ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರದಂದು (ಡಿಸೆಂಬರ್ 27) ಏರಿಕೆ ದಾಖಲಿಸಿದವು. ಮೂರು ದಿನಗಳಿಂದ ಸತತವಾಗಿ ಇಳಿಕೆ ಹಾದಿಯಲ್ಲಿದ್ದ ಮಾರುಕಟ್ಟೆಯು ಭರ್ಜರಿ ಏರಿಕೆಯನ್ನೇ ದಾಖಲಿಸಿತು. ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ, ಆಕ್ಸಿಸ್ ಬ್ಯಾಂಕ್, ಇನ್ಫೋಸಿಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಲಾಭ ಕಂಡವು.
ಸೆನ್ಸೆಕ್ಸ್ ಸೂಚ್ಯಂಕವು ದಿನಾಂತ್ಯಕ್ಕೆ ವಹಿವಾಟು ಮುಗಿಸಿದಾಗ 411 ಅಂಶಗಳ ಏರಿಕೆ ಕಂಡು, 41,575 ಪಾಯಿಂಟ್ ತಲುಪಿತು. ಇನ್ನು ನಿಫ್ಟಿ 50 ಸೂಚ್ಯಂಕವು 119 ಅಂಶಗಳ ಏರಿಕೆ ದಾಖಲಿಸಿ, 12,246 ಪಾಯಿಂಟ್ ಗೆ ದಿನದ ವ್ಯವಹಾರ ಕೊನೆಗೊಳಿಸಿತು. ಇನ್ನು ನಿಫ್ಟಿ ಬ್ಯಾಂಕ್ ಸೂಚ್ಯಂಕವು 3 ಪರ್ಸೆಂಟ್ ಏರಿಕೆಯಾಯಿತು.
ನಿಫ್ಟಿ ರಿಯಾಲ್ಟಿ, ನಿಫ್ಟಿ ಬ್ಯಾಂಕ್, ನಿಫ್ಟಿ ಹಣಕಾಸು ಸೇವೆ, ನಿಫ್ಟಿ ಮಾಧ್ಯಮ, ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕಗಳು 1ರಿಂದ 1.6 ಪರ್ಸೆಂಟ್ ಏರಿದವು. ಅಂದ ಹಾಗೆ ನಿಫ್ಟಿ 50 ಸೂಚ್ಯಂಕದಲ್ಲಿ ಕೋಲ್ ಇಂಡಿಯಾ ಷೇರುಗಳು 3.5 ಪರ್ಸೆಂಟ್ ಏರಿಕೆಯಾಗಿ, ಟಾಪ್ ಗೇಯ್ನರ್ ಎನಿಸಿಕೊಂಡಿತು.

ಆಕ್ಸಿಸ್ ಬ್ಯಾಂಕ್, ಭಾರತ್ ಪೆಟ್ರೋಲಿಯಂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಯುಪಿಎಲ್ ಹಾಗೂ ಭಾರ್ತಿ ಏರ್ ಟೆಲ್ ಷೇರುಗಳು 1.9ರಿಂದ 3.3 ಪರ್ಸೆಂಟ್ ಏರಿಕೆ ಕಂಡವು.
ಆದರೆ, ಯೆಸ್ ಬ್ಯಾಂಕ್, ವಿಪ್ರೋ, ಭಾರ್ತಿ ಇನ್ಫ್ರಾಟೆಲ್, ಬ್ರಿಟಾನಿಯಾ ಇಂಡಸ್ಟ್ರೀಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟೈಟಾನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳ ಬೆಲೆಯಲ್ಲಿ ಇಳಿಕೆಯಾಯಿತು. ಒಟ್ಟಾರೆಯಾಗಿ ಮಾರುಕಟ್ಟೆ ಸಕಾರಾತ್ಮಕವಾಗಿತ್ತು. 1518 ಷೇರುಗಳು ಏರಿದರೆ, 1026 ಷೇರುಗಳು ಇಳಿಕೆಯಾದವು.
More From GoodReturns

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Stock Market Crash: ಯುದ್ಧದ ಎಫೆಕ್ಟ್, ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ 9 ಲಕ್ಷ ಕೋಟಿ ನಷ್ಟ!

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications