ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರದಂದು (ಅಕ್ಟೋಬರ್ 23, 2020) ಬೆಳಗಿನ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 221.83 ಪಾಯಿಂಟ್ ಗಳ ಏರಿಕೆಯೊಂದಿಗೆ 40,780.32 ಪಾಯಿಂಟ್ ನಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ ಸೂಚ್ಯಂಕವು 70.30 ಅಂಶಗಳ ಏರಿಕೆ ದಾಖಲಿಸಿ, 11,966.80 ಅಂಶಗಳೊಂದಿಗೆ ವ್ಯವಹಾರ ನಡೆಸಿತು.
ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಸಿಪ್ಲಾ, ಭಾರ್ತಿ ಏರ್ ಟೆಲ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು 1%ಗೂ ಹೆಚ್ಚು ಏರಿಕೆ ಕಂಡವು. ಇನ್ನು ಗೇಲ್, ಹಿಂದೂಸ್ತಾನ್ ಯುನಿಲಿವರ್, ಶ್ರೀ ಸಿಮೆಂಟ್ಸ್ ಹಾಗೂ ಬಜಾಜ್ ಆಟೋ ಕಂಪೆನಿ ಷೇರುಗಳು ಇಳಿಕೆ ದಾಖಲಿಸಿ, ವಹಿವಾಟು ನಡೆಸುತ್ತಿವೆ.

ವಿದೇಶ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾ ಬರುತ್ತಿದ್ದಾರೆ. ಜಾಗತಿಕ ಅಂಶಗಳ ಪ್ರಭಾವ, ಕೊರೊನಾ ಲಸಿಕೆ ಬೆಳವಣಿಗೆ, ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆ ಇತ್ಯಾದಿ ಅಂಶಗಳು ಷೇರು ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.


Click it and Unblock the Notifications