For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 49,517 ಮತ್ತು ನಿಫ್ಟಿ 14,563 ಪಾಯಿಂಟ್ ನೊಂದಿಗೆ ಹೊಸ ದಾಖಲೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೇ ದಿನ, ಮಂಗಳವಾರ (ಜನವರಿ 12, 2021) ಕೂಡ ಏರಿಕೆ ಮುಂದುವರಿಸಿ, ಮತ್ತೊಮ್ಮೆ ದಾಖಲೆ ಬರೆದಿದೆ. ಸೆನ್ಸೆಕ್ಸ್ 247.79 ಪಾಯಿಂಟ್ ಏರಿಕೆ ಕಂಡು, 49,517.11 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 78.7 ಪಾಯಿಂಟ್ ಏರಿಕೆ ಕಂಡು, 14,563.45 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ.

ಈ ದಿನ ಷೇರು ಮಾರುಕಟ್ಟೆಯಲ್ಲಿ ಮಿಂಚಿದ್ದು ಟಾಟಾ ಮೋಟಾರ್ಸ್ ಷೇರು. ಒಂದು ಹಂತದಲ್ಲಿ ಪ್ರತಿ ಷೇರಿಗೆ ರು. 252.40 ತನಕ ತಲುಪಿದ್ದು, ದಿನದ ಕೊನೆಗೆ 7.77% ಏರಿಕೆ ಕಂಡು 237.80 ರುಪಾಯಿಯೊಂದಿಗೆ ವ್ಯವಹಾರ ಮುಗಿಸಿತು. 1647 ಕಂಪೆನಿಯ ಷೇರುಗಳು ಏರಿಕೆ ಕಂಡಿದ್ದರೆ, 1387 ಕಂಪೆನಿ ಷೇರುಗಳು ಇಳಿಕೆ ಕಂಡವು ಮತ್ತು 158 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆ

ನಿಫ್ಟಿ ಪಿಎಸ್ ಯು ಬ್ಯಾಂಕ್ ಸೂಚ್ಯಂಕವು 6% ಸೇರ್ಪಡೆ ಮಾಡಿದರೆ, ನಿಫ್ಟಿ ಬ್ಯಾಂಕ್, ವಾಹನ, ಮೂಲಸೌಕರ್ಯ ಹಾಗೂ ಎನರ್ಜಿ ತಲಾ 1% ಹೆಚ್ಚಳ ಆದವು. ಆದರೆ ನಿಫ್ಟಿ ಫಾರ್ಮಾ 1% ಮತ್ತು ಎಫ್ ಎಂಸಿಜಿ 0.5% ಇಳಿಕೆ ಕಂಡಿತು. ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 0.4% ಮತ್ತು 0.2% ಕುಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು
ಟಾಟಾ ಮೋಟಾರ್ಸ್

ಗೇಲ್

ಐಷರ್ ಮೋಟಾರ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಕೋಲ್ ಇಂಡಿಯಾ

ಸೆನ್ಸೆಕ್ಸ್ 49,517, ನಿಫ್ಟಿ 14,563 ಪಾಯಿಂಟ್ ನೊಂದಿಗೆ ಹೊಸ ದಾಖಲೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಏಷ್ಯನ್ ಪೇಂಟ್ಸ್

ಟೈಟಾನ್ ಕಂಪೆನಿ

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್

ನೆಸ್ಟ್ಲೆ

ಸನ್ ಫಾರ್ಮಾ

English summary

Sensex, Nifty Gain Straight 3rd Day; Tata Motors Surge 8 Percent

Indian stock market index sensex, nifty surge for straight 3rd day. Tata Motors gain 8 percent. Here is the nifty top gainers, losers.
Story first published: Tuesday, January 12, 2021, 16:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X