ಸೆನ್ಸೆಕ್ಸ್ 282 ಪಾಯಿಂಟ್ ಏರಿಕೆ; ಬಜಾಜ್ ಫೈನಾನ್ಸ್ ಸರ್ವೀಸ್ 9% ಹೆಚ್ಚಳ
ಇನ್ಫರ್ಮೇಷನ್ ಟೆಕ್ನಾಲಜಿ, ಎನ್ ಬಿಎಫ್ ಸಿ ಮತ್ತು ಎಫ್ ಎಂಸಿಜಿ ವಲಯದ ಷೇರುಗಳಲ್ಲಿ ಖರೀದಿ ಕಂಡುಬಂದಿದ್ದರಿಂದ ಶುಕ್ರವಾರದ (ನವೆಂಬರ್ 20, 2020) ಮಧ್ಯಾಹ್ನ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿಯಲ್ಲಿ ಚೇತರಿಕೆ ಕಂಡುಬಂತು. ದಿನದ ಕೊನೆಗೆ ನಿಫ್ಟಿ ಸೂಚ್ಯಂಕವು 87 ಪಾಯಿಂಟ್ ಏರಿಕೆ ಕಂಡು, 12,859.05 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ.
ಇನ್ನು ಸೆನ್ಸೆಕ್ಸ್ 282.29 ಪಾಯಿಂಟ್ ಹೆಚ್ಚಳವಾಗಿ, 43,882.25 ಪಾಯಿಂಟ್ ನೊಂದಿಗೆ ವಹಿವಾಟು ಪೂರ್ಣವಾಗಿದೆ. ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಕೊಟಕ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಸರ್ವೀಸ್ ಮತ್ತು ಎಚ್ ಡಿಎಫ್ ಸಿ ಲೈಫ್ ಷೇರುಗಳು ಹೆಚ್ಚಳವಾದವು.
62,600 ಕೋಟಿ ಕಟ್ಟಿಸಿ, ಇಲ್ಲ ಜೈಲಿಗೆ ಕಳಿಸುವಂತೆ ಸುಪ್ರೀಂಗೆ ಮನವಿ
ಸೆನ್ಸೆಕ್ಸ್ ನಲ್ಲಿ ಬಜಾಜ್ ಫೈನಾನ್ಸ್ ಸರ್ವೀಸ್, ಟೈಟಾನ್, ಬಜಾಜ್ ಫೈನಾನ್ಸ್, ಕೊಟಕ್ ಮಹೀಂದ್ರಾ ಷೇರುಗಳು ಏರಿಕೆ ಕಂಡುಬಂದವು. ರಿಲಯನ್ಸ್, ಸನ್ ಫಾರ್ಮಾ, ಒಎನ್ ಜಿಸಿ, ಇಂಡಸ್ ಇಂಡ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳು ಇಳಿಕೆ ಆದವು.
ಕೊರೊನಾ ಹಿನ್ನೆಲೆಯಲ್ಲಿ ದೆಹಲಿ- ಮುಂಬೈ ವಿಮಾನವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ ಹಿನ್ನೆಲೆಯಲ್ಲಿ ಇಂಟರ್ ಗ್ಲೋಬ್ ಏವಿಯೇಷನ್ ಷೇರಿನ ಬೆಲೆಯಲ್ಲಿ ಇಳಿಕೆ ಕಂಡುಬಂತು. ಇಂಡಸ್ ಟವರ್ ನೊಂದಿಗಿನ ವಿಲೀನ ಸಂಪೂರ್ಣವಾದ ಹಿನ್ನೆಲೆಯಲ್ಲಿ ಭಾರ್ತಿ ಇನ್ ಫ್ರಾಟೆಲ್ ಷೇರುಗಳು ಇಪ್ಪತ್ತು ಪರ್ಸೆಂಟ್ ಏರಿಕೆ ದಾಖಲಿಸಿತು.
ಗ್ಲಾಂಡ್ ಫಾರ್ಮಾ ಷೇರು ಲಿಸ್ಟಿಂಗ್ ಆಗಿದ್ದು, ದಿನದ ಕೊನೆಗೆ ಇಪ್ಪತ್ತೆರಡು ಪರ್ಸೆಂಟ್ ಗಳಿಕೆಯೊಂದಿಗೆ ವ್ಯವಹಾರ ಮುಗಿಸಿದೆ.