For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಟಾಟಾ ಮೋಟಾರ್ಸ್ 12 ಪರ್ಸೆಂಟ್ ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರ (ಜೂನ್ 5, 2020) ಏರಿಕೆ ಕಂಡಿದೆ. ಸೆನ್ಸೆಕ್ಸ್ 306.54 ಪಾಯಿಂಟ್ ಗಳ ಏರಿಕೆ ಕಂಡು, ದಿನಾಂತ್ಯಕ್ಕೆ 34,287.24 ಅಂಶಗಳಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 113.05 ಪಾಯಿಂಟ್ ಗಳ ಏರಿಕೆ ಕಂಡು, ದಿನದ ಕೊನೆಗೆ 10,142.15 ಪಾಯಿಂಟ್ ಗೆ ವಹಿವಾಟು ಚುಕ್ತಾ ಮಾಡಿದೆ.

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಎಫ್ ಎಂಸಿಜಿ ಹೊರತುಪಡಿಸಿ, ಉಳಿದ ಸೂಚ್ಯಂಕಗಳು ಏರಿಕೆ ಕಂಡಿವೆ. ಪಿಎಸ್ ಯು ಬ್ಯಾಂಕ್ ಸೂಚ್ಯಂಕವು 7 ಪರ್ಸೆಂಟ್ ಏರಿಕೆ ಕಂಡಿದೆ. ಅದೇ ರೀತಿ ಲೋಹ, ವಾಹನ, ಮೂಲಸೌಕರ್ಯ ವಲಯದ ಷೇರುಗಳು ಹೆಚ್ಚಳವಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಲಿತಾಂಶ ಅತ್ಯುತ್ತಮವಾಗಿರುವುದರ ಹಿನ್ನೆಲೆಯಲ್ಲಿ ಆ ಷೇರುಗಳು ಭರ್ಜರಿ ಏರಿಕೆ ದಾಖಲಿಸಿವೆ. ಇನ್ನು ರಿಲಯನ್ಸ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಮುಬಾದಲ ಕಂಪೆನಿಯು ಹೂಡಿಕೆ ಮಾಡುವ ಸುದ್ದಿ ಹೊಸ ಉತ್ಸಾಹ ಮೂಡಿಸಿದೆ.

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಟಾಟಾ ಮೋಟಾರ್ಸ್ 12% ಗಳಿಕೆ

ನಿಫ್ಟಿ ಟಾಪ್ ಗೇಯ್ನರ್ಸ್ ಷೇರುಗಳು
ಟಾಟಾ ಮೋಟಾರ್ಸ್

ಭಾರ್ತಿ ಇನ್ ಫ್ರಾಟೆಲ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಟಾಟಾ ಸ್ಟೀಲ್

ಹಿಂಡಾಲ್ಕೋ

ನಿಫ್ಟಿ ಸೂಚ್ಯಂಕದಲ್ಲಿ ನಷ್ಟ ಕಂಡ ಷೇರುಗಳು
ಟಿಸಿಎಸ್

ಹಿಂದೂಸ್ತಾನ್ ಯುನಿಲಿವರ್

ಸಿಪ್ಲಾ

ಬಜಾಜ್ ಆಟೋ

ಇನ್ಫೋಸಿಸ್

English summary

Sensex, Nifty Gains On June 5; Tata Motors Increased By 12 Percent

Sensex and nifty index record gains on June 5, 2020. Tata motors gain 12.66 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X