೆ. ಸೆನ್ಸೆಕ್ಸ್ 268.95 ಪಾಯಿಂಟ್ ಗಳಷ್ಟು ಏರಿಕೆ ಕಂಡು, ದಿನದ ಕೊನೆಗೆ 38,140.47 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 82.85 ಪಾಯಿಂಟ್ ಗಳಷ್ಟು ಹೆಚ್ಚಳವಾಗಿ, 11,215.45 ಪಾಯಿಂಟ್ ನಲ್ಲಿ ವಹಿವಾಟು ಚುಕ್ತಾ ಮಾಡಿದೆ.

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ರಿಲಯನ್ಸ್ ಇಂಡಸ್ಟ್ರೀಸ್ ಅದ್ಭುತ ಏರಿಕೆ ಕಂಡಿದೆ. ಕಳೆದ ನಾಲ್ಕು ತಿಂಗಳಲ್ಲಿ 135% ಹೆಚ್ಚಳ ದಾಖಲಿಸಿದೆ. ಗುರುವಾರದಂದು ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿ ರುಪಾಯಿ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ರೊಸಾರಿಯೋ ಬಯೋಟೆಕ್ ಕಂಪೆನಿ ಷೇರು ಇಂದು ಲಿಸ್ಟಿಂಗ್ ಆರಂಭಿಸಿದ್ದು, ಮೊದಲ ದಿನವೇ ವಿತರಣೆ ಬೆಲೆಗಿಂತ 317.35 (74.67%) ಹೆಚ್ಚಳ ಕಂಡು, BSEಯಲ್ಲಿ 742.35 ರುಪಾಯಿಗೆ ವಹಿವಾಟು ಮುಗಿಸಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಐಷರ್ ಮೋಟಾರ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಐಸಿಐಸಿಐ ಬ್ಯಾಂಕ್

ರಿಲಯನ್ಸ್

ಐಒಸಿ

ಸೆನ್ಸೆಕ್ಸ್, ನಿಫ್ಟಿ ಏರಿಕೆ; ರೊಸಾರಿ ಬಯೋಟೆಕ್ 75% ಗಳಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಆಕ್ಸಿಸ್ ಬ್ಯಾಂಕ್

ಶ್ರೀ ಸಿಮೆಂಟ್ಸ್

ಎಚ್ ಯುಎಲ್

ಇನ್ಫೋಸಿಸ್

ಟಿಸಿಎಸ್

English summary

Sensex, Nifty Gain: Rossari Biotech Increase 75 Percent On Listing Day

Indian stock market index sensex, nifty gain on July 23. Reliance industries crossed 13 lakh crore market capitalisation and Rossari biotech increased 75% on listing day.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X