ಷೇರುಪೇಟೆ ತಲ್ಲಣ: 470 ಪಾಯಿಂಟ್ ಕುಸಿದ ಸೆನ್ಸೆಕ್ಸ್, 152 ಇಳಿದ ನಿಫ್ಟಿ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಜನವರಿ 18, 2021) ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ 470.40 ಪಾಯಿಂಟ್ ಕುಸಿದು, 48,564.27 ಪಾಯಿಂಟ್ ಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 152.40 ಪಾಯಿಂಟ್ ಇಳಿಕೆ ಕಂಡು, 14,281.30 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ಈ ದಿನದ ವಹಿವಾಟಿನಲ್ಲಿ 900 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 2074 ಕಂಪೆನಿ ಷೇರುಗಳು ಕುಸಿತ ಕಂಡಿವೆ. 144 ಕಂಪೆನಿ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲ ವಲಯದ ಷೇರುಗಳು ಇಳಿಕೆ ಕಂಡವು. ಆ ಪೈಕಿ ಅತಿ ಹೆಚ್ಚು ಪ್ರಮಾಣದ, ಅಂದರೆ 4% ಕುಸಿತ ಕಂಡಿದ್ದು ಲೋಹದ ಸೂಚ್ಯಂಕ. ವಾಹನ, ಪಿಎಸ್ ಯು ಬ್ಯಾಂಕ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ 2 ಪರ್ಸೆಂಟ್ ಇಳಿದವು.
ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್ ದರ
ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ 2 ಪರ್ಸೆಂಟ್ ಇಳಿಕೆ ಕಂಡವು.
ನಿಫ್ಟಿಯಲ್ಲಿ ಹೆಚ್ಚಿನ ಏರಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್
ಯುಪಿಎಲ್ 7.42%
ರಿಲಯನ್ಸ್ 2.40%
ಟೈಟಾನ್ ಕಂಪೆನಿ 1.78%
ಎಚ್ ಡಿಎಫ್ ಸಿ ಬ್ಯಾಂಕ್ 1.12%
ಐಟಿಸಿ 0.87%
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಸ್ಟೀಲ್ -5.55%
ಟಾಟಾ ಮೋಟಾರ್ಸ್ -5.51%
ಒಎನ್ ಜಿಸಿ -4.68%
ಹಿಂಡಾಲ್ಕೋ -4.03%
ಸನ್ ಫಾರ್ಮಾ -3.78%