ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರದ (ಅಕ್ಟೋಬರ್ 19, 2020) ಬೆಳಗಿನ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡವು. ಬೆಳಗ್ಗೆ 11.10ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 431.03 ಪಾಯಿಂಟ್ ಹೆಚ್ಚಳವಾಗಿ, 40,414.01 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿದರೆ, ನಿಫ್ಟಿ ಸೂಚ್ಯಂಕವು 106.9 ಪಾಯಿಂಟ್ ಏರಿಕೆಯಾಗಿ 11,869.35 ಅಂಶದೊಂದಿಗೆ ವ್ಯವಹಾರ ನಡೆಸಿತು.
ನಿಫ್ಟಿಯಲ್ಲಿನ ಬ್ಯಾಂಕ್ ಸೂಚ್ಯಂಕವು 2% ಏರಿಕೆ ಕಂಡರೆ, ಎನರ್ಜಿ 1% ಹೆಚ್ಚಳ ಆಯಿತು. ಬಿಎಸ್ ಇ ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡವು. ಜಾಗತಿಕ ಮಟ್ಟದ ಮಾರುಕಟ್ಟೆಗಳ ಪ್ರಭಾವ, ಯುಎಸ್ ನಲ್ಲಿ ಆರ್ಥಿಕ ಪ್ಯಾಕೇಜ್ ಬಗ್ಗೆ ಭರವಸೆ ಇತ್ಯಾದಿ ಅಂಶಗಳು ಏರಿಕೆಗೆ ಪುಷ್ಟಿ ನೀಡಿದವು.

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ, ಒಎನ್ ಜಿಸಿ ಹಾಗೂ ಗೇಲ್ ಷೇರುಗಳು ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ ದಾಖಲಿಸಿದವು. 2.50%ಗೂ ಹೆಚ್ಚು ಮೇಲಕ್ಕೆ ಏರಿದವು. ಇನ್ನು ಯುಪಿಎಲ್, ಐಷರ್ ಮೋಟಾರ್ಸ್, ಹೀರೋ ಮೋಟೋಕಾರ್ಪ್, ಡಿವೀಸ್ ಲ್ಯಾಬ್ಸ್ ಹಾಗೂ ಸಿಪ್ಲಾ ಷೇರುಗಳು ಇಳಿಕೆ ಕಂಡವು.


Click it and Unblock the Notifications