ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರ (ನವೆಂಬರ್ 5, 2020) ಭರ್ಜರಿ ಏರಿಕೆ ದಾಖಲು ಮಾಡಿದೆ. ಸೆನ್ಸೆಕ್ಸ್ 724.02 ಪಾಯಿಂಟ್ ಏರಿಕೆ ಕಂಡು, 41,340.16 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 211.8 ಪಾಯಿಂಟ್ ಹೆಚ್ಚಳವಾಗಿ, 12,120.30 ಪಾಯಿಂಟ್ ಗೆ ದಿನದ ವ್ಯವಹಾರ ಕೊನೆಯಾಗಿದೆ.
ಅಂದ ಹಾಗೆ, ಜಾಗತಿಕ ಸಕಾರಾತ್ಮಕ ಪ್ರಭಾವವನ್ನು ಅನುಸರಿಸಿ, ಸತತ ನಾಲ್ಕನೇ ಸೆಷನ್ ಮಾರ್ಕೆಟ್ ಏರಿಕೆ ಕಂಡಿದೆ. 1702 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದ್ದರೆ, 899 ಕಂಪೆನಿಯ ಷೇರುಗಳು ಇಳಿಕೆ ಕಂಡಿವೆ. ಇನ್ನು 171 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು
ಹಿಂಡಾಲ್ಕೋ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಇಂಡಸ್ ಇಂಡ್ ಬ್ಯಾಂಕ್
ಟಾಟಾ ಸ್ಟೀಲ್
ಬಿಪಿಸಿಎಲ್

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಹೀರೋ ಮೋಟೋ ಕಾರ್ಪ್
ಎಚ್ ಡಿಎಫ್ ಸಿ ಲೈಫ್
ಭಾರತ ಷೇರು ಮಾರುಕಟ್ಟೆಯಲ್ಲಿ ಏರಿಕೆಗೆ ಕಾರಣವಾದ ಪ್ರಮುಖ ಅಂಶಗಳಿವು:
ಬ್ಯಾಂಕಿಂಗ್, ಐಟಿ ಷೇರುಗಳ ಗಳಿಕೆ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡನೇ ತ್ರೈಮಾಸಿಕದ ಫಲಿತಾಂಶ ಕಳೆದ ವರ್ಷದ ಇದೇ ಅವಧಿಯ ಲಾಭಕ್ಕಿಂತ ಶೇಕಡಾ ಐವತ್ತಕ್ಕೂ ಹೆಚ್ಚು ಲಾಭ ಗಳಿಸಿದೆ. ಆ ಹಿನ್ನೆಲೆಯಲ್ಲಿ ಬ್ಯಾಂಕ್ ಷೇರಿನಲ್ಲಿ ಅತ್ಯುತ್ತಮ ಏರಿಕೆ ಕಂಡಿದೆ. ಎಚ್ ಡಿಎಫ್ ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತಿತರ ಬ್ಯಾಂಕ್ ಗಳು ಸಹ ಏರಿಕೆ ಕಂಡಿವೆ. ಇನ್ನು ಯುಎಸ್ ಚುನಾವಣೆ ಫಲಿತಾಂಶ ಬರಬೇಕಿದ್ದು, ಐಟಿ ಷೇರುಗಳು ಸತತ ಎರಡನೇ ದಿನ ಏರಿಕೆ ಕಂಡಿವೆ. ಇತರ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯ ಬಲಗೊಂಡಿದ್ದು. ಇನ್ಫೋಸಿಸ್, ಎಚ್ ಸಿಎಲ್ ಮತ್ತು ಟಿಸಿಎಸ್ ಷೇರುಗಳು ಕೂಡ ಹೆಚ್ಚಳವಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ ಒಂದು ಲಕ್ಷ ಕೋಟಿ ದಾಟಿರುವುದು ಆರ್ಥಿಕತೆ ಚೇತರಿಸಿಕೊಂಡಂತೆ ಆಗಿದೆ. ಎಂಟು ತಿಂಗಳ ನಂತರ ಒಂದು ಲಕ್ಷ ಕೋಟಿ ರುಪಾಯಿ ಆದಾಯವನ್ನು ದಾಟಿದೆ. ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಕೂಡ ಚೇತರಿಕೆ ಕಂಡಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕಣದಲ್ಲಿ ಬಿಗಿ ಸ್ಪರ್ಧೆ ಇದ್ದರೂ ಜಾಗತಿಕ ಮಾರ್ಕೆಟ್ ಗಳ ಪ್ರಭಾವ ಸೇರಿಕೊಂಡು, ಭಾರತದ ಷೇರು ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ಮೂಡಿಸಿತು. ಯುಎಸ್ ಷೇರು ಮಾರುಕಟ್ಟೆ ಕೂಡ ಏರಿಕೆ ದಾಖಲಿಸಿತ್ತು.


Click it and Unblock the Notifications