ಸತತ ಎರಡನೇ ದಿನ, ಮಂಗಳವಾರ (ಸೆಪ್ಟೆಂಬರ್ 22, 2020) ಸೆನ್ಸೆಕ್ಸ್ 300 ಪಾಯಿಂಟ್ ಗಳ ಇಳಿಕೆ ಕಂಡು, ಸೋಮವಾರದಂದು 800 ಪಾಯಿಂಟ್ ಕುಸಿದಿದ್ದ ಮಾರ್ಕೆಟ್ ನಷ್ಟವನ್ನು ಮತ್ತಷ್ಟು ವಿಸ್ತರಿಸಿತು. ಜಾಗತಿಕ ಮಾರ್ಕೆಟ್ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ. ಯುರೋಪಿಯನ್ ಮಾರ್ಕೆಟ್ ಹತ್ತಿರ ಹತ್ತಿರ 1% ಏರಿಕೆ ಕಂಡಿದೆ. ಸೋಮವಾರದಂದು 4% ಕುಸಿದಿತ್ತು.
ಯುಎಸ್ ಮಾರ್ಕೆಟ್ ನಲ್ಲಿ ಡೌ ಫ್ಯೂಚರ್ಸ್ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿತು. ಆದರೆ ಭಾರತೀಯ ಮಾರ್ಕೆಟ್ ನಲ್ಲಿ ನ ದುರ್ಬಲತೆ ಪ್ರಭಾವ ಅಲ್ಲಿ ಬೀರಿತು. ಸೆನ್ಸೆಕ್ಸ್ 300 ಪಾಯಿಂಟ್ ಹತ್ತಿರ ಕುಸಿದರೆ, ನಿಫ್ಟಿ 97 ಪಾಯಿಂಟ್ ಇಳಿಕೆ ಕಂಡು, 11,153 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿತು.
ಯು.ಕೆ. ಮೂಲದ ಕಂಪೆನಿಯೊಂದಿಗೆ ಸಹಭಾಗಿತ್ವದ ಒಪ್ಪಂದ ಐದು ವರ್ಷಕ್ಕೆ ವಿಸ್ತರಣೆ ಮಾಡಿಕೊಂಡಿದ್ದರಿಂದ ಟಿಸಿಎಸ್ ಟಾಪ್ ಗೇಯ್ನರ್ ಆಗಿ 2% ಬೆಲೆ ಏರಿಕೆ ಆಯಿತು. ಮಾಧ್ಯಮ ಕ್ಷೇತ್ರದ ಷೇರುಗಳಲ್ಲಿ ಭಾರೀ ಇಳಿಕೆಯಾಯಿತು. ಟಿವಿ ಟುಡೇ, ಜೀ ಎಂಟರ್ ಟೇನ್ ಮೆಂಟ್ 6%ಗೂ ಹೆಚ್ಚು ಕುಸಿದವು. ಹಾಥ್ ವೇ ಕೇಬಲ್ ಹಾಗೂ ಡೇಟಾಕಾಮ್ ಮತ್ತು ಟಿವಿ 18 ಬ್ರಾಡ್ ಕಾಸ್ಟ್ ಷೇರುಗಳ ಬೆಲೆ ಕುಸಿತವಾದವು. ಬ್ಯಾಂಕಿಂಗ್ ಷೇರುಗಳು ದೊಡ್ಡ ಮಟ್ಟದ ಹಾನಿಯೇನೂ ಅನುಭವಿಸಲಿಲ್ಲ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು ಎರಡು ಪರ್ಸೆಂಟ್ ಕುಸಿಯಿತು. ಸಾಫ್ಟ್ ವೇರ್ ಷೇರುಗಳಾದ ಟಿಸಿಎಸ್, ಟೆಕ್ ಮಹೀಂದ್ರಾ, ಎಚ್ ಸಿಎಲ್ ಟೆಕ್ನಾಲಜೀಸ್ ಭರ್ಜರಿ ಏರಿಕೆ ಕಂಡವು.


Click it and Unblock the Notifications