ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಹಾಗೂ ಐಟಿಸಿಯಂಥ ಸೂಚ್ಯಂಕದ ದೊಡ್ಡ ಮಟ್ಟದ ಷೇರುಗಳು ಇಳಿಕೆ ಕಂಡುಬಂದಿದ್ದರಿಂದ ಬುಧವಾರ (ಜನವರಿ 6, 2021) ಸೆನ್ಸೆಕ್ಸ್, ನಿಫ್ಟಿ ಇಳಿಕೆ ಕಂಡಿವೆ ಬಿಎಸ್ ಇ ಸೆನ್ಸೆಕ್ಸ್ 264 ಪಾಯಿಂಟ್ ಗಳ ಇಳಿಕೆ ಕಂಡು, 48,174 ಪಾಯಿಂಟ್ ಗಳಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 66 ಪಾಯಿಂಟ್ ಕುಸಿತ ಕಂಡು, 14,133 ಪಾಯಿಂಟ್ ನಲ್ಲಿ ವ್ಯವಹಾರ ಮುಗಿಸಿದೆ.
30 ಷೇರುಗಳ ಗುಚ್ಛ ಇರುವ ಸೆನ್ಸೆಕ್ಸ್ ನಲ್ಲಿ 13 ಷೇರುಗಳು ಏರಿಕೆ ಕಂಡಿವೆ. ಇನ್ನು ನಿಫ್ಟಿಯಲ್ಲಿ ಐಟಿ ಮತ್ತು ಎಫ್ ಎಂಸಿಜಿ ಸೂಚ್ಯಂಕಗಳು ಕುಸಿತ ಕಂಡಿವೆ. ಇನ್ನು ನಿಫ್ಟಿ ಲೋಹದ ಸೂಚ್ಯಂಕವು ಏರಿಕೆಯಲ್ಲಿ ಮುಕ್ತಾಯವಾಗಿದೆ. 1494 ಕಂಪೆನಿಯ ಷೇರುಗಳು ಇಂದು ಏರಿಕೆ ಕಂಡಿದ್ದರೆ, 1543 ಕಂಪೆನಿ ಷೇರುಗಳು ಇಳಿಕೆ ಕಂಡವು ಹಾಗೂ 128 ಕಂಪೆನಿಯ ಷೇರುಗಳ ದರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.
ಇಂದಿನ ಷೇರು ಮಾರುಕಟ್ಟೆ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಹೀಗಿದೆ:
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಪವರ್ ಗ್ರಿಡ್ ಕಾರ್ಪೊರೇಷನ್
ಶ್ರೀ ಸಿಮೆಂಟ್ಸ್
ಗೇಲ್
ಹಿಂಡಾಲ್ಕೋ
ಗ್ರಾಸಿಮ್ ಸಿಮೆಂಟ್ಸ್

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಐಟಿಸಿ
ರಿಲಯನ್ಸ್ ಇಂಡಸ್ಟ್ರೀಸ್
ಬಜಾಜ್ ಫೈನಾನ್ಸ್
ಆಕ್ಸಿಸ್ ಬ್ಯಾಂಕ್
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್


Click it and Unblock the Notifications